Advertisement
ಇಂಥದೊಂದು ವ್ಯಾಖ್ಯಾನ ಕೇಳಿ ಬಂದಿರು ವುದು ಉಡುಪಿ ಜಿಲ್ಲೆಯ ಕ್ಷೇತ್ರಗಳಲ್ಲಿ. ಪ್ರಧಾನಿ ಮೋದಿ ಉಡುಪಿಗೆ ಬಂದ ಬಳಿಕ ಆಲೆಯ ತೀವ್ರತೆ ಹೆಚ್ಚಿತ್ತು. 2013ಕ್ಕಿಂತ ಈ ಬಾರಿ ಸರಾಸರಿ ಒಂದು ಕ್ಷೇತ್ರಕ್ಕೆ 20 ಸಾವಿರದಂತೆ ಐದೂ ಕ್ಷೇತ್ರಗಳಲ್ಲಿ 1 ಲಕ್ಷ ಹೊಸ ಮತದಾರರಿದ್ದರು. ಇವರಲ್ಲಿ ಬಹುತೇಕರು ಮೋದಿಯನ್ನು ಮೆಚ್ಚಿ ಕೊಂಡಂತಿದೆ. ಮೋದಿಯವರಿಗೂ ಈ ಅಂಶ ಬಹುಶಃ ಗೊತ್ತಿತ್ತು. ಯಾಕೆಂದರೆ, ಅವರೂ ತಮ್ಮ ಭಾಷಣದಲ್ಲಿ ಕಾಮನ್ ವೆಲ್ತ್ ಬೆಳ್ಳಿ ಪದಕ ವಿಜೇತ ಗುರುರಾಜ್ ಅವರ ಬಗ್ಗೆ ಎರಡೆರಡು ಬಾರಿ ಪ್ರಸ್ತಾಪಿಸಿ ಅಭಿನಂದಿಸಿದ್ದರು. ಇಲ್ಲಿನ (ಕರಾವಳಿಯ) ಯುವಜನರೆಲ್ಲಾ ಬಹಳ ವಿದ್ಯಾವಂತರು, ಬುದ್ಧಿವಂತರು, ಪರಿಶ್ರಮಿಗಳು ಎಂದು ಹೊಗಳಿದ್ದರು.
ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆ ಗೊಳ್ಳುತ್ತಾರೆಂಬ ಗುಮಾನಿ ಕಾಂಗ್ರೆಸ್ ಪಕ್ಷ ದೊಳಗಿನ ತಲ್ಲಣಕ್ಕೆ ಕಾರಣವಾಯಿತು. ಇದೂ ಸಹ ಬಿಜೆಪಿಗೆ ಅನುಕೂಲ ಕಲ್ಪಿಸಿತು. ಹಾಗೆಯೇ ಕಾಪುವಿನಲ್ಲಿ ಪಕ್ಷದೊಳಗಿದ್ದ ಕೆಲವು ಅಸಮಾ ಧಾನಗಳು ವಿನಯಕುಮಾರ ಸೊರಕೆಗೆ ಮುಳುವಾಯಿತು ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕೆಲವು ನಾಯಕರ ಬಗೆಗೆ ಪಕ್ಷ ದೊಳಗೆ ಅಸಮಾಧಾನವಿತ್ತು ಎನ್ನಲಾಗುತ್ತಿದೆ.
Related Articles
Advertisement
ಇನ್ನು ಕುಂದಾಪುರ ಮತ್ತು ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಷ್ಟೊಂದು ಗೆಲ್ಲುವ ವಿಶ್ವಾಸ ಹೊಂದಿರಲಿಲ್ಲ. ಇದಕ್ಕೆ ಪೂರಕವಾಗಿ ಕುಂದಾ ಪುರದ ಕಾಂಗ್ರೆಸ್ ರಾಕೇಶ್ ಮಲ್ಲಿಯವರು ಹೊರಗಿನವರು ಎಂಬ ಅಪವಾದಕ್ಕೆ ಗುರಿ ಯಾದರು. ಕಾರ್ಕಳದಲ್ಲಿ ಅಭ್ಯರ್ಥಿ ಆಯ್ಕೆ ಯಲ್ಲಿ ಉಂಟಾದ ಗೊಂದಲ ಬಿಜೆಪಿಗೆ ವರದಾನ ವಾಯಿತು ಎಂಬ ವ್ಯಾಖ್ಯಾನ ಪ್ರಚಲಿತದಲ್ಲಿದೆ.