Advertisement
ಸಂತೆಕಟ್ಟೆಯ ರವಿರಾಜ್ ಎಲೆಕ್ಟ್ರಿಕ್ ವಾಹನವನ್ನು ಕಾದಿರಿಸಿದ್ದರು. ಆದರೆ ಇದುವರೆಗೂ ನೀಡದ ಕಾರಣ ಕಂಪೆನಿಯ ವಿರುದ್ಧ ದೂರು ನೀಡಲು ಜ. 15ರಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರು. ಅದರಲ್ಲಿ ಬಂದ ವೆಬ್‌ಸೈಟ್‌ಗೆ ಮಾಹಿತಿಯನ್ನು ನಮೂದಿಸಿದ ಅವರಿಗೆ ಕೆಲವೇ ಕ್ಷಣಗಳಲ್ಲಿ ಕರೆ ಬಂದಿತ್ತು. ನಿಮ್ಮ ದೂರನ್ನು ಸ್ವೀಕರಿಸಲಾಗಿದೆ. ವಾಟ್ಸ್ ಆ್ಯಪ್‌ನಲ್ಲಿ ಕಳುಹಿಸಿರುವ ಲಿಂಕ್‌ಗೆ ಮಾಹಿತಿ ನಮೂದಿಸಿ ಎಂದು ಕರೆ ಮಾಡಿದವರು ತಿಳಿಸಿದ್ದರು. ಅದರಂತೆ ರವಿರಾಜ್ ತನ್ನ ಎಲ್ಲ ಬ್ಯಾಂಕ್ ಮಾಹಿತಿ ಹಾಗೂ ಯುಪಿಐ ಸಂಖ್ಯೆಯನ್ನು ನಮೂದಿಸಿದ್ದರು. ಬಳಿಕ ಅವರ ಗಮನಕ್ಕೆ ಬಾರದೆ ಬ್ಯಾಂಕ್ ಖಾತೆಯಿಂದ ಜ. 20ರಂದು ಹಂತಹಂತವಾಗಿ 1,99,000 ರೂ. ಕಡಿತಗೊಂಡಿತ್ತು. ಅತ್ತ ಸ್ಕೂಟರ್ ಕೂಡ ಇಲ್ಲ ಇತ್ತ ಬ್ಯಾಂಕ್‌ನಲ್ಲಿದ್ದ ಹಣವೂ ಇಲ್ಲ ಎಂಬ ಸ್ಥಿತಿ ಅವರದ್ದಾಗಿದೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಗಳಿಸುವಂತೆ ಯುವತಿಯೊಬ್ಬಳನ್ನು ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ಉಳೂ¤ರಿನ ಯುವತಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕಿಸಿದ ಅಪರಿಚಿತರು ಕ್ರಿಪ್ಟೋ ಕರೆನ್ಸಿಯಿಂದ ಹೆಚ್ಚಿನ ಲಾಭ ಪಡೆಯಬಹುದೆಂದು ಆಸೆ ತೋರಿಸಿದರು. ಬಳಕ ಟೆಲಿಗ್ರಾಂ ಆ್ಯಪ್ ಲಿಂಕ್ ಕಳುಹಿಸಿ ಹೆಚ್ಚಿನ ಲಾಭಾಂಶವನ್ನು ನೀಡುವುದಾಗಿ ನಂಬಿಸಿದರು. ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಗೂ ಯುಪಿಐ ಐಡಿಗಳಿಗೆ ಯುವತಿಯು ಜ. 13ರಿಂದ 19ರ ನಡುವೆ ಹಂತ ಹಂತವಾಗಿ ಒಟ್ಟು 6,16,500 ರೂ. ಪಾವತಿಸಿದರು. ಆದರೆ ಆರೋಪಿಗಳು ಆಕೆ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೇ ನಂಬಿಸಿ ಮೋಸ ಮಾಡಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.