Advertisement
ಶ್ರೀ ಕೃಷ್ಣಮಠ, ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಮಾಸೋತ್ಸವ, ಸಪ್ತೋತ್ಸವದ ಪ್ರಯುಕ್ತ ಸೋಮವಾರ ಶ್ರೀ ಕೃಷ್ಣಾಷ್ಟಮಿಯಂದು ರಥಬೀದಿಯಲ್ಲಿ ಮೃಣ್ಮಯ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿ, ಅನಂತರ ರಥಬೀದಿ ಸುತ್ತಿ ರಾಜಾಂಗಣಕ್ಕೆ ಆಗಮಿಸಿ, ಅಲ್ಲಿ ಸಭಾ ಕಾರ್ಯಕ್ರಮವನ್ನು “ವಸುದೇವ ಶ್ರೀ ಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ಹೋಗುವಾಗ ಶೇಷ ಶಯನ ಅನುಗ್ರಹಿಸುತ್ತಿರುವ ಪ್ರತಿಕೃತಿ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
Related Articles
Advertisement
ವಿ. ಪರಿಷತ್ ಸದಸ್ಯ ಬೋಜೇಗೌಡ, ಸು. ಕೋ. ಹಿರಿಯ ವಕೀಲ ಬಾಲರಾಜ್, ಗುಜರಾತ್‌ನ ಮಾಜಿ ಸಂಸದ ಸಾಗರ್ ರಾಯ್ಕರ್, ಬೆಂಗ ಳೂರಿನ ಆರೆಸ್ಸೆಸ್‌ನ ಹಿರಿಯರಾದ ಮಿಲಿಂದ್ ಗೋಖಲೆ, ಮುಂಬಯಿ ಉದ್ಯಮಿ ಗುರುಪ್ರಸಾದ್, ಅರುಣ್ ಕುಮಾರ್ ಉಪಸ್ಥಿತರಿದ್ದರು. ಶ್ರೀಮಠದ ರಮೇಶ್ ಭಟ್ ಸ್ವಾಗತಿಸಿ, ಡಾ| ಗೋಪಾಲಾಚಾರ್ಯ ನಿರೂಪಿಸಿದರು.
ಭಂಡತನದ ಚರ್ಚೆ ಕೇಳಲಷ್ಟೇ ಚಂದ, ಅನುಷ್ಠಾನ ಅಸಾಧ್ಯಕಿರುತೆರೆ ನಿರ್ದೇಶಕ ಎಸ್.ಎನ್. ಸೇತುರಾಮ್ ಅವರು ಕೃಷ್ಣನ ವ್ಯಕ್ತಿತ್ವದ ಪ್ರಸ್ತುತತೆ ಬಗ್ಗೆ ಉಪನ್ಯಾಸ ನೀಡಿ, ಹಿಂದೂ ಧರ್ಮ, ದೇವತೆಗಳ ವಿಷಯದಲ್ಲಿ ಭಂಡತನದ ಚರ್ಚೆ ಕೇಳಲು ಚೆನ್ನಾಗಿರುತ್ತದೆ. ಅದರಂತೆ ಬದುಕಲು ಕಷ್ಟ. ಅದು ಕೇವಲ ಮನೋರಂಜನೆ ಅಷ್ಟೆ. ಭಾರತದ ಸಂಪತ್ತನ್ನು ಹುಡುಕಿ ವಿದೇಶಿಗರು ಇಲ್ಲಿಗೆ ಬಂದಿದ್ದರು. ನಮ್ಮಲ್ಲಿ ಎಲ್ಲ ಸಂಪತ್ತು ಇದ್ದುದರಿಂದ ನಾವು ಎಲ್ಲಿಗೂ ಹೋಗಿಲ್ಲ. ಆದರೆ ಇಲ್ಲಿಗೆ ಬಂದರು ನಮ್ಮಲ್ಲಿ ನಾವೇ ಹೊರಗಿನವರು ಎಂಬ ಭಾವ ತುಂಬಿ ಹೋಗಿದ್ದರಿಂದ ಪೂರ್ವಜರ ರೇಖೆಯನ್ನು ಮರೆತಿದ್ದೇವೆ ಎಂದು ವಿಶ್ಲೇಷಿಸಿದರು.