Advertisement
ಉಡುಪಿಯ ಹೊಟೇಲ್, ಮಾಲ್, ಕೆಫೆಗಳು ಬಂದ್ ಆಗಿವೆ. ಇಂತಹ ಸಂದರ್ಭ ಜನರು ಹಸಿವಿನಿಂದ ಇರಬಾರದು ಎಂದು ಉದ್ಯಮಿ ಕಲ್ಕೂರ ರೆಫ್ರಿಜರೇಷನ್ ಆ್ಯಂಡ್ ಕಿಚನ್ ಇಕ್ವಿಪ್‌ಮೆಂಟ್ ಪ್ರೈ.ಲಿ. ಸಂಸ್ಥೆಯ ಮಾಲಕ ಕೆ. ರಂಜನ್ ಕಲ್ಕೂರ ಅವರು ಇಂದಿರಾ ಕ್ಯಾಂಟೀನ್ ಮೂಲಕ ನೂರಾರು ಮಂದಿಗೆ ದಿನದ ಮೂರೂ ಹೊತ್ತು ತಿಂಡಿ, ಊಟ ನೀಡುತ್ತಿದ್ದಾರೆ.
ಉಚಿತ ಊಟ ಮುಂದುವರಿಕೆ ಲಾಕ್‌ಡೌನ್ ಜಾರಿಯಿದ್ದ ಎ. 7ರಿಂದ ಕ್ಯಾಂಟೀನ್‌ನಲ್ಲಿ ಉಚಿತ ಊಟ-ತಿಂಡಿ ವಿತರಣೆ ಆರಂಭಿಸಿದ್ದರು. ಎ.14ಕ್ಕೆ ಲಾಕ್‌ಡೌನ್ ಮುಕ್ತಾಯಗೊಳ್ಳದೆ ಮುಂದುವರೆದ ಕಾರಣ ಉಚಿತ ಊಟ ನೀಡುವುದನ್ನು ಮುಂದಿನ ಮೇ 3ರ ತನಕ ವಿಸ್ತರಿಸಲಾಗಿದೆ.
Related Articles
ಬೆಳಗ್ಗೆ ಫಲಾಹಾರಕ್ಕೆ ಇಡ್ಲಿ, ಪುಳಿಯೊಗರೆ, ಖಾರಬಾತ್, ಪೊಂಗಲ್, ರವಾ ಕಿಚಡಿ, ಚಿತ್ರಾನ್ನ, ವಾಂಗಿಬಾತ್, ಕೇಸರಿಬಾತ್ ಖಾದ್ಯ ವಿದ್ದರೆ, ಮಧ್ಯಾಹ್ನ ತರಕಾರಿ ಊಟಕ್ಕೆ ಅನ್ನ ಸಾಂಬಾರ್, ಮೊಸರನ್ನಾ, ಟೊಮೆಟೊ ಬಾತ್, ಚಿತ್ರನ್ನ, ವಾಂಗಿಬಾತ್, ಬಿಸಿಬೇಳೆಬಾತ್, ಮೆಂತೆ, ಫಲಾವ್, ಪುಳಿಯೊಗರೆ, ಪಲಾವ್ ಇರುತ್ತದೆ. ಪರಿಸರದಲ್ಲಿ ಶುಚಿತ್ವಕ್ಕೂ ಆದ್ಯತೆ ನೀಡಲಾಗಿದೆ ಎಂದು ಇಂದಿರಾ ಕ್ಯಾಂಟೀನ್‌ನ ಮ್ಯಾನೇಜರ್ ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.
Advertisement