Advertisement
ನಮಗಾದ ಒಂದು ಅನುಭವ ಹೀಗಿದೆ: ಗುರುಕುಲ ವಿದ್ಯಾಭ್ಯಾಸ ಮುಗಿದ ತತ್‌ಕ್ಷಣ ಆಧುನಿಕ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕೆಂದು ಭಾರೀ ಉತ್ಸಾಹವಿತ್ತು. ಆಗ ನಮ್ಮ ವಿದ್ಯಾಗುರು ಶ್ರೀವಿದ್ಯಾಮಾನ್ಯತೀರ್ಥರು ಕಣ್ಣು ತೆರೆಸಿದರು. “ನಿಮ್ಮಿಂದ ಮಧ್ವಾಚಾರ್ಯರು, ವಾದಿರಾಜರು ಏನನ್ನು ನಿರೀಕ್ಷಿಸುತ್ತಾರೆ? ಲೌಕಿಕ ಶಿಕ್ಷಣ ಸಂಸ್ಥೆಗಳನ್ನು ನಡೆಸಿದರೆ ಅವರಿಗೆ ಸಂತೋಷವಾಗಬಹುದು ಎಂದು ಅನಿಸುತ್ತದೆಯೆ? ಭಗವಂತ ನಿಮ್ಮನ್ನು ಈ ಸ್ಥಾನದಲ್ಲಿ ಕೂರಿಸಿದ ಉದ್ದೇಶವೇನು?’ ಎಂದು ಗುರುಗಳು ಪ್ರಶ್ನಿಸಿದರು. ಆಗ ಅರ್ಥವಾಯಿತು. ಖರ್ಚಿನ ಬಾಬ್ತೇ ಆಗಿರುವ, ಲಾಭವೇ ಇರದ ಧಾರ್ಮಿಕ ಶಿಕ್ಷಣದ ವಿದ್ಯಾಪೀಠ ನಡೆಸುವುದು ಕಷ್ಟ. ಎಷ್ಟು ಸಾಧ್ಯವೋ ಅಷ್ಟು ಮಾಡಬಹುದು ಎಂದು ಆಗಲೇ ನಿರ್ಧರಿಸಿ ಮುಂದುವರಿದೆವು.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811