ಕುಲಕ್ಷಯ=ಕುಲಸಂಸ್ಕೃತಿಯ ಕ್ಷಯವೆಂದು ಅರ್ಥ. ಮೌಲ್ಯಗಳ ಟ್ರೆಂಡ್ ಸೆಟ್ ಮಾಡುವವರು ಮಹಿಳೆಯರು. ಸಾಮಾಜಿಕ ಸ್ಪರ್ಧೆಯೇ ಇದಕ್ಕೆ ಕಾರಣ. ಈಗ ಭೌತಿಕ ಆವಶ್ಯಕತೆಗಳನ್ನು ಹೆಚ್ಚಿಸುತ್ತ ಇದ್ದೇವೆ. ಹಿಂದೆ ವಸ್ತ್ರ, ಮನೆ, ಆಹಾರ ಇದ್ದರೆ ಸಾಕಿತ್ತು. ಸ್ಪರ್ಧಾ ಕಣದಲ್ಲಿ ಹೊಸ ಹೊಸ ಮಾಡೆಲ್‌ಗಳೆಲ್ಲ ಬರುತ್ತಿವೆ. ಭೌತಿಕ ಆವಶ್ಯಕತೆ ಉಂಟಾಗುವುದು ಮನೆಯಲ್ಲಿ. ಮದ್ಯ ಕುಡಿಯುವುದಕ್ಕೆ ಶುರು ಮಾಡಿದರೆ ಹಣ ಎಲ್ಲಿಂದ ಬರಬೇಕು? ಸಂಬಳ ಸಾಕಾಗುವುದಿಲ್ಲ. ಗಿಂಬಳ ತೆಗೆದುಕೊಳ್ಳಬೇಕು. ಸಿಕ್ಕಿಬಿದಾಗ ಸುಳ್ಳು ಹೇಳಬೇಕು. ಒಬ್ಬರು ಸುಳ್ಳು ಹೇಳಿದಾಗ ಸಪೋರ್ಟ್ ಮಾಡಿದವನಿಗೆ ಸಹಾಯ ಮಾಡಬೇಕು. ಹೀಗೆ ಒಂದು ದುಷ್ಟವಾದ ಮೌಲ್ಯಕ್ಕೆ ಹಲವು ದುಷ್ಟ ಮೌಲ್ಯಗಳು ಸೇರಿಕೊಳ್ಳುತ್ತವೆ. ಆದ್ದರಿಂದ ಮನೆಯಲ್ಲಿ ಮೊದಲು ಮಾಲಿನ್ಯ ಶುರುವಾಗುತ್ತದೆ ಎಂದು ಅರ್ಜುನ ಹೇಳಿದ. ಫ್ಯಾಶನ್ ಶುರುವಾಗುವುದು ಸಿನೆಮಾಗಳಿಂದ ಹೇಗೋ ಹಾಗೆ ಮೌಲ್ಯಗಳು ಮನೆಯಿಂದ ಶುರುವಾಗುತ್ತದೆ ಎಂದು ಅರ್ಜುನ ಹೇಳುತ್ತಾನೆ. ಫ್ಯಾಶನ್‌ಗೆ ನಿಜವಾಗಿ ಯಾವ ಅರ್ಹ ಮಾನದಂಡವಿದೆ? ಕೇವಲ ಒಬ್ಬ ಹೀರೋ ಅಥವಾ ಹೀರೋಯಿನ್ ಧರಿಸಿದ ಆಭರಣವನ್ನೋ? ಬಟ್ಟೆಯನ್ನೋ ಮಾರುಕಟ್ಟೆಗೆ ಪರಿಚಯಿಸಿ ಅದನ್ನೇ ಆಕರ್ಷಣೆ ಎಂದು ಬಿಂಬಿಸಿ ಎಲ್ಲರೂ ಅದರ ಹಿಂದೆ ಹೋಗುವಂತೆ ಮಾಡುವುದಿಲ್ಲವೆ? ಹಾಗೆಯೇ ಬೇಕುಗಳೆಲ್ಲ ಮನೆಗಳಿಂದ ಶುರುವಾಗುತ್ತದೆ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811