Advertisement
ಭಗವತ್ಪ್ರೀತಿ ಇಲ್ಲದಿದ್ದರೆ ಯಾವ ಪೂಜೆಯೂ ವ್ಯರ್ಥವೇ. ಕೊಲೆ ಮಾಡಿದವನನ್ನು ಜೈಲಿನಲ್ಲಿ ಗಲ್ಲಿಗೇರಿಸಲಾಗುತ್ತದೆ. ಮೊದಲು ಮಾಡಿದ್ದು ಕೊಲೆ, ಗಲ್ಲಿಗೇರಿಸುವುದೂ ಒಂದರ್ಥದಲ್ಲಿ ಅದುವೇ. ಎರಡೂ ಜೀವಾಪಹರಣವೇ. ಕೊಲೆ ಮಾಡುವವನಿಗೆ ದ್ವೇಷವಿತ್ತು ಮತ್ತು ಆತನಿಗೆ ಶಿಕ್ಷೆ ಇದೆ. ಗಲ್ಲಿಗೇರಿಸುವವನಿಗೆ ದ್ವೇಷವೇ ಇಲ್ಲ. ಈತನದು ಕೆಲಸವಷ್ಟೆ. ಗಲ್ಲಿಗೇರಿಸುವವನಿಗೆ ಆಕರ್ಷಕ ವೇತನವಿರುತ್ತದೆ. ಏಕೆಂದರೆ ಆ ಕೆಲಸಕ್ಕೆ ಯಾರೂ ಬರುವುದಿಲ್ಲ. ಪ್ರಳಯ ಕಾಲದಲ್ಲಿ ರುದ್ರದೇವರು ಇಡೀ ಜಗತ್ತನ್ನು ಸಂಹರಿಸುತ್ತಾರೆ. ಪರೀಕ್ಷೆ ಮುಗಿದ ಬಳಿಕ ಸಭಾಂಗಣದ ಬೆಳಕು ಆರಿಸಿದರೆ ಸರಿ. ಜಗತ್ತಿನ ವ್ಯವಸ್ಥೆ ಬೇಕೆಂದು ಭಗವಂತ ನಿರ್ಧರಿಸಿದರೆ ಬೇಕು, ಇನ್ನು ಮುಗಿಯಿತು ಪ್ರಳಯವಾಗಲಿ ಎಂದು ಇಚ್ಛಿಸಿದರೆ ಸಂಹಾರವೇ ಸರಿ. ಆತ ಲೋಕ ನಡೆಯಬೇಕೆಂದು ಇಚ್ಛಿಸಿದರೆ ಸಂಹರಿಸಲಾಗದು, ಮುಂದುವರಿಯಬಾರದೆಂದು ಆತ ಇಚ್ಛಿಸಿದರೆ ನಡೆಸಲು ಆಗದು. ಯಾರಾದರೂ ಸಾಯಬೇಕೆಂದು ಬಯಸುತ್ತಾರಾ? ಹಾಗಿದ್ದರೂ ಯಾರಾದರೂ ಸಾವಿನಿಂದ ಬಚಾವಾದದ್ದುಂಟೋ? ಇದಕ್ಕಾಗಿಯೇ ಹೇಳಿದ್ದು ಭಗವಂತ ಜಗತ್ತಿನೊಡೆಯನೆಂದು. ಆತನ ನಿರ್ಧಾರವೇ ಅಂತಿಮವಾಗಿ ನಡೆಯುವುದು.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
Related Articles
Advertisement