Advertisement

ಉಡುಪಿ ಶಾಸಕ ಕೆ. ರಘುಪತಿ ಭಟ್ ಗೆ ಭ್ರಾತೃ ವಿಯೋಗ

10:36 AM Feb 10, 2021 | Team Udayavani |

ಮಣಿಪಾಲ: ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರ ಸಹೋದರ ಸಾಂಗ್ಲಿಯ ಹೋಟೆಲ್ ಉದ್ಯಮಿ ಕೆ ರವೀಂದ್ರ ಬಾರಿತ್ತಾಯ(60 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಬುಧವಾರ (ಫೆ.10) ನಸುಕಿನ ಜಾವ ಸಾಂಗ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Advertisement

ಮೃತರು ತಾಯಿ, ಮೂವರು ಸಹೋದರರು, ಪತ್ನಿ , ಇಬ್ಬರು ಪುತ್ರಿಯರು ಓರ್ವ ಪುತ್ರನನ್ನು ಅಗಲಿದ್ದಾರೆ

ಶ್ರೀಯುತರು ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಸಂದರ್ಭ ವಿಶೇಷ ಸೇವೆ ಸಲ್ಲಿಸಿದ್ದರು.

ರವೀಂದ್ರ ಬಾರಿತ್ತಾಯರ ನಿಧನಕ್ಕೆ ಕರಂಬಳ್ಳಿ ವೇಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ , ಕರಂಬಳ್ಳಿ ಫ್ರೆಂಡ್ಸ್, ವೇಂಕಟರಮಣ ಭಜನಾ ಮಂಡಳಿಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next