Advertisement

ಉಡುಪಿ:  “ಇಂದಿರಾ ಕ್ಯಾಂಟೀನ್‌’ಗೆ ಚಾಲನೆ

07:00 AM Mar 23, 2018 | Team Udayavani |

ಉಡುಪಿ: ಅತಿ ಕಡಿಮೆ ದರದಲ್ಲಿ ಜನರಿಗೆ ಊಟ-ತಿಂಡಿ ಒದಗಿಸುವ ಸರಕಾರದ ಯೋಜನೆಯಾದ “ಇಂದಿರಾ ಕ್ಯಾಂಟೀನ್‌’ಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಉಡುಪಿಯ ಕಿನ್ನಿಮೂಲ್ಕಿ ವಾರ್ಡ್‌ನ ಹಳೆ ತಾಲೂಕು ಕಚೇರಿ ಕಾಂಪೌಂಡ್‌ನ‌ಲ್ಲಿ ಮಾ. 22ರಂದು ಚಾಲನೆ ನೀಡಿದರು.

Advertisement

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ, ಸದಸ್ಯರಾದ ನಾರಾಯಣ ಪಿ. ಕುಂದರ್‌, ರಮೇಶ್‌ ಕಾಂಚನ್‌, ಜನಾರ್ದನ ಭಂಡಾರ್ಕರ್‌, ಯುವರಾಜ್‌ ಪಿ., ಅಮೃತಾ ಕೃಷ್ಣಮೂರ್ತಿ, ಶೋಭಾ ಕಕ್ಕುಂಜೆ, ಸೆಲಿನಾ ಕರ್ಕಡ, ವಿಜಯ ಮಂಚಿ, ಚಂದ್ರಕಾಂತ್‌, ಸುಕೇಶ್‌ ಕುಂದರ್‌, ಗಣೇಶ್‌ ನೆರ್ಗಿ, ಜ್ಯೋತಿ ನಾಯ್ಕ, ಕಾಂಗ್ರೆಸ್‌ ಮುಂದಾಳುಗಳಾದ ಸತೀಶ್‌ ಅಮೀನ್‌ ಪಡುಕೆರೆ, ಅಲೆವೂರು ಹರೀಶ್‌ ಕಿಣಿ, ದಿನೇಶ್‌ ಪುತ್ರನ್‌, ವೆರೋನಿಕಾ ಕರ್ನೇಲಿಯೋ ಮತ್ತಿತರರು ಉಪಸ್ಥಿತರಿದ್ದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆ 5 ರೂ.ಗೆ ತಿಂಡಿ, ಮಧ್ಯಾಹ್ನ, ರಾತ್ರಿ 10 ರೂ.ಗೆ ಊಟ ಲಭಿಸಲಿದೆ. ಬೆಳಗ್ಗೆ ಇಡ್ಲಿ ಅಥವಾ ಪುಳಿಯೊಗರೆ, ಖಾರಾಬಾತ್‌, ಪೊಂಗಲ್‌, ರವಾ ಕಿಚಡಿ, ಚಿತ್ರಾನ್ನ, ಕೇಸರಿಬಾತ್‌ ಮೊದಲಾದ ತಿಂಡಿಗಳಿರುತ್ತದೆ. ಮಧ್ಯಾಹ್ನ/ರಾತ್ರಿ ಊಟಕ್ಕೆ ಅನ್ನ, ತರಕಾರಿ ಸಾಂಬಾರ್‌ ಮತ್ತು ಮೊಸರನ್ನ ಸಾಮಾನ್ಯವಾಗಿರುತ್ತದೆ.ಅದರೊಂದಿಗೆ ಟೊಮೊಟೋ ಬಾತ್‌, ಚಿತ್ರಾನ್ನ, ವಾಂಗಿಬಾತ್‌, ಬಿಸಿ ಬೇಳೆಬಾತ್‌, ಮೆಂತ್ಯೆ ಪುಲಾವ್‌, ಪುಳಿಯೋಗರೆ, ಪಲಾವ್‌ ಮತ್ತದರ ಒಟ್ಟಿಗೆ ಮೊಸರನ್ನವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next