ಆತ್ಮಸಂತೋಷ ಸಿಕ್ಕಿದರೆ ಫಲ ಸಿಕ್ಕಿದಂತೆ. ಮತ್ತೆ ಸಿಗುವ ಮಾನ, ಸಮ್ಮಾನವೆಲ್ಲವೂ ಹೆಚ್ಚುವರಿ. ನಾವು ವ್ಯಕ್ತಿಗಳನ್ನಾಧರಿಸಿ ದುಃಖಿತರಾಗುತ್ತೇವೆ. ನೂರು ವರ್ಷಗಳ ಬಳಿಕ ಈ ಜಗತ್ತಿನಲ್ಲಿ ಯಾರೂ ಇರುವುದಿಲ್ಲ. ಇವರೆಲ್ಲ ಹೇಳಿದ್ದಕ್ಕೆ ಏಕೆ ಚಿಂತಿಸಬೇಕು? ಇವರೆಲ್ಲ ತಾತ್ಕಾಲಿಕ.
ಶಾಶ್ವತವಾಗಿರುವವ ಯಾರು? ಭಗವಂತ ಮಾತ್ರ. ಇಂತಹ ದೇವರ ಪ್ರೀತಿ ಸಿಕ್ಕಿದರೆ ಸಾಕು ಎಂಬ ಭಾವ ತಾಳಿದರೆ ಇನ್ನೇನು ಬೇಕು? ಆತ್ಮಕ್ಕೆ ಮನಸ್ಸು, ಜೀವ, ಪರಮಾತ್ಮ ಎಂಬರ್ಥವಿದೆ. “ಕರ್ಮ ಯೋಗ’ವೆಂದರೆ ಮಾನಸಿಕ ಕರ್ಮ. ಬಾಹ್ಯಕರ್ಮವೇನಿದ್ದರೂ ಅದು ಸ್ಪಂದನೆ ಮಾತ್ರ. ಶ್ರೀಕೃಷ್ಣ ಗೀತೆಯಲ್ಲಿ ಯೋಚನೆ ಮಾಡು ಎನ್ನುತ್ತಾನೆ, ಯೋಚನೆ ಮಾಡಬೇಕು ಹೌದು, ಎಲ್ಲಿಯವರೆಗೆ? ಒಂದು ಮಿತಿವರೆಗೆ.
ಇಂಗ್ಲಿಷ್‌ನಲ್ಲಿ ಒಂದು ಮಾತಿದೆ: “”do your best. prepare for worst”’. ನಾವು best ಬಗ್ಗೆ ಮಾತ್ರ ಯೋಚಿಸುತ್ತೇವೆ. worst ನ್ನು ಯೋಚಿಸಿದರೆ ಬೇಸರವಾಗದು. ನಮ್ಮನ್ನು ಸ್ಪೆಶಲ್ ಎಂದು ತಿಳಿದುಕೊಂಡರೆ ಇತರರು ನಮ್ಮನ್ನು ಸ್ಪೆಶಲ್ ಅಲ್ಲವೆಂದು ಹೇಳಿದಾಗ ಕಷ್ಟವಾಗುತ್ತದೆ. ನಾವು ಸ್ಪೆಶಲ್ ಅಲ್ಲ, ದಾಸಾನುದಾಸ ಎಂದು ತಿಳಿದರೆ ದುಃಖವೇ ಇಲ್ಲ. ಅದಕ್ಕಾಗಿಯೇ ಶ್ರೀಕೃಷ್ಣ ನನಗೆ ಶರಣಾಗು (ಮನ್ಮನಾ ಭವ ಮದ್ಭಕ್ತೋ) ಎಂದು ಹೇಳಿದ್ದು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811