“ವೃತ್ತಿ’ ಎನ್ನುವುದಕ್ಕೆ ಮನೋವೃತ್ತಿ ಎಂಬರ್ಥವಿದೆ. ಈಗ ವೃತ್ತಿ ಎನ್ನುವುದನ್ನು “ಉದ್ಯೋಗ’ ಎಂಬರ್ಥದಲ್ಲಿ ಕಾಣುತ್ತೇವೆ. ಮನೋವೃತ್ತಿ ಎಲ್ಲ ಪ್ರಾಣಿಗಳಿಗೂ ಅನ್ವಯ. ಪ್ರತಿಯೊಂದು ಪ್ರಾಣಿಯೂ (ಜೀವಿಗಳೂ) ಕರ್ಮ ಮತ್ತು ಸ್ವಭಾವಕ್ಕೆ ತಕ್ಕುದಾಗಿ ವ್ಯವಹರಿಸುತ್ತವೆ. ಸರ್ವಜೀವಿಗಳ ಉದ್ಧಾರವನ್ನುದ್ದೇಶಿಸಿ ಭಗವಂತ ವೇದವ್ಯಾಸರಾಗಿ ಅವತರಿಸಿದ ಎಂದದ್ದು ಇದೇ ಕಾರಣಕ್ಕೆ.
ಪ್ರಾಣಿ, ಪಕ್ಷಿಗಳಿಗೂ ಮಾನಸಿಕ ವೃತ್ತಿ ಇದ್ದೇ ಇರುತ್ತದೆ. ಇದರ ಆಧಾರದಲ್ಲಿಯೇ ಆ ಜೀವ ವಿಕಾಸಗೊಳ್ಳುತ್ತ ಮುಂದುವರಿದು ಮನುಷ್ಯನಾಗಿ ಮತ್ತೆ ಮೋಕ್ಷದತ್ತ ಪಯಣಿಸುತ್ತದೆ. ಇದಕ್ಕೆ ಪೂರಕವಾಗಿ ಧರ್ಮಶಾಸ್ತ್ರಗಳು ಹೇಳಲ್ಪಟ್ಟಿವೆ. ಅವರವರ ಯೋಗ್ಯತೆಗೆ ಅನುಸಾರವೇ ಅವರವರ ಚಿಂತನೆ ಮೊಳಕೆಯೊಡೆಯುತ್ತವೆ.
ರಾವಣನ ಆಸ್ಥಾನದಲ್ಲಿಯೇ ವಿಭೀಷಣನಿದ್ದರೂ ಇಬ್ಬರ ಚಿಂತನೆಗಳು ಭಿನ್ನ ಭಿನ್ನ ಆಗಿದ್ದವು. ಏಕೆ ಎಂದು ಕೇಳಿದರೆ ಆಯಾ ಜೀವದ ಯೋಗ್ಯತೆ ಕಾರಣ. ಒಳ್ಳೆಯವರೂ ಕರ್ಮದ ಕಾರಣದಿಂದ ದಾರಿ ತಪ್ಪುವುದಿದೆ, ಆದರೆ ಕೊನೆಗೆ ತನ್ನ ಸ್ವಭಾವಕ್ಕೆ ಮರಳುತ್ತಾರೆ. ದೇವರ ಇಚ್ಛೆಯನ್ನು ಅರಿಯಲು ವಿಮರ್ಶೆ (ಚಿಂತನೆ) ಮಾಡುತ್ತಲೇ ಇರಬೇಕಾಗುತ್ತದೆ. ನಮ್ಮಿಂದ ಭಗವಂತ ಏನನ್ನು ಮಾಡಲು ಉದ್ದೇಶಿಸಿದ್ದಾನೆ ಎಂಬ ಚಿಂತನೆ ಸತತ ಇರಬೇಕು. ನಾವು ಮಾಡುವ ಕಾರ್ಯ ವಿಹಿತವೂ, ಸತ್ಕಾರ್ಯವೂ ಆಗಿರಬೇಕು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811