Advertisement

Udupi: ಗೀತಾರ್ಥ ಚಿಂತನೆ-63: ಕುಲದ ಕೀರ್ತಿಗಾಗಿ ಹೋರಾಡಿದ ಪಾಂಡವರು

02:06 AM Oct 14, 2024 | Team Udayavani |

ಮಾಧವಪಾಂಡವರು ಶಂಖನಾದ ಮಾಡಿದರು ಎಂಬಲ್ಲಿ ಮಾಧವ ಶಬ್ದ ಮಧುವಂಶವನ್ನೂ ಸೂಚಿಸುತ್ತದೆ. ಮಧುವಂಶವೆಂದರೆ ಯದುವಂಶ.

Advertisement

ಕಾರ್ತ್ಯವೀರ್ಯಾರ್ಜುನನ ಮಗ ಮಧು. ಮಾಧವ ಅಂದರೆ ಕೃಷ್ಣ ಈ ವಂಶದಿಂದ ಬಂದವ. ಅರ್ಜುನ ಪಾಂಡುವಂಶದ ಕೀರ್ತಿಯನ್ನು ಬೆಳಗಿಸಿದವ. ಮಾಧವ ಮಧು ವಂಶದ ಕೀರ್ತಿಯನ್ನು ಬೆಳಗಿಸಿದವ. ಪಾಂಡವರ ಕಡೆಯಲ್ಲಿ ವಂಶ/ಕುಲವನ್ನು ಬೆಳಗಿಸುವ ಗುರಿ ಇದೆಯೆ ವಿನಾ ಸ್ವಂತದ (ಸ್ವಾರ್ಥ) ಉದ್ದೇಶವಿಲ್ಲ. ಕುಲದ ಕೀರ್ತಿಗಾಗಿ ಹೋರಾಡುವವರಿಗೆ ಬಹಳ ಮಹತ್ವವಿದೆ. ಕೌರವರ ಕಡೆಯಲ್ಲಿ ಕುಲದ ಕೀರ್ತಿಯನ್ನು ಎತ್ತಿಹಿಡಿಯುವ ಆಸಕ್ತಿ ಕಾಣದೆ ಸ್ವಂತ ಹಿತಾಸಕ್ತಿ ಎದ್ದು ಕಾಣುತ್ತದೆ. ದುರ್ಯೋಧನ “ಮಮಸೈನ್ಯಾಶ್ಚ’ ಎಂದು ಹೇಳಿದ್ದನಲ್ಲವೆ? ಇವರಿಗೆ ಸ್ವಂತ ಪ್ರತಾಪವೇ ಮುಖ್ಯ. ಪಾಂಡವರ ಶಂಖವನ್ನು ದಿವ್ಯ ಶಂಖವೆಂದು ಬಣ್ಣಿಸಲಾಗಿದೆ. ಈ ಶಂಖಕ್ಕೆ ಸುದೀರ್ಘ‌ ಇತಿಹಾಸವಿದೆ.

ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ (ಗೀತೆ 1-15). “ದೇವದತ್ತ’ವೆಂಬ ಶಂಖವು ದೇವತೆಗಳಿಂದ ಅರ್ಜುನನಿಗೆ ಬಂದದ್ದು. ದೇವತೆಗಳು ಜಯವಾಗಲಿ ಎಂದು ಹರಸಿ ಕೊಟ್ಟ ಶಂಖವಿದು. ಇಂತಹ ಇತಿಹಾಸ ಕೌರವರ ಕಡೆಯವರ ಶಂಖಕ್ಕೆ ಇಲ್ಲ. ಯಾರಿಗೆ ಯಾವ ದೇವತೆಗಳ ವರಗಳಿವೆ ಎಂಬ ಮಾನದಂಡದಲ್ಲಿ ಅವರ ಶೂರತ್ವ, ಧೀರತ್ವವನ್ನು ಅಳೆಯುತ್ತಿದ್ದರೆ ವಿನಾ ಎಷ್ಟು ಅಸ್ತ್ರ, ಶಸ್ತ್ರಗಳಿವೆ ಎಂಬ ಮಾನದಂಡದಲ್ಲಿ ಅಲ್ಲ.

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next