ತಪ್ಪು ಮಾಡುವುದು ಸಹಜವೇ, ಇದನ್ನೇ ಸರಿ ಎನ್ನುವುದು ಮಹಾಪಾಪಕರ. ಕಳ್ಳನಾದರೂ “ಕಳ್ಳತನವೇ ಪರಮಗುರಿ’ ಎಂದು ಹೇಳಲಿ. “ಕಳ್ಳತನ’ ಎನ್ನುವುದನ್ನು ಅಪಮೌಲ್ಯ ಎಂದು ಎಲ್ಲರೂ ತಿಳಿದಿದ್ದಾರೆ. ಇದು ಅಪಮೌಲ್ಯವಲ್ಲ ಎನ್ನುವುದು ತಪ್ಪು. “ಮೌಲ್ಯ’ದ ಅಪಮೌಲಿÂàಕರಣವೇ ಬಹು ದೊಡ್ಡ ತಪ್ಪು. ಬದುಕಿದವರ ಬಗ್ಗೆ ದುಃಖಪಡುವವನಿಗೆ ಮಾತ್ರ ಸತ್ತವರ ಬಗ್ಗೆ ದುಃಖಪಡುವ ಅಧಿಕಾರವಿರುತ್ತದೆ. ಹುಟ್ಟಿದ ಬಳಿಕ ಸಾವಿನ ಹತ್ತಿರ ಹತ್ತಿರ ಬರುತ್ತಲೇ ಇರುತ್ತೇವೆ. ಹುಟ್ಟದೆ ಇದ್ದರೆ ಮಾತ್ರ ಸಾವಿರುವುದಿಲ್ಲ. ಸಾವಿನ ಹತ್ತಿರ ಹೋಗುವುದೂ ಸಾವೇ. ಸಾವಿನ ಹತ್ತಿರ ಹೋಗುವಾಗ ದುಃಖವಿಲ್ಲದವರು ಸಾವಿಗೆ ಏಕೆ ದುಃಖಪಡುವುದು. ಪಂಡಿತರೆಂದರೆ ಬಹಳ ಓದಿಕೊಂಡವರೆಂದು ಅರ್ಥವಲ್ಲ, ಭಾರೀ ಮಾತನಾಡುವವರೆಂದೂ ಅರ್ಥವಲ್ಲ. “ಪಂಡ’ = ವಸ್ತು ಸಾಕ್ಷಾತ್ಕಾರ, ವಸ್ತುಸ್ಥಿತಿ ಅರಿತುಕೊಂಡವರು ಎಂದರ್ಥ.”ಜಾತಸ್ಯ ಮರಣಂ ಧ್ರುವಂ’ ಎಲ್ಲರೂ ಸಾಯುವವರೇ. ನಮ್ಮ ದುಃಖಕ್ಕೆ ಕಾರಣವೆಂದರೆ ನಮಗೆ ಗೊತ್ತಿಲ್ಲದೇನೇ “ನಾವು ಶಾಶ್ವತ’ ಎಂದು ತಿಳಿದುಕೊಳ್ಳುವುದು. ಇದಕ್ಕೆ ಕಾರಣ ಅಜ್ಞಾನ. ಇದು ಗಟ್ಟಿಗಟ್ಟಿಯಾಗುತ್ತಲೇ ಇರುತ್ತದೆ. ಅಹನ್ಯಹನಿ ಭೂತಾನಿ… (ಮಹಾಭಾರತ) ಎಂಬಂತೆ ಪ್ರತಿಯೊಬ್ಬರೂ ಯಮನ ಲೋಕಕ್ಕೆ ಹೋಗುವವರೇ. ಆದರೆ ಪ್ರತಿಯೊಬ್ಬರೂ ಶಾಶ್ವತ ಎಂದು ತಿಳಿದುಕೊಳ್ಳುವುದೇ ಮಾಯೆ. “ಮಾಯೆ’ ವಸ್ತು ಸ್ಥಿತಿಯನ್ನು ಅರ್ಥವಾಗದಂತೆ ಮಾಡುತ್ತದೆ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811