Advertisement
ಅಷ್ಟಾದರೂ ಉಡುಪಿ ಜಿಲ್ಲೆಯ ಹಲವು ಕಡೆಗ ಳಲ್ಲಿ ಬಣ್ಣ ಬಣ್ಣದ ಗೋಬಿ ಮಂಜೂರಿ, ಕಬಾಬ್ ಗಳ ಮಾರಾಟ ನಡೆಯುತ್ತಿದ್ದು, ಇವುಗಳ ಮೇಲೆ ನಿಗಾ ಇಡಬೇಕಾದ ಅಗತ್ಯತೆ ಇದೆ.
Related Articles
Advertisement
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006ರ ಅಡಿಯಲ್ಲಿ ನಿಷೇಧಿತ ವಿಷಕಾರಿ ಬಣ್ಣ ಬಳಕೆಗೆ ಏಳು ವರ್ಷಗಳಿಂದ ಜೀವಾವಧಿ ಶಿಕ್ಷೆ ವರೆಗೆ ನೀಡಬಹುದು. ಜತೆಗೆ 10 ಲಕ್ಷ ರೂ.ವ ರೆಗೆ ದಂಡ ಕೂಡಾ ವಿಧಿಸಬಹುದು. ಅಂಥ ಕಠಿಣ ಕ್ರಮಗಳನ್ನು ಕೈಗೊಂಡರೆ ವಿಷ ಬಣ್ಣಗಳ ಬಳ ಕೆಗೆ ಕಡಿವಾಣ ಹಾಕಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.
ಮಳೆಗಾಲದಲ್ಲಿ ಹೆಚ್ಚು ಬೇಡಿಕೆಮಳೆಗಾಲದಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿಗಳು, ಬಿಸಿ ಕಬಾಬ್, ಗೋಬಿ ಮಂಚೂರಿಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಹೀಗಾಗಿ ಜನರನ್ನು ಆಕರ್ಷಿ ಸಲು ಬಣ್ಣಗಳನ್ನು ಬಳಸುವುದು ಹೆಚ್ಚಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಲು ಮುಂದೆ ಬರುವುದಿಲ್ಲ. ಅಧಿಕಾರಿಗಳು ಒಮ್ಮೆ ತಪಾಸಣೆ ಮಾಡಿದ ಮೇಲೆ ಮರಳಿ ಬರುವುದಿಲ್ಲ ಎಂಬ ಧೈರ್ಯವೂ ಅಂಗಡಿಯವರಿಗೆ ಇರುತ್ತದೆ.
ಉಡುಪಿ, ಮಣಿಪಾಲ, ಮಲ್ಪೆ, ಸಹಿತ ರಸ್ತೆಬದಿಯಲ್ಲಿ ಕರಿದ ತಿನಿಸುಗಳು ಅಪಾರ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದರೂ ಆರೋಗ್ಯ ಇಲಾಖೆಯಾಗಲಿ ಆಹಾರ ಸುರಕ್ಷಾ ಇಲಾಖೆಯಾಗಲಿ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ತಳ್ಳುಗಾಡಿ, ಬೀದಿಬದಿ ವ್ಯಾಪಾರ, ಬೀಚ್, ಪಾರ್ಕ್‌ಗಳ ಬದಿ ತಯಾರಿಸುವ ಫಾಸ್ಟ್ ಫುಡ್ ತಿನಿಸುಗಳಲ್ಲಿ ವಿಪರೀತ ಬಣ್ಣ ಬಳಕೆ ಮಾಡುವುದು
ಬೆಳಕಿಗೆ ಬರುತ್ತಿವೆ. ಹೀಗಾಗಿ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಸಾರ್ವಜನಿಕರು. ಯಾವ ತಿನಿಸುಗಳಲ್ಲಿ ಅಧಿಕ?
ಗೋಬಿ ಮಂಚೂರಿ, ಚಿಕನ್ ಕಬಾಬ್, ಕರಿದ ಮೀನು, ಚಿಕನ್ ಪೆಪ್ಪರ್, ನೂಡಲ್ಸ್, ವೆಜ್ ಮಂಚೂರಿಯನ್‌ಗಳಿಗೆ ನಿಷೇಧಿತ ಬಣ್ಣಗಳು ಹಾಗೂ ರುಚಿಗೆ ಅಜಿನಮೊಟೊಗಳನ್ನು ಬಳಕೆ ಮಾಡಲಾಗುತ್ತಿದೆ. ಇದರ ಜತೆಗೆ ಹೆಚ್ಚಿನವರು ತಿಂಡಿ ತಿನಿಸು ಕರಿಯಲು ಹಲವು ತಿಂಗಳು ಗಳಿಂದ ಬಳಸಿ ಮಿಕ್ಕುಳಿದ ಎಣ್ಣೆಯನ್ನೇ ಬಳಸುತ್ತಾರೆ ಎಂಬ ಆರೋಪವೂ ಇದೆ.
ಆಹಾರ ಸುರಕ್ಷತಾ ನಿಯಮಾವಳಿಗಳನ್ನು ಉಲ್ಲಂಘಿಸಿ ವಸ್ತುಗಳನ್ನು ತಯಾರು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದರೆ
ಸ್ಥಳಿಯಾಡಳಿತಕ್ಕೆ ಅದನ್ನು ಸ್ಥಗಿತಗೊಳಿಸುವ ಅಧಿಕಾರವಿದೆ. ಆದರೆ ಇದು ಕೇವಲ ಎಚ್ಚರಿಕೆ ಹಾಗೂ ದಂಡಕ್ಕೆ ಮಾತ್ರ ಸೀಮಿತವಾಗುತ್ತಿದೆ. ಕಾಟನ್ ಕ್ಯಾಂಡಿ ಮತ್ತು ಕೃತಕ ಬಣ್ಣ ಬಳಸಿದ ಗೋಬಿ ಮಂಚೂರಿ ಖಾದ್ಯ ನಿಷೇಧದ ಬಗ್ಗೆ ರಾಜ್ಯ ಸರಕಾರ ಆದೇಶ ಹೊರಡಿಸಿದೆಯಾದರೂ ಆ ಬಗ್ಗೆ ಪರಿಶೀಲನೆ ನಡೆಸುವ ಕಾರ್ಯ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಎಚ್ಚರಿಕೆ ನೀಡುವ ಕೆಲಸ
ಆಹಾರ ಸುರಕ್ಷಾ ನಿಯಮಗಳ ಜಾರಿಗೆ ಆಹಾರ ಸುರಕ್ಷಾ ವಿಭಾಗ, ಸ್ಥಳಿಯಾಡಳಿತ ಹಾಗೂ ಆರೋಗ್ಯ ಇಲಾಖೆಯ ಸಿಬಂದಿಯ ತಂಡ ರಚಿಸಿ ಎಚ್ಚರಿಕೆ ನೀಡುವ ಕೆಲಸ ಮಾಡಲಾಗುವುದು. ತಿಂಡಿ-ತಿನಿಸುಗಳಲ್ಲಿ ವಿಪರೀತ ಬಣ್ಣ ಬಳಕೆ ಹಾಗೂ ಹಾನಿಕಾರಕ ರಾಸಾಯನಿಕಗಳನ್ನು ಬಳಕೆ ಮಾಡುತ್ತಿದ್ದರೆ ಸಾರ್ವಜನಿಕರು ಈ ಬಗ್ಗೆ ಆರೋಗ್ಯ ಇಲಾಖೆ, ಆಹಾರ ಸುರಕ್ಷಾ ಇಲಾಖೆ ಅಥವಾ ಜಿಲ್ಲಾಡಳಿತಕ್ಕೂ ದೂರು ನೀಡಬಹುದು.
*ಡಾ| ಪ್ರವೀಣ್ ಕುಮಾರ್,
ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ (ಪ್ರಭಾರ) *ಪುನೀತ್ ಸಾಲ್ಯಾನ್