Advertisement

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

01:00 AM Sep 19, 2024 | Team Udayavani |

ಅರ್ಜುನನ ಮೇಲಿನ ಪ್ರೀತಿಯಿಂದ ಗುಟ್ಟಿನ ವಿಷಯವನ್ನು ಹೇಳುತ್ತೇನೆ (ಗುಹ್ಯತಮಂ) ಎಂದು ಕೃಷ್ಣ ಹೇಳುತ್ತಾನೆ. ಬಹಿರಂಗವಾಗಿ ಹೇಳಿ ಅನಂತರ ಇದು ಗುಟ್ಟು ಎಂದು ಹೇಳುವುದರಲ್ಲಿ ಅರ್ಥವಿದೆಯೆ ಎಂಬ ಸಂಶಯ ಬರುತ್ತದೆ. ಹೇಳುವುದು ಬೇರೆ, ಉಪದೇಶ ಕೊಡುವುದು ಬೇರೆ ಎಂಬ ಪರಿಜ್ಞಾನ ಬೇಕು. ಅರ್ಜುನ ನಿರ್ಮತ್ಸರಿಯಾದುದೂ ಪ್ರೀತಿಗೆ ಇನ್ನೊಂದು ಕಾರಣ. ಅನಸೂಯನಾದ ಕಾರಣ ನಿನಗೆ ಹೇಳುತ್ತಿದ್ದೇನೆ ಎಂಬುದು ಕೃಷ್ಣನ ಮಾತು.

Advertisement

“ನಿರ್ಮತ್ಸರಾಣಾಂ’ = ಅಸೂಯೆ. ಮತ್ಸರವೆಂದರೇನು? =ಮತ್ತಃ ಸರತೇತಿ ಮತ್ಸರಃ. ಒಬ್ಬ ತನಗಿಂತ ಮುಂದೆ ಹೋಗುತ್ತಾನೆ ಎಂದಾಗ ಹೊಟ್ಟೆಕಿಚ್ಚು ಉತ್ಪತ್ತಿಯಾಗುತ್ತದೆ. ರಾಮ ಪಟ್ಟಾಭಿಷೇಕ ಆಗುವಾಗ ಮಂಥರೆ ಏನೇ ಚುಚ್ಚಿಕೊಟ್ಟರೂ ಕೈಕೇಯಿ ಬಗ್ಗಲಿಲ್ಲ. “ರಾಮ ರಾಜನಾದರೆ ಆಗಲಿ, ನನಗೆ ಸಂತೋಷ’ ಎಂದೇ ಕೈಕೇಯಿ ವಾದವಾಗಿತ್ತು. ಕೊನೆಯಲ್ಲಿ ಮಂಥರೆ ಮತ್ಸರಬೀಜ ಬಿತ್ತುತ್ತಾಳೆ. “ಮುಂದೆ ರಾಜಮಾತೆ ಯಾರು ಆಗುತ್ತಾರೆ? ಕೌಸಲ್ಯೆೆ. ಆಗ ನಿನಗೆ ಏನು ಮಾನ್ಯತೆ ಸಿಗುತ್ತದೆ?’. ಈ ದುರುಪದೇಶ ಕೇಳಿದ ಮೇಲೆ ಕೈಕೇಯಿ ಮನಸ್ಸು ವ್ಯಗ್ರವಾಯಿತು, ಅನಸೂಯಳಾಗಿದ್ದವಳು ಅಸೂಯಾಪರಳಾದಳು.

ಪಾಂಡವರು ರಾಜಸೂಯ ಯಾಗ ಮಾಡಿದಾಗ ಬಂದ ಅಪಾರ ಸಂಪತ್ತನ್ನು ನೋಡಿ ಲೆಕ್ಕಾಧಿಕಾರಿಯಾದ ದುರ್ಯೋಧನನಿಗೆ ಅಸೂಯೆ ಉಂಟಾಯಿತು, ಇದುವೇ ಮಹಾಭಾರತದ ಬೆಳವಣಿಗೆಗೆ ಕಾರಣವಾಯಿತು.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement

 

Advertisement

Udayavani is now on Telegram. Click here to join our channel and stay updated with the latest news.

Next