Advertisement
ಆರೋಗ್ಯ ಇಲಾಖೆಯ ಮಾಹಿತಿ ಅನ್ವಯ ಜಿಲ್ಲೆಯಲ್ಲಿ ಎ.29ರಂದು 2,359 ಪ್ರಕರಣ ಸಕ್ರಿಯವಾಗಿದೆ. ಅದರಲ್ಲಿ 1,650 ಸೋಂಕಿತರು ಹೋಂ ಐಸೋಲೇಶನ್‌ನಲ್ಲಿ ಇದ್ದಾರೆ. ಸೋಂಕಿನ ಯಾವುದೇ ಲಕ್ಷಣಗಳಿಲ್ಲದವರು ಮನೆಯಲ್ಲಿಯೇ ಆರಾಮವಾಗಿ ಪ್ರತ್ಯೇಕ ವಾಗಿಯೇ ವಿಶ್ರಾಂತಿ ಪಡೆಯುವಂತೆ ಹಾಗೂ ಅವರ ಆರೋಗ್ಯದ ಬಗ್ಗೆ ಇಲಾಖೆ ನಿಗಾ ವಹಿಸುತ್ತಿದೆ.
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಲ್ಲಿ ಕೊರೊನಾ ಪ್ರಕರಣ ವರದಿ ಯಾಗುತ್ತಿದೆ. ಎ.29ರಂದು ಕುಂದಾಪುರ ಹಾಗೂ ಕಾರ್ಕಳ ಮೂಲದ ವಯಸ್ಕ ರಿಬ್ಬರು ವಿವಿಧ ರೋಗದಿಂದ ಬಳಲು ತ್ತಿರುವವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಕಳೆದ ಆಗಸ್ಟ್ – ಸೆಪ್ಟೆಂಬರ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಅಧಿಕವಿರುವ ಸಂದರ್ಭ ಮರಣ ಪ್ರಕರಣ ಶೇ. 1 ಇತ್ತು. ಈ ಬಾರಿ ನಿತ್ಯ 500ರಿಂದ 660 ಪ್ರಕರಣಗಳು ದಾಖಲಾಗುತ್ತಿದ್ದರೂ, ಮರಣ ಪ್ರಕರಣ ಶೇ. 0.6 ಇದೆ. ಇದು ನಿಜಕ್ಕೂ ಜಿಲ್ಲೆಯ ಜನರಲ್ಲಿ ನೆಮ್ಮದಿ ತರಿಸುವ ಸಂಗತಿ. ಶೇ. 93ರಷ್ಟು ಗುಣಮುಖ
ಜಿಲ್ಲೆಯಲ್ಲಿ ಜನವರಿ ಅಂತ್ಯದ ವರೆಗೆ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಶೇ.99.22 ಇತ್ತು. ಆದರೆ ಫೆಬ್ರವರಿಯಿಂದ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಶೇ. 93ಕ್ಕೆ ಇಳಿಕೆಯಾಗಿದೆ. ಆರೋಗ್ಯ ಇಲಾಖೆ ಪ್ರಕಾರ ನಿತ್ಯ 500ರ ವರೆಗೆ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಸಕ್ರಿಯ ಪ್ರಕರಣ ಹೆಚ್ಚಾಗುತ್ತಿದ್ದು, ಇದರಿಂದ ಗುಣಮುಖರಾಗುವವರ ಶೇಕಡಾವಾರಿ ನಲ್ಲಿ ಇಳಿಕೆ ಕಂಡು ಬಂದಿದೆ.
Related Articles
ಜಿಲ್ಲೆಯಲ್ಲಿ ಜನರಿಗೆ ಕೋವಿಡ್ ಸೋಂಕಿನ ಲಕ್ಷಣಗಳಿರುವ ಪ್ರಕರಣ ಹೆಚ್ಚಾಗುತ್ತಿದೆ. ಶೇ.30ರಷ್ಟು ಪ್ರಕರಣಗಳಲ್ಲಿ ಕೋವಿಡ್ ಲಕ್ಷಣಗಳಿದ್ದು ಹಾಗೂ ಶೇ. 70ರಷ್ಟು ಪ್ರಕರಣಗಳಲ್ಲಿ ಲಕ್ಷಣವೇ ಇಲ್ಲ. ಕಳೆದ ಬಾರಿ ಲಕ್ಷಣವಿರುವ ಪ್ರಕರಣ ಸಂಖ್ಯೆ ಶೇ.30ಕ್ಕಿಂತ ಕಡಿಮೆ ಇತ್ತು.
Advertisement
ಇಲಾಖೆ ಸನ್ನದ್ಧ ಪ್ರಸ್ತುತ 42 ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ. ಆಸ್ಪತ್ರೆಗಳ ಸಂಖ್ಯೆ ಇನ್ನಷ್ಟು ಹೆಚ್ಚಳ ಮಾಡಬಹದು. ಒಟ್ಟು 2,000 ಹಾಸಿಗೆಗಳಿದ್ದು, 500 ಹಾಸಿಗೆಗಳು ಬಳಕೆಯಲ್ಲಿವೆ. ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಐಸಿಯು ಕೊಠಡಿ ಸಿದ್ಧಪಡಿ ಸಿದ್ದು, ಅಗತ್ಯಕ್ಕೆ ತಕ್ಕಂತೆ ಸಿಬಂದಿಯನ್ನು ನೇಮಕ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳ ಶೇ. 75ರಷ್ಟು ಹಾಸಿಗೆಗಳನ್ನು ಸರಕಾರಕ್ಕೆ ನೀಡಲಾಗಿದೆ. 2 ಸಾವಿರ ಹೋಂ ಕೇರ್ ಮೇ ತಿಂಗಳಿನಲ್ಲಿ ಕೊರೊನಾ ಪ್ರಕರಣ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುವುದರಿಂದ ಅಗತ್ಯ ಇರುವ ಸಿದ್ಧತೆ ಮಾಡಿಕೊಂಡಿದೆ. ಅದರ ಭಾಗವಾಗಿ ಜಿಲ್ಲೆಯಲ್ಲಿ 2,000 ಬೆಡ್‌ಗಳ ಹೋಮ್ ಕೇರ್ ಸೆಂಟರ್ ನಿರ್ಮಿಸಲಾಗಿದೆ. ಉಡುಪಿ, ಕುಂದಾಪುರ, ಬ್ರಹ್ಮಾವರ, ಹೆಬ್ರಿ, ಕಾಪು, ಕಾರ್ಕಳ, ಬೈಂದೂರು ತಾಲೂಕಿನ ನರ್ಸಿಂಗ್ ಹೋಂ, ಹಾಸ್ಟೆಲ್, ಗೆಸ್ಟ್ ಹೌಸ್, ಗ್ರಂಥಾಲಯದಲ್ಲಿ ಅಗತ್ಯವಿರುವ ಹಾಸಿಗೆ ಹಾಗೂ ವೈದ್ಯಕೀಯ ಸವಲತ್ತುಗಳನ್ನು ಅಳವಡಿಸ ಲಾಗುತ್ತಿದೆ. ಉಡುಪಿಯ ಡಾ| ಟಿ.ಎಂ.ಎ. ಪೈ ಆಸ್ಪತ್ರೆಯನ್ನು ಮತ್ತೆ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಮಣಿಪಾಲ ಮಾಹೆ ಒಪ್ಪಿಗೆ ಸೂಚಿಸಿದೆ.