Advertisement

Udupi: ಜ.1-15 : ರಾಜಾಂಗಣದಲ್ಲಿ ಕೈಮಗ್ಗ ಸೀರೆಗಳ ಪ್ರದರ್ಶನ, ಮಾರಾಟ ಮೇಳ

07:35 PM Dec 31, 2024 | Team Udayavani |

ಉಡುಪಿ: ಶ್ರೀ ಕೃಷ್ಣಮಠ ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ರಾಜಮಾತೆ ಅಹಲ್ಯಾಬಾೖ ಹೋಳ್ಕರ್‌ ಜನ್ಮತ್ರಿಶತಾಬ್ಧಿ ಆಚರಣೆ ಸಮಿತಿ ಹಾಗೂ ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ರಾಜಾಂಗಣದಲ್ಲಿ ಜ.1ರಿಂದ 15ರವರೆಗೆ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ.

Advertisement

ಜ.1ರ ಬೆಳಗ್ಗೆ 10ಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮೇಳ ಉದ್ಘಾಟಿಸಲಿದ್ದಾರೆ. ಶಾಸಕ ಯಶ್‌ಪಾಲ್‌ ಸುವರ್ಣ, ಕೆಂಎಸಿ ಮಕ್ಕಳ ತಜ್ಞವೈದ್ಯೆ ಡಾ| ಪುಷ್ಪಾ ಕಿಣಿ ಭಾಗವಹಿಸಲಿದ್ದಾರೆ.

ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್‌ ಅವರಿಂದ ಏಳ್ಗೆ ಕಂಡ ಮಾಹೇಶ್ವರಿ ಸೀರೆಗಳು ಈ ಮೇಳದ ವಿಶೇಷ ಆಕರ್ಷಣೆಯಾಗಿದೆ.

ಜತೆಗೆ ಉಡುಪಿ, ಇಳಕಲ್‌, ಕೋಲ್ಕತ್ತಾ, ವೆಂಕಟಗಿರಿ, ಮಧುಬನಿ, ಬಿಹಾರದ ಕಸೂತಿ, ಕೈ ನೇಯ್ಗೆ, ಸುಜನಿ ಮೊದಲಾದ ಸೀರೆಗಳು, ನಾನಾ ಬಗೆಯ ದಿರಿಸುಗಳು ಪ್ರದರ್ಶನದಲ್ಲಿ ಇರಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next