ಉಡುಪಿ: ಕಿದಿಯೂರ್ ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಜ. 31ರಂದು ನಡೆಯಲಿರುವ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಜೋಡುಕಟ್ಟೆಯಲ್ಲಿ ಶನಿವಾರ ಹಸುರುವಾಣಿ ಹೊರೆಕಾಣಿಕೆ ಸಹಿತ ಭವ್ಯ ಶೋಭಾಯಾತ್ರೆ ನಡೆಯಿತು.
ಶ್ರೀ ನಾಗದೇವರಿಗೆ ನೂತನವಾಗಿ ನಿರ್ಮಿಸಿದ ಭವ್ಯ ರಜತ ಮಂಟಪ, ರಜತ ಕವಚ ಮತ್ತು ಸ್ವರ್ಣ ಲೇಪಿತ ಪ್ರಭಾವಳಿಯಲ್ಲಿ ರಜತ ಬಲಿ ಮೂರ್ತಿಯ ಮೆರವಣಿಗೆಗೆ ಶ್ರೀ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀಪಾದರು ಚಾಲನೆ ನೀಡಿ, ನಾಗದೇವರು ಎಲ್ಲರಿಗೂ ಆರಾಧ್ಯ ದೇವರು. ನಾವು ಮಾಡುವ ಕಾರ್ಯದಲ್ಲಿ ದೋಷ ಕಂಡು ಬಂದರೆ ನಾಗದೇವರು ಪ್ರತ್ಯಕ್ಷವಾಗಿ ಕಾಣಿಸಲ್ಪಟ್ಟರೆ, ಉಳಿದ ದೇವರು ಪರೋಕ್ಷವಾಗಿ ತೋರಿಸುತ್ತಾರೆ. ಅಂತಹ ವಿಶೇಷವಾದ ಶಕ್ತಿಯುಳ್ಳ ನಾಗದೇವರು ಸರ್ವ ಭಕ್ತರನ್ನು ಅನುಗ್ರಹಿಸಲಿ ಎಂದು ಆಶೀರ್ವಚನ ನೀಡಿದರು.
ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು, ರಜತ ಮಂಟಪ, ರಜತ ಕವಚ ಮತ್ತು ಸ್ವರ್ಣ ಲೇಪಿತ ಪ್ರಭಾವಳಿಯಲ್ಲಿ ರಜತ ಬಲಿ ಮೂರ್ತಿಗೆ ಪುಷ್ಪಾರ್ಚನೆಗೈದು ಆಶೀರ್ವದಿಸಿದರು.
ಜೋಡುಕಟ್ಟೆಯಿಂದ ಆರಂಭಗೊಂಡು ತಾ.ಪಂ. ಕಚೇರಿ ಮಾರ್ಗ, ಹಳೇ ಡಯಾನ ಸರ್ಕಲ್, ನಗರಸಭೆ ಮುಂಭಾಗ, ಸರ್ವಿಸ್ ಬಸ್‌ನಿಲ್ದಾಣ ಮಾರ್ಗವಾಗಿ ಕಿದಿಯೂರ್ ಹೊಟೇಲ್‌ನ ಶ್ರೀ ನಾಗ ಸಾನ್ನಿಧ್ಯಕ್ಕೆ ಸಾಗಿ ಬಂದ ಮೆರವಣಿಗೆಯಲ್ಲಿ ವಿವಿಧ ಬಿರುದು ಬಾವಲಿ, ವೈವಿಧ್ಯಮಯ ಸ್ತಬ್ಧಚಿತ್ರಗಳು, ಡೊಳ್ಳು ಕುಣಿತ, ಚೆಂಡೆ ವಾದನ, ಭಜನ ಸಂಕೀರ್ತನೆ, ಕೊಂಬು ಕಹಳೆ, ಕೇರಳದ ಪಂಚ ವಾದ್ಯಂ, ತಟ್ಟಿರಾಯ, ಕೇಸರಿ ಪತಾಕೆ ಹಿಡಿದ ಪೇಟ ತೊಟ್ಟ ಮಹಿಳೆಯರು, ಡೊಳ್ಳು ವಾದನ, ಮರಕಾಲು ಹುಲಿವೇಷ, ಹುಲಿವೇಷಗಳು, ತಲೆಹೊರೆಯಲ್ಲಿ ಅಕ್ಕಿಮುಡಿ, ನಾಸಿಕ್ ಬ್ಯಾಂಡ್, ಕಲಶಗಳು, ಸ್ಯಾಕ್ಸೋಫೋನ್, ಕುಣಿತ ಭಜನ ತಂಡಗಳು, ಪ್ರಚಾರ ವಾಹನ, ಸಿಂಗಾರ ಹೂವು ಹಿಡಿದ ಮಹಿಳೆಯರು, ಸಹಿತ ವೈವಿಧ್ಯಮಯ ವಿಶೇಷ ಆಕರ್ಷಣೆಗಳು ಮೆರಗು ನೀಡಿದವು.
ನಾಗಮಂಡಲೋತ್ಸವ ಆಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್, ಕಿದಿಯೂರ್ ಹೊಟೇಲ್ಸ್ ನ ಎಂಡಿ, ಸೇವಾಕರ್ತ ಭುವನೇಂದ್ರ ಕಿದಿಯೂರು, ಹೀರಾ ಬಿ. ಕಿದಿಯೂರು, ಬ್ರಿಜೇಶ್ ಕಿದಿಯೂರು, ಭವ್ಯಶ್ರೀ ಕಿದಿಯೂರು, ಅಭಿನ್ ದೇವದಾಸ್, ಜಿತೇಶ್ ಬಿ. ಕಿದಿಯೂರು, ಪ್ರಿಯಾಂಕಾ ಜಿತೇಶ್, ನಾಗಮಂಡಲದ ಸಮಗ್ರ ಮಾರ್ಗದರ್ಶಕ, ಜೋತಿಷಿ ವೇ|ಮೂ| ಕಬಿಯಾಡಿ ಜಯರಾಮ ಆಚಾರ್ಯ, ಸಮಿತಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಸಾಲ್ಯಾನ್ ಮಸ್ಕತ್, ಗೌರವ ಮಾರ್ಗದರ್ಶಿ ಡಾ| ವಿಜಯೇಂದ್ರ ವಸಂತ ರಾವ್, ಉಪಾಧ್ಯಕ್ಷರಾದ ಗಣೇಶ್ ರಾವ್, ಹಿರಿಯಣ್ಣ ಕಿದಿಯೂರು, ಕೋಶಾಧಿಕಾರಿ ವಿಲಾಸ್ ಕುಮಾರ್ ಜೈನ್, ಪ್ರಯುಖರಾದ ಡಾ| ಜೆರ್ರಿ ವಿನ್ಸೆಂಟ್ ಡಯಾಸ್, ಆನಂದ ಪಿ. ಸುವರ್ಣ, ಆನಂದ ಸಿ. ಕುಂದರ್, ಜಯ ಸಿ. ಕೋಟ್ಯಾನ್, ಹರಿಯಪ್ಪ ಕೋಟ್ಯಾನ್, ಸಾಧು ಸಾಲ್ಯಾನ್, ವೆಂಕಟರಮಣ ಕಿದಿಯೂರು, ರಮೇಶ್ ಕಿದಿಯೂರು, ದಿನಕರ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಮಟ್ಟು ಲಕ್ಷ್ಮೀನಾರಾಯಣ ಭಟ್, ರತ್ನಾಕರ ಕಲ್ಯಾಣಿ, ಯೋಗೀಶ್ಚಂದ್ರಧರ, ರಾಮಚಂದ್ರ ಕುಂದರ್, ಸುಭಾಸ್ ಮೆಂಡನ್, ದಯಾನಂದ ಕೆ. ಸುವರ್ಣ, ಮಧುಸೂದನ ಕೆಮ್ಮಣ್ಣು, ರತ್ನಾಕರ ಸಾಲ್ಯಾನ್, ರಮೇಶ್ ಕೋಟ್ಯಾನ್, ಕಿಶೋರ್ ಡಿ. ಸುವರ್ಣ, ಪ್ರಕಾಶ್ ಜತ್ತನ್ನ, ಗುಂಡು ಬಿ. ಅಮೀನ್, ಭೋಜರಾಜ್ ಕಿದಿಯೂರು, ದಿನೇಶ್ ಎರ್ಮಾಳ್, ಶಶಿಧರ ಶೆಟ್ಟಿ ಎರ್ಮಾಳ್, ಮೋಹನ್ ಬೆಂಗ್ರೆ, ರಾಧಾಕೃಷ್ಣ ಮೆಂಡನ್, ಬೇಬಿ ಎಚ್. ಸಾಲ್ಯಾನ್, ಯತೀಶ್ ಕಿದಿಯೂರು, ಕೃಷ್ಣ ಎಸ್. ಸುವರ್ಣ, ರಾಜೇಂದ್ರ ಸುವರ್ಣ ಹಿರಿಯಡಕ, ಜಯಂತ ಕೋಡಿ, ನಗರಸಭೆ ಸದಸ್ಯ ವಿಜಯ ಕೊಡವೂರು, ಪ್ರಕಾಶ್ ಸುವರ್ಣ ಕಟಪಾಡಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಕಿದಿಯೂರ್ ಹೊಟೇಲ್ಸ್‌ನ ಸಿಬಂದಿ ಉಪಸ್ಥಿತರಿದ್ದರು. ಪ್ರಶಾಂತ ಶೆಟ್ಟಿ ಹಾವಂಜೆ ನಿರೂಪಿಸಿದರು.