Advertisement

Udupi; ಜಿಲ್ಲಾ ಕ್ಯಾಟರಿಂಗ್‌ ಮಾಲಕರ ಸಂಘ ಉದ್ಘಾಟನೆ

12:28 AM Feb 28, 2024 | Team Udayavani |

ಉಡುಪಿ: ಉಡುಪಿ ಜಿಲ್ಲಾ ಕ್ಯಾಟರಿಂಗ್‌ ಮಾಲಕರ ಸಂಘದ ಉದ್ಘಾಟನೆ ಕಾರ್ಯಕ್ರಮ ಮಂಗಳ ವಾರ ಸಂತೆಕಟ್ಟೆ ಲಕ್ಷ್ಮೀನಗರದ ಗ್ರೀನ್‌ ಎಕರ್ಷ್‌ನಲ್ಲಿ ಜರಗಿತು.

Advertisement

ಕೇಮಾರು ಸಾಂದೀಪನೀ ಸಾಧನಾ ಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಉಡುಪಿ ಡಯಾಸಿಸ್‌ನ ವಿಕಾರ್‌ ಜನರಲ್‌ ವಂ| ಫರ್ಡಿನಾಂಡ್‌ ಗೊನ್ಸಾಲ್ವಿಸ್‌ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.

ಈಶವಿಠಲದಾಸ ಶ್ರೀಗಳು ಮಾತನಾಡಿ, ಸಂಘಟನೆಗಳಿಂದ ಪರಿಹಾರ ಸಾಧ್ಯವಿದೆ. ಕಾರ್ಯ ಕ್ರಮಗಳಲ್ಲಿ ಗುಣಮಟ್ಟದ ಆಹಾರ ಒದಗಿಸುವ ಮೂಲಕ ಎಲ್ಲ ಕ್ಯಾಟರಿಂಗ್‌ ಸಂಸ್ಥೆಗಳು ಉತ್ತಮ ಹೆಸರುಗಳಿಸಿ ಅಭಿವೃದ್ಧಿ ಹೊಂದ ಬೇಕು ಎಂದರು. ಮಾಲಕರು, ನೌಕರರ ಮಕ್ಕಳು ಶಿಕ್ಷಣ, ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವಂತೆ ಸಲಹೆ ನೀಡಿದರು.

ವಂ| ಫರ್ಡಿನಾಂಡ್‌ ಗೊನ್‌ಸಾಲ್ವಿಸ್‌ ಮಾತನಾಡಿ, ಜನರ ಹಸಿವು ನೀಗಿಸುವ, ಊಟ ಕೊಡುವ ಪುಣ್ಯದ ಕಾರ್ಯವನ್ನು ಕ್ಯಾಟರಿಂಗ್‌ ಸಂಸ್ಥೆಗಳು ನಿರ್ವಹಿಸುತ್ತಿವೆ. ಎಲ್ಲರೂ ಸಂಘಟಿತರಾಗಿದ್ದರೆ ಸಾಧನೆ ಮಾಡಲು ಸಾಧ್ಯ. ಉತ್ತಮ ಊಟೋಪಚಾರದ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಎಲ್ಲ ಕ್ಯಾಟರಿಂಗ್‌ ಸಂಸ್ಥೆಗಳು ಜನರ ಪ್ರೀತಿಗೆ ಪಾತ್ರರಾಗಬೇಕು ಎಂದು ಹಾರೈಸಿದರು.

ಸಂಘದ ಪ್ರಮುಖರಾದ, ವಿವಿಧ ಕ್ಯಾಟರಿಂಗ್‌ ಸಂಸ್ಥೆಯ ಮಾಲಕರಾದ ಭರತ್‌ ಶೆಟ್ಟಿ, ಇಗ್ನೇಷಿಯಸ್‌ ಡಿ’ಸೋಜಾ, ರೊನಾಲ್ಡ… ರಾಡ್ರಿಗಸ್‌, ರವೀಂದ್ರ ಶೆಟ್ಟಿ ಶಿರ್ವ, ಅನಿಲ್‌ ಡಿಮೆಲ್ಲೊ, ಅನಿಲ್‌ ಡೆಸಾ, ದಯಾನಂದ್‌, ರಮೇಶ್‌, ಭಾಸ್ಕರ್‌, ಸುಶಾಂತ್‌, ಪ್ರಸಾದ್‌ ಅಂಚನ್‌ ಉಪಸ್ಥಿತರಿದ್ದರು.

Advertisement

ಸಂಘದ ಉಪಾಧ್ಯಕ್ಷ ಜೂಲಿ ಯಸ್‌ ಲಿವೀಸ್‌ ದಾನಿಗಳ ಪಟ್ಟಿ ವಾಚಿಸಿ ದರು. ಕಾರ್ಯದರ್ಶಿ ಗಣೇಶ್‌ ಸಾಲ್ಯಾನ್‌ ವಂದಿಸಿದರು. ಗೌರವ ಸಲಹೆಗಾರ ಡೇನಿಷ್‌ ರಾಡ್ರಿಗಸ್‌ ಪ್ರಸ್ತಾವನೆಗೈದು, ಕೋಶಾಧಿಕಾರಿ ದೀಕ್ಷಿತ್‌ ಶೆಟ್ಟಿ ಸ್ವಾಗತಿಸಿ, ಆಲ್ವಿನ್‌ ಅಂದ್ರಾದೆ ನಿರೂಪಿಸಿದರು.

ಸಮಸ್ಯೆಗೆ ಸ್ಪಂದಿಸಲು ಸಿಎಂ ಬಳಿ ನಿಯೋಗ
ದ.ಕ. ಜಿಲ್ಲಾ ಕ್ಯಾಟರಿಂಗ್‌ ಮಾಲಕರ ಸಂಘದ ಅಧ್ಯಕ್ಷ ದೀಪಕ್‌ ಕೋಟ್ಯಾನ್‌ ಮಾತನಾಡಿ, ಈಗಾಗಲೇ ಕ್ಯಾಟರಿಂಗ್‌ ಉದ್ಯಮ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಲ್ಲಿ ಟ್ರಾನ್ಸ್‌ಪೊàರ್ಟ್‌, ಟ್ಯಾಕ್ಸ್‌ ಪ್ರಮುಖವಾಗಿದೆ. ಕ್ಯಾಟರಿಂಗ್‌ ಉದ್ಯಮಕ್ಕೆ ವರ್ಷಪೂರ್ತಿ ಆದಾಯ ಇರುವುದಿಲ್ಲ. ಈ ನಿಟ್ಟಿನಲ್ಲಿ ಸರಕಾರ ತೆರಿಗೆ ವಿಷಯದಲ್ಲಿ ಕ್ಯಾಟರಿಂಗ್‌ ಉದ್ಯಮಕ್ಕೆ ರಿಯಾಯಿತಿ ನೀಡಬೇಕು. ಈ ನಿಟ್ಟಿನಲ್ಲಿ ಉಡುಪಿ, ದ.ಕ. ಜಿಲ್ಲೆ ಕ್ಯಾಟರಿಂಗ್‌ ಮಾಲಕರ ಸಂಘದ ನಿಯೋಗವು ಮುಖ್ಯಮಂತ್ರಿ ಬಳಿನಿಯೋಗ ತೆರಳಿ ಶೀಘ್ರವಾಗಿ ಮನವಿ ಸಲ್ಲಿಸಬೇಕಿದೆ ಎಂದರು.

ಜಿಲ್ಲಾ ಕ್ಯಾಟರಿಂಗ್‌ ಮಾಲಕರ ಸಂಘದ ಅಧ್ಯಕ್ಷ ನವೀನ್‌ ಅಮೀನ್‌ ಶಂಕರಪುರ ಮಾತನಾಡಿ, ಉತ್ತಮ ಸಂಘಟನೆಯಾಗಿ ಒಗ್ಗಟ್ಟಿನಿಂದ ಇರಬೇಕು. ಮುಂದಿನ ದಿನಗಳಲ್ಲಿ ದರ ಪಟ್ಟಿ ಅನುಷ್ಠಾನಕ್ಕೆ ವ್ಯವಸ್ಥೆ ಆಗಬೇಕಿದೆ. ಕಾನೂನಿನ ತೊಂದರೆಗಳು ಮತ್ತು ಮಾಲಕರು, ನೌಕರರಿಗೆ ಸಂಕಷ್ಟ ಎದುರಾದಾಗ ಎಲ್ಲರೂ ಒಗ್ಗೂಡಿ ಸ್ಪಂದಿಸಲು ಸಂಘದ ಪಾತ್ರ ಮಹತ್ವದ್ದಾಗಿರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next