Advertisement

Udupi: ಗೀತಾರ್ಥ ಚಿಂತನೆ-52: ಯುದ್ಧ ಮೂಲ ಸ್ವಾರ್ಥ, ಪಕ್ಷಪಾತ

02:35 AM Oct 02, 2024 | Team Udayavani |

ವೈದ್ಯರು ಕಫ‌, ರಕ್ತ, ಮೂತ್ರ ಇತ್ಯಾದಿ ಮಾದರಿಗಳನ್ನು ಸಂಗ್ರಹಿಸಿ ರೋಗವನ್ನು ಹೇಗೆ ಪತ್ತೆ ಹಚ್ಚುತ್ತಾರೋ ಹಾಗೆಯೇ ವ್ಯಕ್ತಿಯ ಬಾಯಲ್ಲಿ ಹೊರಬರುವ ಶಬ್ದಗಳಿಂದ ಆತನ ಮಾನಸಿಕ ಸ್ಥಿತಿಯನ್ನು ತಿಳಿಯಬಹುದು. ಅದು ಭೌತಿಕ ಸ್ಥಿತಿಯಾದರೆ, ಇದು ಮಾನಸಿಕ ಸ್ಥಿತಿ. ಮಾಮಕಾಃ ಎನ್ನುವ ಶಬ್ದವೇ ಧೃತರಾಷ್ಟ್ರನ ಮಾನಸಿಕತೆಯನ್ನು ತೋರಿಸುತ್ತದೆ.

Advertisement

ಎಲ್ಲ ಯುದ್ಧಗಳ ಮೂಲವೂ ಇಲ್ಲೇ ಇದೆ. “ಅವರು ನನ್ನವರು’, “ಇವರು ನನಗೆ ಇಷ್ಟವಿಲ್ಲ’ ಎಂಬ ಮನೋಧೋರಣೆಯೇ ಯುದ್ಧಕ್ಕೆ ಮೂಲ. ಯುದ್ಧ ಸನ್ನದ್ಧವಾದಾಗ ದುರ್ಯೋಧನ ನೇರವಾಗಿ ಓಡಿ ಬರುವುದೇ ದ್ರೋಣಾಚಾರ್ಯರಲ್ಲಿಗೆ (ದೃಷ್ಟಾತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ| ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್‌-ಗೀತೆ 2). ಆತ ತನ್ನ ಸೈನ್ಯವನ್ನು ನೋಡಬೇಕಿತ್ತು. ಅದರ ಬದಲು ಆತ ನೋಡಿದ್ದು ಪಾಂಡವರ ಸೈನ್ಯವನ್ನು. ತನ್ನ ಸೈನ್ಯವನ್ನು “ಆ ಸೈನ್ಯವನ್ನು’ ಎಂದು ಸಂಬೋಧಿಸುತ್ತಾನೆ. ಇದೆಲ್ಲವೂ ಮಾನಸಿಕತೆಯನ್ನು ತೋರಿಸುತ್ತದೆ. ವಾಸ್ತವದಲ್ಲಿ ದುರ್ಯೋಧನ ರಾಜನಲ್ಲ, ರಾಜಪುತ್ರನಷ್ಟೆ. ರಾಜನಾಗಿರುವುದು ಧೃತರಾಷ್ಟ್ರ. ರಾಜನೆಂದು ತನ್ನನ್ನು ತಾನೇ ದುರ್ಯೋಧನ ಹೇಳಿಕೊಳ್ಳುತ್ತಾನೆ. ಯುದ್ಧ ಬೇಕೋ ಬೇಡವೋ ಎಂದು ಮಾತುಕತೆಯಾಗುವಾಗ ತಮ್ಮ ಜತೆ ಭೀಷ್ಮಾಚಾರ್ಯರಂತಹವರು ಇದ್ದಾರೆಂದ ದುರ್ಯೋಧನ ಈಗ ಸೇನಾಪತಿಗಳನ್ನು ಬಿಟ್ಟು ದ್ರೋಣರಲ್ಲಿಗೆ ಏಕೆ ಹೋದ?

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

 

Advertisement
Advertisement

Udayavani is now on Telegram. Click here to join our channel and stay updated with the latest news.

Next