ಪರೀಕ್ಷೆಗೆ ಓದುತ್ತೇವೆ. ಅಕ್ಟೋಬರ್ನಲ್ಲಿ ಪ್ರಶ್ನೆ ಪತ್ರಿಕೆ ತಯಾರಾಗುತ್ತದೆ. ಓದುವವರು ನವೆಂಬರ್ನಲ್ಲಿ ಓದುತ್ತಿರುತ್ತೇವೆ. ಅಲ್ಲಿ ಪ್ರಶ್ನೆಪತ್ರಿಕೆ ಈಗಾಗಲೇ ತಯಾರಾಗಿದೆ. ಈಗ ಸಾವಿರ ಪುಟ ಏಕೆ ಓದುವುದು? ಪ್ರಶ್ನೆ ಪತ್ರಿಕೆಯಲ್ಲಿ ಏನಿದೆ ಎಂದು ಗೊತ್ತಿಲ್ಲದಿರುವುದು ಇದಕ್ಕೆ ಕಾರಣ. ಪರೀಕ್ಷೆ ಮುಗಿದ ಬಳಿಕವೇ ನಾವು ಇಷ್ಟೆಲ್ಲ ಓದಿದ್ದು ವ್ಯರ್ಥ ಎಂದೆನಿಸುತ್ತದೆ.
ಆದರೆ ಅದಕ್ಕೂ ಮುಂಚೆ ಎಲ್ಲವನ್ನೂ ಓದಬೇಕು. ಆ ಪ್ರಶ್ನೆ ಪತ್ರಿಕೆಯಲ್ಲಿ ಏನು ಪ್ರಶ್ನೆ ಬಂದಿರಬಹುದು ಎಂದು ಊಹಿಸುವುದು ಜಾಣತನ. ನಮ್ಮ ಮನಸ್ಸಿನಲ್ಲಿರುವುದನ್ನು ನಾವು ಅರಿಯುತ್ತಲೇ ಇರಬೇಕು. ಹಿಂದಿನ ಕೆಲವು ಪ್ರಶ್ನೆಪತ್ರಿಕೆಗಳನ್ನು ತಿರುವು ಹಾಕಿ ಕೆಲವು ಪ್ರಶ್ನೆಗಳನ್ನು ಕೊಟ್ಟಿರುತ್ತಾರೆಂಬುದನ್ನು ಅರಿಯುವುದು ಜಾಣತನ.
ರಾಮಾಯಣ, ಮಹಾಭಾರತಾದಿ ಗ್ರಂಥಗಳಲ್ಲಿ ಆದ ಅನುಭವದ ಬಗೆಗೆ ಮಹಾತ್ಮರು ತೀರ್ಪು ನೀಡಿಯಾಗಿದೆ. ಅಲ್ಲಿ ಸಂಶೋಧನೆ ಆಗಿದೆ. ಅದನ್ನು ತಿಳಿಯಬೇಕು. ನಾವು ಪ್ರತಿಯೊಂದನ್ನೂ ಪರೀಕ್ಷಿಸುತ್ತ ಕುಳಿತರೆ ನಮ್ಮ ಆಯುಷ್ಯ ವ್ಯರ್ಥವಾಗಿ ಪೋಲಾಗುತ್ತದೆ. ಮುಂದೆ ಬರುವುದನ್ನು ಮುಂಚಿತವಾಗಿಯೇ ಗ್ರಹಿಸಬೇಕು. ಮೋಹವನ್ನು ತೆಗೆದು ಕರ್ತವ್ಯಪ್ರಜ್ಞೆಯನ್ನು ಅದೇ ಜಾಗದಲ್ಲಿ ಇಡುವುದು ಬಹಳ ಮುಖ್ಯ ಎಂದು ಶ್ರೀಕೃಷ್ಣ ಹೇಳುತ್ತಾನೆ.
ಶಸ್ತ್ರಚಿಕಿತ್ಸೆ ಆದ ಬಳಿಕ ಆ ಸ್ಥಳದಲ್ಲಿ ಸೂಕ್ತವಾದ ಇನ್ನೊಂದನ್ನು ಕೂಡಿಸಿಬಿಡಬೇಕು. ಮೋಹ ಬರುವುದು ಸಹಜ. ಅದನ್ನು ಬಿಡದಿರುವುದು ತಪ್ಪು.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811