Advertisement
ಅರ್ಜಿ ಸಲ್ಲಿಸಿದ ಅರ್ಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟ್ ಕಲ್ಪಿಸಿಕೊಡುವ ಉದ್ದೇಶದಿಂದ ಬಿಸಿಎಂ ಅಧಿಕಾರಿಗಳು ಹೆಚ್ಚುವರಿ ಬಾಡಿಗೆ ಕಟ್ಟಡ ಪಡೆದು ಹಾಸ್ಟೆಲ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಸಿಎಂನಲ್ಲಿ ಉಡುಪಿ ಕೇಂದ್ರಕ್ಕೆ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಇದ್ದು, ಈಗಿರುವ ಹಾಸ್ಟೆಲ್‌ಗಳಲ್ಲಿ ಸೀಟು ಲಭ್ಯವಿಲ್ಲ. ಹೆಚ್ಚುವರಿ ಹಾಸ್ಟೆಲ್ ನಿರ್ಮಾಣ ಅಗತ್ಯವಿದೆ. ಬಸ್ ಸಂಚಾರ ಸಮಸ್ಯೆ,ಖಾಸಗಿ ಪಿಜಿಗಳಲ್ಲಿ ದುಬಾರಿ ಶುಲ್ಕ ವಿದ್ಯಾರ್ಥಿಗಳನ್ನು ಸರಕಾರಿ ಹಾಸ್ಟೆಲ್‌ಗಳತ್ತ ಮುಖ ಮಾಡಿಸಿದೆ. ಪದವಿ, ನರ್ಸಿಂಗ್, ಸ್ನಾತಕೋತ್ತರ ಶಿಕ್ಷಣದ ವಿದ್ಯಾರ್ಥಿಗಳಿಂದ ಹಾಸ್ಟೆಲ್ ಬೇಡಿಕೆ ಹೆಚ್ಚು. ಬೇರೆ ಜಿಲ್ಲೆಗೆ ಹೋಲಿಸಿದಲ್ಲಿ ಆಹಾರ, ಸ್ವತ್ಛತೆ, ಶೈಕ್ಷಣಿಕ ಅಭ್ಯಾಸಕ್ಕೆ ಉಡುಪಿ ಜಿಲ್ಲೆಯ ಹಾಸ್ಟೆಲ್‌ಗಳು ಮಾದರಿ ವಿದ್ಯಾರ್ಥಿಗಳ ವಸತಿ ನಿಲಯಗಳಾಗಿ ಗುರುತಿಸಿಕೊಂಡಿವೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಸೀಟ್‌ಗೆ
ಹೆಚ್ಚಿನ ಒತ್ತಡ ಸೃಷ್ಟಿಯಾಗಿದ್ದು, ಹೆಚ್ಚುವರಿ ಬಾಡಿಗೆ ಕಟ್ಟಡಗಳನ್ನು ಪಡೆದು ವಿದ್ಯಾರ್ಥಿಗಳಿಗೆ ಸೀಟ್ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ 23 ಪೋಸ್ಟ್‌ಮೆಟ್ರಿಕ್ ಹಾಸ್ಟೆಲ್‌ಗಳು ಜಿಲ್ಲೆಯಲ್ಲಿವೆ. ಉಡುಪಿ ಜಿಲ್ಲಾ ಕೇಂದ್ರದಲ್ಲಿ 12 ಹಾಸ್ಟೆಲ್‌ಗಳು ನಗರ ಭಾಗದಲ್ಲಿವೆ. ಬಿಸಿಎಂನ ಎಲ್ಲ ಹಾಸ್ಟೆಲ್‌ಗಳು ಭರ್ತಿಯಾಗಿವೆ, ಲಭ್ಯ ಸೀಟಿಗಿಂತ ನೂರಾರು ಹೆಚ್ಚುವರಿ ಅರ್ಜಿಗಳು ಬಂದಿರುವುದು ಅಧಿಕಾರಿಗಳಿಗೆ ಹೊಸ ಸವಾಲು ಎದುರಾಗಿದೆ. ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರ ನಿರ್ದೇಶನದಂತೆ ಹಾಸ್ಟೆಲ್ ಬಯಸುವ ಎಲ್ಲ ವಿದ್ಯಾರ್ಥಿಗಳಿಗೂ ಸೀಟ್ ನೀಡಲೇಬೇಕು ಎಂಬ ಆಶಯದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಹೆಚ್ಚುವರಿ ವ್ಯವಸ್ಥೆ ಮಾಡಿಕೊಂಡು ಪ್ರಥಮ, ದ್ವಿತೀಯ ಹಂತದಲ್ಲಿ ಆದ್ಯತೆ ಮೇರೆಗೆ ಸೀಟು ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಬಿಸಿಎಂ ಜಿಲ್ಲಾ ಅಧಿಕಾರಿ ದೇವಿಂದರ್ ಎಸ್. ಬೀರಾದಾರ್ ತಿಳಿಸಿದ್ದಾರೆ.
Related Articles
Advertisement
ಅತ್ಯಧಿಕ ಅರ್ಜಿ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 7 ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳಿವೆ, ಉಡುಪಿ ನಗರದಲ್ಲಿ ಮೂರು ಹಾಸ್ಟೆಲ್‌ಗಳಿವೆ. ಜಿಲ್ಲಾ ಕೇಂದ್ರ ಉಡುಪಿ ನಗರದಲ್ಲಿ ಹಾಸ್ಟೆಲ್‌ಗೆ ಬೇಡಿಕೆ ಹೆಚ್ಚು. ಬಿಸಿಎಂಗೆ ಹೋಲಿಸಿದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಚ್ಚಿನ ಒತ್ತಡವಿಲ್ಲ. ಬೇಡಿಕೆಯಿದ್ದಷ್ಟು ಎಲ್ಲ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆ ಹಾಸ್ಟೆಲ್‌ಗಳಲ್ಲಿ ಶೇ.25 ರಷ್ಟು ಹಿಂದುಳಿದ ವರ್ಗಕ್ಕೂ ಸೀಟು ಕಲ್ಪಿಸುವ ಅವಕಾಶವಿದೆ. ಇದರಲ್ಲಿಯೂಅತ್ಯಧಿಕ ಸಂಖ್ಯೆಯ ಅರ್ಜಿಗಳು ಬಂದಿವೆ. ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಕೊಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡೂÉರು ತಿಳಿಸಿದ್ದಾರೆ. ಪೋಸ್ಟ್‌ಮೆಟ್ರಿಕ್ ಹಾಸ್ಟೆಲ್
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಒಟ್ಟು ಮಂಜೂರಾತಿ ಸೀಟ್‌ಗಳು 2,755
(ಪಿಯುಸಿಯಿಂದ ಪದವಿ) ನವೀಕರಣ ವಿದ್ಯಾರ್ಥಿಗಳು 1,272
ಹೊಸ ವಿದ್ಯಾರ್ಥಿಗಳಿಗೆ ಲಭ್ಯ ಸೀಟು 1,075
ಹೊಸ ವಿದ್ಯಾರ್ಥಿ ಅರ್ಜಿಗಳ ಸಂಖ್ಯೆ 1,585
ಸಮಾಜ ಕಲ್ಯಾಣ ಇಲಾಖೆ
ಮಂಜೂರಾತಿ ಸೀಟ್‌ಗಳು 500
ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ 445 ಹೆಚ್ಚುವರಿ ಹಾಸ್ಟೆಲ್ ನಿರ್ಮಿಸಲು ಯೋಜನೆ
ಉಡುಪಿ ಜಿಲ್ಲೆಯಲ್ಲಿ ಸರಕಾರಿ ಹಾಸ್ಟೆಲ್ ಸೀಟುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮುಖ್ಯವಾಗಿ ಜಿಲ್ಲಾ ಕೇಂದ್ರವನ್ನು ಗಮನದಲ್ಲಿರಿಸಿ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಹಾಸ್ಟೆಲ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಬಿಸಿಎಂ ಹಾಸ್ಟೆಲ್‌ಗಳಿಗೆ ಅಧಿಕ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದು, ಹೆಚ್ಚುವರಿ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೋಟ ಶ್ರೀನಿವಾಸ್ ಪೂಜಾರಿ, ಸಚಿವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ. -ಅವಿನ್ ಶೆಟ್ಟಿ