Advertisement
ವಾಸ್ತವದಲ್ಲಿ ಹೀಗಲ್ಲ. ಇದು ಮನಸ್ಸಿನ ದುಃಸ್ವಭಾವ. ಜೀವರ ಸಾಧನೆಗೋಸ್ಕರ ದೇಹಕ್ಕೆ ಬಂದದ್ದು. ನೀನು, ದೇಹ, ಮನಸ್ಸು ಬೇರೆ. ನಾವು ಇದೆಲ್ಲವನ್ನು ಒಂದೇ ಎಂದು ತಿಳಿದಿದ್ದೇವೆ. ದೇಹ ಮತ್ತು ಆತ್ಮ ಕಟ್ಟಿಗೆ ಹಾಗೆ ಎರಡೂ ಜಡ. “ನೀನು’ ಮಾತ್ರ ಚೇತನ. ಚೇತನ ಹೋಗಿ ಜಡದ ಜತೆ ನಾನೂ ನೀನು ಒಂದೇ ಎಂದರೆ ಹೇಗೆ? ದೇಹ ಮತ್ತು ಮನಸ್ಸಿನ ಸ್ಥಿತಿಯೇ ಬೇರೆ. “ನೀನು’ ಇದಕ್ಕಿಂತ ಎತ್ತರವಿದ್ದಿ. ಬೇರೆಯವರ ಮನೆಗೆ ಬೆಂಕಿ ಬಿದ್ದರೆ ನಮಗೆ ಚಿಂತೆ ಆಗುವುದಿಲ್ಲ. ನನ್ನ ಮನೆಗೆ ಬೆಂಕಿ ಬಿದ್ದಿರೆ ಚಿಂತೆ ಆಗುತ್ತದೆ. ಇಲ್ಲಿ ಬೇಜವಾಬ್ದಾರಿತನ ಅಡರುತ್ತದೆ, ಆಗ ಕರ್ತವ್ಯಪ್ರಜ್ಞೆಯನ್ನು ಪ್ರತಿಷ್ಠಾಪಿಸಬೇಕು. ಎಲ್ಲ ತಣ್ತೀಗಳು ಇರುವುದು ಉಪದೇಶಕ್ಕಲ್ಲ, ಅಭ್ಯಾಸ ಮಾಡಲಿಕ್ಕೆ. ಅದನ್ನು ಅನುಭವಕ್ಕೆ ತಂದುಕೊಳ್ಳಬೇಕು. ಶಬ್ದಮೂಲದಿಂದ ಅನುಭವಜನ್ಯ ಸಾಧ್ಯವಾಗುವುದಿಲ್ಲ. ಸೈಕಲ್ ಲೀಲಾಜಾಲವಾಗಿ ಬಿಡುವವರು ಏಳದೆ ಬೀಳದೆ ಆಗುವುದೇ ಇಲ್ಲ. ಪಕ್ವವಾಗುವ ತನಕ ಪ್ರಾಥಮಿಕ ಅಡೆತಡೆಗಳು ಇರುತ್ತವೆ, ಸತತಾಭ್ಯಾಸದಿಂದ ಸುಲಭವಾಗುತ್ತದೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811