Advertisement
ಜಿಲ್ಲೆಯ ಒಟ್ಟು ಕುಟುಂಬಗಳ ಶೇ.85ರಷ್ಟು ಬಿಪಿಎಲ್ ಕಾರ್ಡ್ ಇದೆ. 1.97 ಲಕ್ಷ ಬಿಪಿಎಲ್ ಕಾರ್ಡ್ ಇರುವುದರಿಂದ ಅನರ್ಹರೂ ಕಾರ್ಡ್ ಪಡೆದಿರುವ ಸಾಧ್ಯತೆ ಇದೆ. ಹೀಗಾಗಿ 6 ತಿಂಗಳಿಂದ ಯಾರು ಪಡಿತರ ತೆಗೆದುಕೊಂಡಿಲ್ಲವೋ ಅವರ ಕಾರ್ಡ್‌ಗಳನ್ನು ಆರಂಭದಲ್ಲಿ ಮುಟ್ಟುಗೋಲು ಹಾಕುತ್ತೇವೆ. ಹಾಗೆಯೇ 1.20 ಲಕ್ಷಕ್ಕಿಂತ ಅಧಿಕ ಆದಾಯ ಇರುವ ಮತ್ತು ಮನೆಯ ಪರಿಸ್ಥಿತಿಯನ್ನು ಅವಲೋಕಿಸಿಯೇ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತದೆ.
ಸಂತೆಕಟ್ಟೆ ಓವರ್‌ಪಾಸ್ ಕಾಮಗಾರಿ ಈಗಾಗಲೇ ಪುನರ್ ಆರಂಭಗೊಂಡಿದೆ. ಈ ಸಂಬಂಧ ಹೆದ್ದಾರಿ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. 2025ರ ಮಾರ್ಚ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಸದ್ಯ ಬಂಡೆ ಒಡೆಯುವ ಕಾರ್ಯ ನಡೆಯುತ್ತಿದೆ. ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
Related Articles
ಜಿಲ್ಲೆಯಲ್ಲಿ ಈವರೆಗೂ ಸುಮಾರು 235 ಕೋ.ರೂ. ಮಳೆ ಹಾನಿ ಸಂಭವಿಸಿದೆ. ಇದರ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ರಸ್ತೆ, ಶಾಲೆ, ಅಂಗನವಾಡಿ ಕಟ್ಟಡಗಳ ತುರ್ತು ದುರಸ್ತಿಗೆ ಎನ್‌ಡಿಆರ್‌ಎಫ್ ನಿಧಿಯಡಿ ಜಿಲ್ಲಾಧಿಕಾರಿ ಪಿ.ಡಿ. ಖಾತೆಯಿಂದ 3.50 ಕೋ.ರೂ. ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಕಾಮಗಾರಿಯೂ ಆರಂಭವಾಗಿದೆ. ಗ್ರಾಮೀಣ ರಸ್ತೆಗಳ ಗುಂಡಿ ಮುಚ್ಚುವುದು ಹಾಗೂ 85 ಶಾಲೆ, ಅಂಗನವಾಡಿಗಳ ದುರಸ್ತಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
Advertisement