Advertisement
ಬುದ್ಧಿಮಾನ್, ಬುದ್ಧಿವಂತ ಅಂದರೆ ವಿಚಾರ ಮಾಡಿ ತಳೆಯುವ ನಿರ್ಣಯ. ಧೀಶಕ್ತಿ ಎನ್ನುವುದು ಯಾರ ಕೈಯಲ್ಲೂ ಇಲ್ಲ. ಆಂಜನೇಯನಿಗೆ ಆ ಶಕ್ತಿ ಇತ್ತು. ಈತ ಧೀಶಕ್ತಿಗೆ ಉತ್ತಮ ಉದಾಹರಣೆ. ಸುರಸೆ ಎಂಬ ರಾಕ್ಷಸಿ ಬಂದಾಗ ಆತ ಕ್ರಿಮಿ ರೂಪದಲ್ಲಿ ಒಳಗೆ ಹೋಗಿ ಹೊರಗೆ ಬಂದದ್ದು, ಬಾಲಕ್ಕೆ ಬೆಂಕಿ ಹಚ್ಚಿಕೊಂಡು ಲಂಕೆಯನ್ನೇ ದಹಿಸಿದ್ದು, ಸಿಂಹಿಕೆ ಘಟನೆ ಇವು ಉದಾಹರಣೆಗಳು. ಆತ ಕೈಗೊಂಡ ಸೀತಾ ಪತ್ತೆ ಕಾರ್ಯವೇ ಅಮೋಘ. ಆತ ಸೀತೆಯನ್ನು ಕಂಡಿರಲೇ ಇಲ್ಲ. ಕಾಣದೆ ಇದ್ದ ಒಬ್ಬ ಸ್ತ್ರೀಯನ್ನು ಬ್ರಹ್ಮಚಾರಿಯಾದ ಈತ ಪತ್ತೆ ಹಚ್ಚಿದ್ದು ಸಾಮಾನ್ಯವೇ? ಸುಂದರಕಾಂಡದಲ್ಲಿ ಹೆಜ್ಜೆ ಹೆಜ್ಜೆಗೆ ಧೀಶಕ್ತಿ ತೋರುತ್ತದೆ. ಇಲ್ಲಿ ದ್ರೋಣಾಚಾರ್ಯರನ್ನು ಕೊಲ್ಲಲು ಹುಟ್ಟಿದ ದೃಷ್ಟದ್ಯುಮ್ನ ದ್ರೋಣರಲ್ಲಿಯೇ ಬಂದು ಶಿಷ್ಯತ್ವವನ್ನು ತೆಗೆದುಕೊಂಡದ್ದು ಧೀಮಂತಿಕೆಯಲ್ಲವೆ? ಆತ ತನ್ನನ್ನೇ ಕೊಲ್ಲಲು ಹುಟ್ಟಿದ್ದು ಎನ್ನುವುದು ದ್ರೋಣರಿಗೂ ಗೊತ್ತು. ಅವರಿಂದಲೇ ವಿದ್ಯೆಯ ಗುಟ್ಟು ತಿಳಿದದ್ದು ಧೀಶಕ್ತಿಯ ಪ್ರತೀಕ ಎಂದು ದುರ್ಯೋಧನ ಕೆಣಕಿದಂತೆ ಹೇಳುತ್ತಾನೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811