Advertisement

Udupi; ನೇಜಾರು ನಾಲ್ವರ ಕೊಲೆ ಪ್ರಕರಣ: ತ್ವರಿತ ವಿಚಾರಣೆಗೆ ಮನವಿ

07:21 AM Feb 14, 2024 | Team Udayavani |

ಉಡುಪಿ: ನೇಜಾರಿನ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದು ಮೂರು ತಿಂಗಳು ಕಳೆದಿದೆ. ಕಳೆದ ಫೆಬ್ರವರಿಯಲ್ಲಿ ಆರೋಪಿ ಪ್ರವೀಣ್‌ ಅರುಣ್‌ ಚೌಗುಲೆ ಹಾಗೂ ಕೊಲೆಯಾದವರಲ್ಲಿ ಒಬ್ಬರಾದ ಐನಾಝ್ ಅವರ ಪರಿಚಯವಾಗಿತ್ತು. ಬಳಿಕ ಒಂದು ವರ್ಷದೊಳಗೆ ಆಕೆಯ ಜತೆಗೆ ಕುಟುಂಬದ ಇತರ ಮೂವರು ದುರಂತ ಅಂತ್ಯ ಕಂಡಿದ್ದರು.

Advertisement

ಮಂಗಳೂರು ಏರ್‌ಪೋರ್ಟ್‌ ನಲ್ಲಿ ಕ್ಯಾಬಿನ್‌ ಕ್ರೂ ಆಗಿದ್ದ ಪ್ರವೀಣ್‌ ಅರುಣ್‌ ಚೌಗುಲೆ ಹಾಗೂ ಐನಾಝ್ರ ಮಧ್ಯೆ ಮತ್ತಷ್ಟು ಅನ್ಯೋನ್ಯತೆ ಬೆಳೆಯಿತು ಎಂಬುದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪತ್ನಿಯ ಅನುಮಾನ
ಪ್ರವೀಣ್‌ ಅರುಣ್‌ ಚೌಗುಲೆ ಹಾಗೂ ಐನಾಝ್ ಅವರ ಬಗ್ಗೆ ಪ್ರವೀಣ್‌ ಚೌಗುಲೆಯ ಪತ್ನಿಗೆ ಅನುಮಾನವಿತ್ತು. ಇದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ದಿನಂಪ್ರತಿ ಜಗಳವಾಗುತ್ತಿತ್ತು. ಇದನ್ನು ತಿಳಿದ ಐನಾಝ್ ಆರೋಪಿಯ ಎಲ್ಲ ರೀತಿಯ ಸಂಪರ್ಕಗಳನ್ನು ಕಡಿಮೆ ಮಾಡಲು ಆರಂಭಿಸಿದ್ದಳು. 2023ರ ಅಕ್ಟೋಬರ್‌ ಕೊನೆಯ ವಾರದಲ್ಲಿ ಐನಾಝ್ಳ ಪ್ರಿಯಕರ ಕತಾರ್‌ನಿಂದ ಊರಿಗೆ ಬಂದಿದ್ದ.ಇದರಿಂದ ಖುಷಿಗೊಂಡಿದ್ದ ಐನಾಝ್ ಅವನನ್ನು ಮದುವೆಯಾಗುವುದಾಗಿ ಆರೋಪಿಯ ಬಳಿ ತಿಳಿಸಿದ್ದಳು. ಇದರಿಂದ ಆರೋಪಿ ಸಿಟ್ಟಾಗಿದ್ದ. ಆರೋಪಿ ಫೋನ್‌ ಕರೆ ಹಾಗೂ ಸಂದೇಶವನ್ನೂ ಆಕೆ ಸ್ವೀಕರಿಸುತ್ತಿರಲಿಲ್ಲ ಎಂದು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕೊಲೆ ಮಾಡಲು ನಿರ್ಧಾರ
ಈ ಎಲ್ಲ ಬೆಳವಣಿಗೆಗಳಿಂದ ಐನಾಝ್ಳನ್ನು ದ್ವೇಷಿಸತೊಡಗಿದ ಆರೋಪಿ, ಆಕೆ ಸಿಕ್ಕರೆ ತನಗೇ ಸಿಗಬೇಕು. ಇಲ್ಲವಾದರೆ ಬೇರೆ ಯಾರಿಗೂ ಸಿಗಬಾರದೆಂದು ಕೊಲೆಗೆ ನಿರ್ಧರಿಸಿದ. ಐನಾಝ್ಳ ಸಹೋದರಿ ಅಘ್ನಾನ್‌ ಸಹ ಆರೋಪಿಯ ಕರೆಯನ್ನು ಸ್ವೀಕರಿಸದ ಕಾರಣ ದ್ವೇಷ ಮತ್ತಷ್ಟು ಹೆಚ್ಚಿತ್ತು. ಐನಾಝ್ ಒಬ್ಬಳನ್ನೇ ಕೊಲೆ ಮಾಡಿದರೆ ಅಫಾ°ನ್‌ಳು ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಯೋಚಿಸಿ ಆತ ಇಬ್ಬರನ್ನೂ ಕೊಲೆ ಮಾಡಲು ತೀರ್ಮಾನಿಸಿದ್ದ.

ಪೂರ್ವಯೋಜನೆ
ಕಳೆದ ವರ್ಷ ನ.11ರಂದು ಆರೋಪಿಯು ತನಗೆ ಮರುದಿನ ಸ್ಟಾಂಡ್‌ ಬೈ ಡ್ನೂಟಿ ಇರುವ ಸಂಗತಿ ತಿಳಿದ ಬಳಿಕ ಅಫಾ°ನ್‌ಳಿಗೆ ವಾಟ್ಸಾಪ್‌ ಕರೆ ಮಾಡಿ ಇಬ್ಬರು ಉಡುಪಿ ಮನೆಯಲ್ಲಿ ಇರುವ ಬಗ್ಗೆ ಖಚಿತ ಪಡಿಸಿಕೊಂಡಿದ್ದ. ರವಿವಾರ ಬೆಳಗ್ಗೆ ಇಬ್ಬರೇ ಇರುವಾಗ ಕೊಲೆ ಮಾಡಲು ಯೋಜಿಸಿದ. ಅದರಂತೆ ಆರೋಪಿಯು ತನ್ನ ಪತ್ನಿ ಮತ್ತು ಮಕ್ಕಳಿಗೆ ಮುರುಡೇಶ್ವರಕ್ಕೆ ಹೋಗುವ ನೆಪದಲ್ಲಿ ಉಡುಪಿಯಲ್ಲಿನ ಐನಾಝ್ ಮನೆಗೆ ಹೋಗುವ ದಾರಿ ತಿಳಿದುಕೊಂಡು ಮಂಗಳೂರಿಗೆ ವಾಪಸಾಗಿದ್ದ.

Advertisement

ಅವಮಾನ,
ಆಕ್ರೋಶದಿಂದ ಕೃತ್ಯ
ಫೆ.12ರಂದು ಮುಂಜಾನೆ ಆರೋಪಿಯು ತನ್ನ ಪತ್ನಿಗೆ ತಿಳಿಯದಂತೆ ಬೆಳಗ್ಗೆ 7.30ಕ್ಕೆ ಆಯುಧ ಸಹಿತ ಬ್ಯಾಗ್‌ ನೊಂದಿಗೆ ಮಂಗಳೂರಿನಿಂದ ಬಂದು ಬಪ್ಪನಾಡು ಬಳಿ ಕಾರು ನಿಲ್ಲಿಸಿದ್ದ. ಬಳಿಕ ಕುಂದಾಪುರದ ಕಡೆಗೆ ಖಾಸಗಿ ಬಸ್‌ ಹತ್ತಿ ಸಂತೆಕಟ್ಟೆಯಲ್ಲಿ ಇಳಿದು ಆಟೋರಿಕ್ಷಾದ ಮೂಲಕ ನೇಜಾರಿನ ಮನೆ ತಲುಪಿದ್ದ. ಇದನ್ನು ಕಂಡು ಕೋಪಗೊಂಡ ಐನಾಝ್ ಹಾಗೂ ಆರೋಪಿ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಜಗಳ ತಾರಕಕ್ಕೇರಿದಾಗ ಆರೋಪಿ ಬ್ಯಾಗ್‌ನಿಂದ ಚಾಕು ತೆಗೆದು ಐನಾಝ್ಳಿಗೆ ಚುಚ್ಚಿದ. ಅವಳ ಕೂಗು ಕೇಳà ಬಂದ ತಾಯಿಗೂ ಚಾಕುವಿನಿಂದ ಇರಿದ. ಆಗ ಹೊರಬಂದ ಅಫಾ°ನ್‌ಳಿಗೂ ಎಡಕಿವಿಗೆ ಬಲವಾಗಿ ಚುಚ್ಚಿದ್ದಾನೆ. ಹಾಗೆಯೇ ಐನಾಝ್ಳ ಅಜ್ಜಿಯ ಹೊಟ್ಟೆಗೂ ತಿವಿದ. ಆರೋಪಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಐನಾಝ್ಗೆ ಮನಸಿಗೆ ಬಂದಂತೆ ಚಾಕುವಿನಿಂದ ಇರಿದ. ಈ ಚೀರಾಟವನ್ನು ಕೇಳಿ ಓಡಿ ಬಂದ ಐನಾಝ್ಳ ತಮ್ಮನ ಎದೆಗೂ ಆರೋಪಿ ಚಾಕುವಿನಿಂದ ಚುಚ್ಚಿದ್ದ ಎಂಬುದು ದೋಷಾರೋಪ ಪಟ್ಟಿಯಲ್ಲಿದೆ.

ವಿವಿಧೆಡೆ ಆರೋಪಿ ಕರ್ತವ್ಯ
ಸಾಂಗ್ಲಿಯಲ್ಲಿ ಬಿಎಸ್‌ಸಿ ಮಾಡಿ ಬಳಿಕ ಮುಕ್ತ ವಿ ವಿ ಯಲ್ಲಿ ಬಿಎ ಪದವಿ ಪಡೆದಿದ್ದ ಆರೋಪಿ 2007ರಲ್ಲಿ ಪಿಯುಸಿ ಆಧಾರದ ಮೇಲೆ ಪರೀಕ್ಷೆ ಬರೆದು ಪುಣೆ ಸಿಟಿ ಪೊಲೀಸ್‌ ಆಗಿ ಆಯ್ಕೆಯಾಗಿ 9 ತಿಂಗಳು ತರಬೇತಿ ಮುಗಿಸಿದ್ದ. ಜತೆಗೆ ಏರ್‌ ಇಂಡಿಯಾ ಕ್ಯಾಬಿನ್‌ ಕ್ರೂé ಪರೀಕ್ಷೆ ಬರೆದು ಆಯ್ಕೆ ಪತ್ರ ಬಂದಾಗ ಪೊಲೀಸ್‌ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದ. ಕ್ಯಾಬಿನ್‌ ಕ್ಯೂ† ಆಗಿ ಕೊಚ್ಚಿನ್‌, ತಿರುವನಂತಪುರಂ ಹಾಗೂ ಹೊಸ ದಿಲ್ಲಿಯಲ್ಲಿ ಕೆಲಸ ಮಾಡಿದ್ದ. ಕೇವಲ ಗಲ್ಫ್ ರಾಷ್ಟ್ರಗಳಿಗಷ್ಟೇ ಸೇವೆ ನೀಡುತ್ತಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಕಂಪೆನಿ 2009ರಲ್ಲಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ಬೇಸ್‌ ಬಂದಿದ್ದು, ಬಳಿಕ ಆತನನ್ನು ಮಂಗಳೂರಿಗೆ ವರ್ಗಾಯಿಸಲಾಗಿತ್ತು.

ಸಾಂಗ್ಲಿಯಲ್ಲಿರುವಾಗ ರಿಯಾ ಎಂಬಾಕೆಯನ್ನು ಪ್ರೀತಿಸಿ ಮದುವೆ ಯಾಗಿದ್ದ. ಇವರಿಬ್ಬರ ಮದುವೆಗೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹಾಗಾಗಿ ಆಕೆಯನ್ನು ಮದುವೆಯಾದ ಬಳಿಕ ಹೆಸರನ್ನು ಪ್ರಿಯಾ ಎಂದು ಬದಲಾಯಿಸಲಾಗಿತ್ತು.

ದಾಖಲಾದ ಪ್ರಕರಣಗಳು
ಆರೋಪಿಯ ವಿರುದ್ಧ ಅಪರಾಧದ ಸಾಕ್ಷ್ಯಗಳ ನಾಶಕ್ಕೆ ಪ್ರಯತ್ನ ಅಥವಾ ಅಪರಾಧಿಯನ್ನು ರಕ್ಷಿಸಲು ಸುಳ್ಳು ಸುದ್ದಿ ನೀಡಿದ ಬಗ್ಗೆ, ಮರಣದಂಡನೆಗೆ ಗುರಿ ಮಾಡುವಂತಹ ಅಪರಾಧ ಮಾಡಿರುವುದು, ಗೃಹ ಅತಿಕ್ರಮಣ, ಕೊಲೆಗೆ ಶಿಕ್ಷೆ, ಕೊಲೆ ಯತ್ನ, ಅಪಾಯಕಾರಿ ಆಯುಧಗಳಿಂದ ಅಥವಾ ಸಾಧನಗಳಿಂದ ಸ್ವಯಿಚ್ಛೆಯಿಂದ ಗಾಯಗೊಳಿಸಿರುವುದಕ್ಕೆ ಸಂಬಂಧಿಸಿ ದಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.ಎಲ್ಲ ಸಾಕ್ಷ್ಯ, ಎಫ್ಎಸ್‌ಎಲ್‌ ವರದಿಯನ್ನು ಕ್ರೋಢೀಕರಿಸಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಗಂಭೀರ ಪ್ರಕರಣವಾದ ಕಾರಣ ತ್ವರಿತ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.
-ಡಾ| ಅರುಣ್‌ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next