ಪಾಂಚಜನ್ಯವನ್ನು ಮೊಳಗಿಸಿದವ ಹೃಷೀಕೇಶ (ಇಂದ್ರಿಯಗಳನ್ನು ಗೆದ್ದವ= ಶ್ರೀಕೃಷ್ಣ), ಪಾಂಚಜನ್ಯವೆಂದರೆ ಪಂಚೇಂದ್ರಿಯಗಳ ಸಂಕೇತ. ದೇವದತ್ತವನ್ನು ಮೊಳಗಿಸಿದವ ಧನಂಜಯ. ಧನಂಜಯ ಅರ್ಜುನನ ಇನ್ನೊಂದು ಹೆಸರು. ಧನವನ್ನು (ಶತ್ರುಗಳ ಧನ) ಜಯಿಸುವವ ಎಂದರ್ಥ.
ಅನಂತರ ಮಹಾಶಂಖವನ್ನು ಮೊಳಗಿಸಿದವ ಭೀಮ. ಭೀಮನಿಗೆ ತಕ್ಕ ಗಾತ್ರದ ಶಂಖ. ಈತನ ಶಂಖನಾದವೆಂದರೆ ಶತ್ರುಗಳಿಗೆ ಭಯ ಹುಟ್ಟಿಸುವಂಥದ್ದು. ಭೀಮನ ಶಂಖ ನಾದ ನಾಭಿಯಿಂದ ಬರುತ್ತಿತ್ತು. ಆದ್ದರಿಂದಲೇ ವೃಕೋದರ ಎಂದು ಕರೆಯುವುದು.
ವೃಕೋದರ=ತೋಳದಂತಹ ಹೊಟ್ಟೆಯವ. ಭಯ ಉಂಟು ಮಾಡುವ ಪ್ರಾಣಿಯಾದ್ದರಿಂದಲೇ “ತೋಳ ಬಂತು ತೋಳ’ ಎಂಬ ನಾಣ್ಣುಡಿ ಬಂತೆ ವಿನಾ “ಹುಲಿ ಬಂತು ಹುಲಿ’ ಎಂದು ಬರಲಿಲ್ಲ. ಅನಂತರ ಯುಧಿಷ್ಠಿರ ಶಂಖನಾದಗೈದ. ಪಾಂಡವರ ಕಡೆಯಲ್ಲಿ ಸಮನ್ವಯ ಸೂಚಕವಾಗಿ ಶಂಖನಾದ ಹೊರಹೊಮ್ಮಿದರೆ ಕೌರವರ ಲ್ಲಿ ಭೀಷ್ಮರ ಶಂಖನಾದದ ಬಳಿಕ ದುರ್ಯೋಧನ, ದುಃಶಾಸನರ್ಯಾರೂ ಮೊಳಗಿಸಲಿಲ್ಲ. ಯಾರ್ಯಾರೋ ಮೊಳಗಿಸಿದರು. ಪಾಂಡವರಲ್ಲಿ ಶಂಖ ಊದಿದವರೆಲ್ಲ “ನಿರ್ಣಾಯಕರು’ (decision makers). ಕೌರವರಲ್ಲಿ ಹೀಗಲ್ಲ. ಯುದ್ಧದಲ್ಲಿ ಜಯ ಗಳಿಸಲು ಸಮನ್ವಯ ಮುಖ್ಯವೇ ವಿನಾ ಅಸ್ತ್ರ, ಶಸ್ತ್ರಗಳಲ್ಲ. ಭಾರತ ಪಾಕಿಸ್ಥಾನದೆದುರು ಗೆಲುವು ಸಾಧಿಸಿದ್ದು ಹೀಗೆ. ಭಾರತದಲ್ಲಿದ್ದ ಸಮನ್ವಯ (ಟೀಮ್ ಸ್ಪಿರಿಟ್) ಪಾಕಿಸ್ಥಾನದಲ್ಲಿರಲಿಲ್ಲ. ಅವರಲ್ಲಿ ಹೆಚ್ಚು ಅಸ್ತ್ರಶಸ್ತ್ರಗಳಿದ್ದವು.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811