ಗೀತೋಪದೇಶ ಕೇಳಿದ ಮೇಲೆ ಅರ್ಜುನ “ನಷ್ಟೋ ಮೋಹಃ ಸ್ಮತಿಲಬ್ಧಃ’ ಎನ್ನುತ್ತಾನೆ. ಹಿಂದೆ ಸಾಕಷ್ಟು ಅಂಶಗಳನ್ನು ಹೇಳಿದರೂ ಕೃಷ್ಣನ ವಿಚಾರಗಳನ್ನು ತಿಳಿಸಿ ಅದು ಸರಿ ಎಂದು ಮಾತ್ರ ಹೇಳದೆ, “ಮೋಹ ನಷ್ಟವಾಯಿತು, ಸ್ಮತಿ ಬಂತು’ ಎಂದು ಹೇಳಿದ.
ಅದುವರೆಗೆ ಅರ್ಜುನ ಜಗತ್ತಿನ ವ್ಯವಹಾರಗಳಲ್ಲಿ ತನ್ನ ಪಾಲುದಾರಿಕೆ ಇದೆ ಎಂದು ತಿಳಿದಿದ್ದ. ಈಗ ಕೃಷ್ಣ ಹೇಳಿದ “ನಾನು ಹೇಳುತ್ತೇನೆ. ನೀನು ಹೀಗೆ ಮಾಡು’. ಅಂದರೆ ಅರ್ಜುನನಿಗೆ ಯಾವ ಪಾಪವೂ ಇಲ್ಲ ಎಂಬ ಸ್ಪಷ್ಟ ಅರಿವು ಬಂತು. ವಸ್ತುವಿನ ಮಾಲಕನೇ ಹೇಳಿದ ಮೇಲೆ ಕೆಲಸ ಮಾಡಿದವನಿಗೆ ಏನು ಸಮಸ್ಯೆ ಬರುತ್ತದೆ? ಆದ್ದರಿಂದ ಭಗವಧೀನತೆಯನ್ನು ಎಲ್ಲರೂ ಒಪ್ಪಿಕೊಂಡರೆ ಯಾವ ಸಮಸ್ಯೆಯೂ ಬಾರದು.
ದುರ್ಯೋಧನ ಮಾತ್ರ “ಮಮಧರಾ’ (ಧರಾ ಮಮ= ಭೂಮಿ ನನ್ನದು) ಎಂದ. ಪಾಂಡವರು, ಶ್ರೀಕೃಷ್ಣನು ಧರ್ಮದ ಬಗೆಗೆ ಮಾತನಾಡಿದರೆ ದುರ್ಯೋಧನ “ಧರಾ ಮಮ’ ಎಂದ. “ನನ್ನದು’ ಎಂದಾಗ ಸಮಸ್ಯೆ, “ನನ್ನದಲ್ಲ’ ಎಂದಾಗ ಸಮಸ್ಯೆಗಳ ನಿವಾರಣೆ. ಸತ್ಯಯುಗದಲ್ಲಿ ರಾಜ, ಸೈನ್ಯ ಇರಲಿಲ್ಲ. “ಎಲ್ಲವೂ ದೇವರದ್ದು’ ಎಂಬ ಭಾವ ಇತ್ತು. ಕ್ರಮೇಣ ಇದು ನಷ್ಟವಾಯಿತು. ಧರ್ಮ ನಾಶವಾದಾಗ “ನನ್ನದು’ ಎಂಬ ಭಾವ ಬರುತ್ತದೆ. ಇದರಿಂದಲೇ ಎಲ್ಲ ಸಮಸ್ಯೆಗಳು ಉದ್ಭವವಾಗುತ್ತದೆ. ಜಗಳ ಆರಂಭವಾಗುವುದೇ “ಇದು ನನ್ನದು’ ಎಂದಾಗ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811