ಕಿನ್ನಿಮೂಲ್ಕಿಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ನಗರದ ವಿವಿಧೆಡೆ ವಾಸವಿರುವ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ನಿರ್ವಸಿತರಿಗೆ ಎ. 7ರಿಂದ ಉಚಿತ ಊಟ-ತಿಂಡಿ ವಿತರಿಸಲಾಗುತ್ತಿದೆ.
Advertisement
ಈಗ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಸ್ಥಳಿಯ ಉದ್ಯಮಿ ಕೆ. ರಂಜನ್ ಕಲ್ಕೂರ ಅವರು ಹೆಚ್ಚುವರಿ ಖರ್ಚನ್ನು ಭರಿಸುತ್ತಿದ್ದಾರೆ.ಬೆಳಗ್ಗೆ 500ರಿಂದ 600ರಷ್ಟು ಮಂದಿಗೆ ಉಪಾಹಾರ ವಿತರಿಸಲಾಗುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ 200 ಮಂದಿಗೆ ಊಟ ನೀಡಲಾಗುತ್ತದೆ. ಕಾರ್ಕಳ ಮತ್ತು ಕುಂದಾಪುರಕ್ಯಾಂಟೀನ್‌ಗಳಲ್ಲಿ ಮಿತದರದಲ್ಲಿ ಊಟ, ತಿಂಡಿ ವಿತರಿಸಲಾಗುತ್ತಿದೆ.
ಅಧಿಕಾರಿಗಳಿಗೆ ಊಟ ಮಂಗಳೂರು ನಗರದಲ್ಲಿ ಕೊರೊನಾ ಯೋಧರಿಗೆ ಇಂದಿರಾ ಕ್ಯಾಂಟೀನ್‌ನಿಂದ ಊಟ ಪೂರೈಸಲಾಗುತ್ತಿದೆ. ಬಡವರಿಗೆ ಮುಜರಾಯಿ ಇಲಾಖೆಯಿಂದ ಉಚಿತ ಊಟ ವಿತರಿಸಲಾಗುತ್ತದೆ.