Advertisement
ಜನರ ನಿರಂತರ ಒತ್ತಾಯದ ಅನಂತರ ಕೆಲವೆಡೆ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಗುತ್ತಿಗೆದಾರರು ಕೈಗೊಂಡಿದ್ದರೂ ಇಂದ್ರಾಳಿಯ ಬಳಿ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿರುವು ದರಿಂದಾಗಿ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ. ಉಡುಪಿ ಯಿಂದ ಮಣಿಪಾಲಕ್ಕೆ ಹೋಗುವಾಗ ಇಂದ್ರಾಳಿಯ ರೈಲ್ವೇ ನಿಲ್ದಾಣಕ್ಕೆ ಹೋಗಬೇಕೆಂದಿದ್ದರೆ ಎತ್ತರದಿಂದ ಇಳಿಜಾರಿಗೆ ಇಳಿಯುವ ಸಂಕಷ್ಟ. ಅತ್ತ ಕಡೆ ಶ್ರೀನಿವಾಸ ನಗರಕ್ಕೆ ತೆರಳುವ ವಾಹನಗಳ ಸಾಲು. ಇಂದ್ರಾಳಿ ಬಳಿ ಸ್ವಲ್ಪ ಮುಂದಕ್ಕೆ ಹೋದರೆ ಎಡಬದಿ ಯಕ್ಷಗಾನ ಕೇಂದ್ರಕ್ಕೆ ಹೋಗುವ ರಸ್ತೆ… ಹೀಗೆ ಇವೆಲ್ಲವುಗಳಿಗೆ ತೊಡಕಾಗಿರುವುದು ರೈಲ್ವೇ ಬ್ರಿಡ್ಜ್. ಇದನ್ನು ವಿಸ್ತರಿಸಿದರೆ ಮಾತ್ರ ಈ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.ರಸ್ತೆಗಳ ಏರಿಳಿತ ತಿಳಿಯದೆ ಸವಾರರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇದರಿಂದಾಗಿ ಪ್ರತಿನಿತ್ಯ ಸಣ್ಣಪುಟ್ಟ ಅಪಘಾತಗಳು ಇಲ್ಲಿ ತಪ್ಪಿದ್ದಲ್ಲ. ರಸ್ತೆ ಮಧ್ಯದಲ್ಲಿ ವಾಹನಗಳು ಕೆಟ್ಟುಹೋಗುವ ಘಟನೆಗಳೂ ಹಲವಾರು ಬಾರಿ ನಡೆದಿವೆ. ಇಂದ್ರಾಳಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಪಾದಚಾರಿಗಳಿಗೆ ಪ್ರತಿನಿತ್ಯ ಧೂಳಿನ ಸಿಂಚನವಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಮಗಿಸಿದರೆ ಮಾತ್ರ ಇಲ್ಲಿ ಸುಗಮ ಸಂಚಾರ ಉಂಟಾಗಲು ಸಾಧ್ಯವಿದೆ. ಅನುಮತಿ ಸಿಕ್ಕರೆ ಶೀಘ್ರ ಪೂರ್ಣ
ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಇಂದ್ರಾಳಿ ರೈಲ್ವೇ ಬಳಿ ಮತ್ತೂಂದು ಸೇತುವೆ ನಿರ್ಮಿಸುವ ಪ್ರಸ್ತಾವನೆ ಹೆದ್ದಾರಿ ಇಲಾಖೆಯದ್ದು. ಇದಕ್ಕೆ ರೈಲ್ವೇ ಇಲಾಖೆಯ ಒಪ್ಪಿಗೆ ಬೇಕಾಗುತ್ತದೆ. ಒಪ್ಪಿಗೆ ಸಿಕ್ಕ ತತ್‌ಕ್ಷಣದಿಂದಲೇ ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.
-ಮಂಜುನಾಥ್, ಎಂಜಿನಿಯರ್, ಹೆದ್ದಾರಿ ಇಲಾಖೆ