Advertisement
ಸವಾರರಿಗೆ ತೊಂದರೆಸಂಚಾರ ಪೊಲೀಸರ ಈ ಕ್ರಮದಿಂದಾಗಿ ಗುಂಡಿಬೈಲು ನಿವಾಸಿಗಳಿಗೆ ತೊಂದರೆ ಉಂಟಾಗಿದೆ. ಅನತಿ ದೂರದಲ್ಲಿರುವ ಶ್ರೀಕೃಷ್ಣ ಮಠ ಅಥವಾ ಸಿಟಿ ಬಸ್ ತಂಗುದಾಣಕ್ಕೆ ಹೋಗಬೇಕಿದ್ದರೂ ಕಡಿಯಾಳಿಯವರೆಗೆ ಬಂದು ಯು ಟರ್ನ್ ಮಾಡಿ ಹೋಗಬೇಕಾದಂತಹ ಸ್ಥಿತಿ. ಪೊಲೀಸರು ಇಷ್ಟೆಲ್ಲ ಕ್ರಮ ತೆಗೆದುಕೊಂಡರೂ ಕಡಿಯಾಳಿಯಲ್ಲಿ ಯು ಟರ್ನ್ ಮಾಡಬೇಕಿದ್ದರೂ ವಾಹನಗಳು ಸರತಿ ಸಾಲಿನಲ್ಲಿಯೇ ನಿಲ್ಲಬೇಕು. ಮತ್ತೂಂದು ಭಾಗದಲ್ಲಿ ಸಿಟಿ ಬಸ್ ತಂಗುದಾಣದಿಂದ ಕಲ್ಸಂಕದವರೆಗೆ ಟ್ರಾಫಿಕ್ ದಟ್ಟಣೆ ಇರುವ ಕಾರಣ ಎಲ್ಲರೂ ತಾಳ್ಮೆಯಿಂದಲೇ ಟ್ರಾಫಿಕ್ನಲ್ಲಿ ನಿಲ್ಲುವಂತಹ ಸ್ಥಿತಿ ಎದುರಾಗಿದೆ.
ಮಣಿಪಾಲದಿಂದ ಮಂಗಳೂರು ಭಾಗಕ್ಕೆ ತೆರಳುವವರು ಅಲೆವೂರು ಮಾರ್ಗವಾಗಿ ಕಟಪಾಡಿಗೆ ಹೋಗಬಹುದು. ಶಾರದಾ ಕಲ್ಯಾಣಮಂಟಪ ರಸ್ತೆಯಿಂದ ಬೀಡಿನಗುಡ್ಡೆ ಮಾರ್ಗವಾಗಿ ತೆರಳಬಹುದು. ಮಣಿಪಾಲದಿಂದ ಅಂಬಾಗಿಲಿಗೆ ತೆರಳುವವರು ಪೆರಂಪಳ್ಳಿ ರಸ್ತೆಯನ್ನು ಬಳಕೆ ಮಾಡಬಹುದು. ಮಣಿಪಾಲದಿಂದ ಗುಂಡಿಬೈಲಿಗೆ ಹೋಗುವವರು ಪೆರಂಪಳ್ಳಿ ಮಾರ್ಗವಾಗಿ ಸಗ್ರಿ ಚಕ್ರತೀರ್ಥಕ್ಕೆ ಹೋಗುವ ರಸ್ತೆಯನ್ನೂ ಬಳಕೆ ಮಾಡಬಹುದು. ದ್ವಿಚಕ್ರ ವಾಹನಗಳು ಕಡಿಯಾಳಿಯ ಓಶಿಯನ್ ಪರ್ಲ್ ಹೊಟೇಲ್ನ ಎಡಬದಿಯ ರಸ್ತೆಯಲ್ಲಿ ಹೋಗಿ ರಥಬೀದಿಯ ಕಾರ್ಪಾರ್ಕಿಂಗ್ ಮೂಲಕ ತೆಂಕುಪೇಟೆ ಭಾಗಕ್ಕೆ ತೆರಳಬಹುದು. ಬ್ಯಾರಿಕೇಡ್ ಅಳವಡಿಕೆ
ಗುಂಡಿಬೈಲಿನಿಂದ ಮಣಿಪಾಲಕ್ಕೆ ತೆರಳಲು ಫ್ರೀ ಲೆಫ್ಟ್ ಮಾಡಲಾಗಿದ್ದು, ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ವಾಹನ ದಟ್ಟಣೆ ಕಡಿಮೆ ಇದ್ದಾಗ ಎಂದಿನಂತೆ ಗುಂಡಿಬೈಲು ಕಲ್ಸಂಕ ಮೂಲಕ ನಗರಕ್ಕೆ ಪ್ರವೇಶ ಮಾಡಬಹುದು. ಆದರೆ ವಿಪರೀತ ದಟ್ಟಣೆ ಉಂಟಾಗುವಂತಹ ಸಂದರ್ಭದಲ್ಲಿ ಗುಂಡಿಬೈಲಿನಿಂದ ಬರುವ ವಾಹನಗಳು ಫ್ರೀ ಲೆಫ್ಟ್ ಮೂಲಕ ಸಂಚರಿಸಿ ಕಡಿಯಾಳಿ ಮಾರ್ಗವಾಗಿ ಬರಬೇಕು. ಇದರಿಂದಾಗಿ ಒಂದು ಬದಿಯಲ್ಲಿ ಸುಗಮ ಸಂಚಾರ ಮಾಡಲು ಅನುಕೂಲವಾಗುತ್ತದೆ ಎನ್ನುತ್ತಾರೆ ಸಂಚಾರ ಠಾಣೆಯ ಉಪನಿರೀಕ್ಷಕರಾದ ಸುದರ್ಶನ ದೊಡ್ಡಮನಿ.