Advertisement
16585 ರೈಲು ಜ.17ರಂದು ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಕುಂದಾಪುರದವರೆಗೆ ಮಾತ್ರ ಸಂಚರಿಸಲಿದೆ. ಕುಂದಾಪುರದಿಂದ ಮುರುಡೇಶ್ವರಕ್ಕೆ ರೈಲು ಸೇವೆ ಇರುವುದಿಲ್ಲ. ಹಾಗೆಯೇ 16586 ರೈಲು ಜ.18ರಂದು ಕುಂದಾಪುರದಿಂದ ಬೆಂಗಳೂರಿಗೆ ಹೊರಡಲಿದೆ. ಮುರುಡೇಶ್ವರದಿಂದ ಕುಂದಾಪುರದ ತನಕ ಈ ರೈಲು ಸೇವೆ ಇರುವುದಿಲ್ಲ. 06076 ಪನ್ವೆಲ್-ನಾಗರಕೊçಲಿ ರೈಲು ಜ.17ರಂದು ಮಡಗಾಂವ್-ಕುಮಟಾ ಮಧ್ಯೆ 3 ಗಂಟೆ ವಿಳಂಬವಾಗಲಿದೆ. 22114 ಕೋಚುವೇಲಿ-ಲೋಕಮಾನ್ಯ ತಿಲಕ ಎಕ್ಸ್‌ಪ್ರೆಸ್ ರೈಲು ಜ.18ರಂದು ಮಂಗಳೂರು ಜಂಕ್ಷನ್‌ನಲ್ಲಿ 60 ನಿಮಿಷ ವಿಳಂಬವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು ಸೆಂಟ್ರಲ್‌ನಿಂದ ಮಡಗಾಂವ್ ಮಧ್ಯೆ ವಂದೇಭಾರತ್ ರೈಲು ಸಂಚಾರ ಮಾಡುತ್ತಿರುವುದರಿಂದ ಮಂಗಳೂರು ಸೆಂಟ್ರಲ್-ಮಡಗಾಂವ್ ಮಧ್ಯೆ ನಿತ್ಯ ಸಂಚರಿಸುವ (06601/06602) ರೈಲು ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ನಿತ್ಯ ಮಧ್ಯಾಹ್ನ 1.50ಕ್ಕೆ ಮಡಗಾಂವ್‌ನಿಂದ ಹೊರಡುವ ಈ ರೈಲು ಇನ್ನು ಮುಂದೆ ಮಧ್ಯಾಹ್ನ 2.10ಕ್ಕೆ ಹೊರಡಲಿದೆ. ಸಂಜೆ 6ಕ್ಕೆ ಬಾರಕೂರಿಗೆ ಬರುತ್ತಿದ್ದ ರೈಲು ಸಂಜೆ 6.04ಕ್ಕೆ ಬಾರಕೂರಿಗೆ ಬರಲಿದೆ. ಅನಂತರದ ಸಮಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮೊದಲಿನ ಸಮಯದಂತೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಹೊರಡುವ ಸಮಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮಡಗಾಂವ್‌ಗೆ ಮಧ್ಯಾಹ್ನ 1.10ರ ಬದಲಿಗೆ 1.35ಕ್ಕೆ ತಲುಪಲಿದೆ ಎಂದು ಪ್ರಕಟನೆ ತಿಳಿಸಿದೆ.