“ಇದಾವುದೂ ನನ್ನದ್ದಲ್ಲ, ದೇವರಿಗೆ ಸೇರಿದ್ದು’ ಎಂದು ತಿಳಿದರೆ ಯಾವ ಸಮಸ್ಯೆಯೂ ಬರುವುದಿಲ್ಲ. “ನಾನು ಇವನನ್ನು (ಜೀವರನ್ನು) ಸ್ವಲ್ಪ ದಿನ ಇದ್ದು ಸಾಧನೆ ಮಾಡಲಿ ಎಂದು ಕಳಿಸಿದರೆ ಅದನ್ನು ನನ್ನದು ಎಂದು ಮಾಡುತ್ತಾನಲ್ಲ?’ ಎಂದು ದೇವರಿಗೂ ಅನಿಸುತ್ತದೆ.
ವಸ್ತುವನ್ನು ಉಪಯೋಗಿಸಿ ಫಲ ಸಿಕ್ಕಿದ್ದನ್ನು ಉಪಯೋಗಿಸಿದರೆ ದೇವರಿಗೇನೂ ಬೇಜಾರಿಲ್ಲ. ಓನರ್‌ಶಿಪ್/ ಸ್ವಾಮಿತ್ವವನ್ನೇ ಕೇಳುವುದು ಮನುಷ್ಯರ ಬುದ್ಧಿ. ಪ್ರಯಾಣ ಮಾಡುವುದು ಮುಖ್ಯವಾಗಬೇಕೆ ವಿನಾ ವಾಹನದ ಮಾಲಕತ್ವ ಮುಖ್ಯವಲ್ಲ. ಕಾರು ಯಾರದ್ದಾದರೇನು? ನಮ್ಮ ಮನಸ್ಸು ಅಷ್ಟಕ್ಕೆ ಸುಮ್ಮನಿರದು. ಅದು ಕೂಡಲೇ ಓನರ್‌ಶಿಪ್‌ನ್ನೇ ಬಯಸುತ್ತದೆ. ದೇವರ ಓನರ್‌ಶಿಪ್‌ನ್ನು ಒಪ್ಪಿದರೆ ಸಮಸ್ಯೆ ಏನಿಲ್ಲ.
ಆತನ / ಇನ್ನಾರದೇ ಓನರ್‌ಶಿಪ್ ಒಪ್ಪದಿರುವುದೇ ದುಃಖಕ್ಕೆ ಕಾರಣ. “ಈಶಾವಾಸ್ಯಮಿದಂಸರ್ವಂ..’ (ಎಲ್ಲವೂ ದೇವರದ್ದು) ಎಂದು ತಿಳಿದರೆ ನನ್ನದಾದರೂ ಒಂದೇ ದೇವರದ್ದಾದರೂ ಒಂದೇ. ಕದ್ದು ತಿನ್ನುವುದೇದಕ್ಕೆ? ಮಾಲಕರಲ್ಲಿ ಕೇಳಿದರೆ ಒಂದಲ್ಲ ಹತ್ತು ಕೊಡಬಹುದು. ದೇವರೆಂಬ ಮಾಲಕರದೂ ಇದೇ ಅಭಿಪ್ರಾಯ. ಆದರೆ ಮನುಷ್ಯನೆಂಬ ಜೀವಿಗೆ ಕದ್ದು ತಿನ್ನುವುದರಲ್ಲಿಯೇ ಸುಖ. ಈತನಿಗೋ ಒಂದು ತಿಂದರೆ ಅದಕ್ಕೆ ಅಷ್ಟೇಕೆ ಸಿಟ್ಟು ಎಂದುಕೊಂಡಿರುತ್ತಾನೆ. ಮಾಲಕರಿಗೋ ಇನ್ನೆಷ್ಟು ತಿಂದಿದ್ದಾನೋ ಎಂಬ ಗಾಬರಿ. ದೇವರಿಗೆ ಸಮರ್ಪಣೆ ಮಾಡಿದ್ದನ್ನು ದೇವರು ತಿನ್ನುತ್ತಾನೋ? ಆದ್ದರಿಂದ ಎಲ್ಲವೂ ಆತನದೇ ಎಂದು ಹೇಳಿ ತಿನ್ನಬಹುದಲ್ಲ!
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811