Advertisement
ದುರ್ಯೋಧನನಿಗೆ ತನ್ನ ನಾಯಕರು ಅನಾಯಕರಾಗಿ ಕಾಣುತ್ತದೆ. ನಾಯಕರಿಲ್ಲದಿದ್ದರೂ ಕಷ್ಟ, ಎಲ್ಲರೂ ನಾಯಕರಾದರೂ ಕಷ್ಟವೇ. “ಮದರ್ಥೇ ತ್ಯಕ್ತಜೀವಿತಾಃ’ ತನಗಾಗಿ ಜೀವ ಕೊಡಲು ಬಂದವರು ಎನ್ನುವುದು ಆತನ ಸ್ಥಿತಿ ದಯನೀಯ ಎಂಬುದನ್ನು ತೋರಿಸುತ್ತದೆ. “ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್| ಪರ್ಯಾಪ್ತಂ ತ್ವಿದ ಮೇತೇಷಾಂ ಬಲಂ ಭೀಮಾಭಿರಕ್ಷಿತಮ್|| (ಗೀತೆ 10). ಇಲ್ಲಿ ಭೀಷ್ಮರಲ್ಲಿ ರಕ್ಷಿತವಾದ ತನ್ನ ಸೇನೆ ಸಮರ್ಪಕವಾಗಿಲ್ಲವೆಂದೂ, ಭೀಮನಿಂದ ರಕ್ಷಿತವಾದ ಸೇನೆ ಸಮರ್ಪಕವಾಗಿದೆ ಎಂದೂ ಹೇಳುತ್ತಾನೆ. ಭೀಷ್ಮರು ಪಾಂಡವ ಪಕ್ಷಪಾತಿ ಎಂದು ತಿಳಿದಿದ್ದ ದುಯೋಧನನೇ ಸೇನೆಗೆ ಆಯ್ಕೆ ಮಾಡಿಕೊಂಡಿದ್ದ. ಹೀಗೆ ಮಾಡಿಯೂ ಸಮರ್ಪಕವಲ್ಲ ಎನ್ನುತ್ತಾನೆ. ಪಾಂಡವರ ಸೇನಾಪತಿ ದೃಷ್ಟದ್ಯುಮ್ನನಾಗಿರುವುದರಿಂದ ಆತನಿಂದ ಸೇನೆ ರಕ್ಷಿತವಾಗಿದೆ ಎಂದು ಹೇಳುವ ಬದಲು ಪಾಂಡವ ಸೇನೆ ಭೀಮನಿಂದ ರಕ್ಷಿತವಾಗಿದೆ ಎನ್ನುತ್ತಾನೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811