ಧರ್ಮದಷ್ಟು ವಿಮರ್ಶೆಗೆ ಒಳಪಟ್ಟ ವಿಷಯ ಬೇರೊಂದು ಜಗತ್ತಿನಲ್ಲಿಲ್ಲ. ಕೆಲವೊಮ್ಮೆ ಸಮಯವಿಲ್ಲದೆ ತುರ್ತಾಗಿ ನಿರ್ಣಯವನ್ನು ತಳೆಯಬೇಕಾಗುತ್ತದೆ. ಆಗ ನೆರವಿಗೆ ಬರುವುದು “ಸಾಕ್ಷೀಪ್ರಜ್ಞೆ’ (“ಆತ್ಮಸಾಕ್ಷಿ’). ಸಾಕ್ಷಿಯ ಸಂದೇಶ ಸಿಗಬೇಕಾದರೆ ಅದನ್ನು ಶುದ್ಧವಾಗಿರಿಸಿಕೊಳ್ಳಬೇಕು. ಇಲ್ಲದಿದ್ದರೆ ಅದು ನಿರ್ದೇಶನವನ್ನು ಕೊಡುವುದಿಲ್ಲ. ಇದನ್ನು ಜಿಪಿಎಸ್‌ಗೆ ಹೋಲಿಸಬಹುದು. ವಾಹನಗಳಿಗೆ ಜಿಪಿಎಸ್ ಅಳವಡಿಸಿದ್ದರೂ ಅದು ಹೇಳಿದಂತೆ ನಡೆದುಕೊಳ್ಳದಿದ್ದರೆ ಮುಂದೆ ಅದು ಸಂದೇಶವನ್ನು ಕೊಡುವುದಿಲ್ಲ.
ಸಾಕ್ಷೀಪ್ರಜ್ಞೆ ಸಂದೇಶಗಳನ್ನು ಫಾಲೋ ಮಾಡುತ್ತಲೇ ಇರಬೇಕು. ಜಿಪಿಎಸ್ ಚಾರ್ಜ್‌ನಲ್ಲಿಯೂ ಇರಬೇಕು, ಆ್ಯಕ್ಟಿವ್ ಕೂಡ ಆಗಿರಬೇಕು. ಧರ್ಮದ ಅಂತಿಮ ನಿಷ್ಕರ್ಷೆಗೆ ಸಾಕ್ಷಿಯನ್ನೇ ಅವಲಂಬಿಸಬೇಕೆನ್ನುತ್ತಾನೆ ಶ್ರೀಕೃಷ್ಣ. “ಅಶ್ವತ್ಥಾಮೋ ಹತಃ ಕುಂಜರಃ’ ಎನ್ನುವಾಗ ಸುಳ್ಳು ಕೂಡ ಧರ್ಮ ಎನಿಸುತ್ತದೆ. ಒಂದು ವೇಳೆ ಈ ಸುಳ್ಳು ಹೇಳದೆ ಇದ್ದರೆ ಅರ್ಜುನ ಸತ್ತು ಹೋಗಿ ಅಂತಿಮ ತೀಪೇì ತಪ್ಪಾಗುತ್ತಿತ್ತು. ಧರ್ಮ ಎನ್ನುವುದು ಧಾರ್ಮಿಕರಿಗೆ ಮಾತ್ರ, ಅಧಾರ್ಮಿಕರಿಗೆ ಅಲ್ಲ.
ಕಳ್ಳನನ್ನು ರಾತ್ರಿ ವೇಳೆ ಅಮಾನವೀಯವಾಗಿ ಪೊಲೀಸರು ಕರೆದೊಯ್ಯುವುದು ಸರಿಯೆ ಎಂದು ಪ್ರಶ್ನಿಸುವುದೂ ತಪ್ಪು. ಕಳ್ಳನೆಂದು ತೀರ್ಮಾನವಾದಾಗ, ಸಂಶಯವಿದ್ದಾಗಲೂ ಎಷ್ಟು ಹೊತ್ತಿಗೂ ಕರೆದೊಯ್ಯಬಹುದು. ಧರ್ಮ ವಿರೋಧಿ ವಿಚಾರಗಳಲ್ಲಿ ಧಾರ್ಮಿಕ ನಿಯಮಗಳನ್ನು ಅನ್ವಯಿಸುವ ಅಗತ್ಯವಿರುವುದಿಲ್ಲ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811