Advertisement

Udupi: ಗೀತಾರ್ಥ ಚಿಂತನೆ-53: ದುರ್ಯೋಧನನ ಕೆಣಕಿಸುವ ತಂತ್ರ

01:40 AM Oct 03, 2024 | Team Udayavani |

ಪಶ್ಯೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್‌| ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ| (ಗೀತೆ 3). ಭೀಷ್ಮಾಚಾರ್ಯರು ಮೃದು ಧೋರಣೆಯವರು, ಪಾಂಡವ ಪಕ್ಷಪಾತಿ ಎಂಬ ಭಾವನೆ ಇರುವುದರಿಂದಲೇ ಭೀಷ್ಮರನ್ನು ಬಿಟ್ಟು ದ್ರೋಣರಲ್ಲಿಗೆ ಹೋಗಿ ಪಾಂಡುಪುತ್ರಾಣಾಮಾಚಾರ್ಯ ಎಂದು ಸಂಬೋಧಿಸುತ್ತಾನೆ.

Advertisement

ದ್ರೋಣರು ಎಲ್ಲರಿಗೂ ವಿದ್ಯೆ ಹೇಳಿಕೊಟ್ಟಿದ್ದರೂ ಹಂಗಿಸುವುದಕ್ಕೋಸ್ಕರ ಹೀಗೆ ಹೇಳುತ್ತಾನೆ. ಕೌರವರದು 11 ಅಕ್ಷೋಹಿಣೀ, ಪಾಂಡವರದು 7 ಅಕ್ಷೋಹಿಣೀ ಸೈನ್ಯವಿದ್ದರೂ “ನೋಡಿ ಅಲ್ಲಿ ಪಾಂಡವರ ಸೇನೆ ಜಮಾಯಿಸಿದ್ದು’ ಎಂದು ಹೇಳುವ ಮೂಲಕ ಭಯವನ್ನು ಅನಾವರಣಗೊಳಿಸುತ್ತಾನೆ. ಇದು ದುಯೋಧನನ ಗ್ರಹಿಕೆ. ವಸ್ತುಸ್ಥಿತಿ ಹಾಗಿರುವುದಿಲ್ಲ. ಭಯವಿದ್ದಾಗ ಎದುರಾಳಿಗಳ ಶಕ್ತಿ ದೊಡ್ಡದಾಗಿ ಕಾಣುತ್ತದೆ. ಪಾಂಡವರ ಸೇನಾಪತಿ ದೃಷ್ಟದ್ಯುಮ್ನನನ್ನು ದ್ರುಪದಪುತ್ರ ಎಂದು ಹೇಳುತ್ತಾನೆ. ದೃಷ್ಟದ್ಯುಮ್ನ ದ್ರೋಣರನ್ನು ಕೊಲ್ಲಲಿಕ್ಕಾಗಿಯೇ ಹುಟ್ಟಿದವ. ವಾಸ್ತವದಲ್ಲಿ ದೃಷ್ಟದ್ಯುಮ್ನ, ದ್ರೌಪದಿಯರು ದ್ರುಪದ ಆಯೋಜಿಸಿದ ಯಜ್ಞದ ಅಗ್ನಿಕುಂಡದಿಂದ ಜನಿಸಿದವರು. ದ್ರುಪದನಿಗೆ ಹುಟ್ಟಿದವರಲ್ಲವಾದರೂ ಕೆಣಕುವುದಕ್ಕಾಗಿ “ನಿಮ್ಮನ್ನು ಕೊಲ್ಲಲು ಹುಟ್ಟಿದ ದ್ರುಪದಪುತ್ರನ ಸಿದ್ಧತೆ ನೋಡಿ’ ಎನ್ನುತ್ತಾನೆ. ಇಲ್ಲಿ ದ್ರೋಣಾಚಾರ್ಯರನ್ನು ಎತ್ತಿಕಟ್ಟುವುದಲ್ಲದೆ, ಭೀಷ್ಮಾಚಾರ್ಯರನ್ನೂ ಕೆಣಕುತ್ತಾನೆ. ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುವ ತಂತ್ರವಿದು.

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next