Advertisement

Udupi: ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ನಿಧನ

08:09 PM Jul 03, 2024 | Team Udayavani |

ಉಡುಪಿ: ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ರೆಕ್ಟರ್ ವಂ|ವಲೇರಿಯನ್ ಮೆಂಡೋನ್ಸಾ ಅವರು ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು ಅವರಿಗೆ 75 ವರ್ಷ ವಯಸ್ಸಾಗಿತ್ತು.

Advertisement

ಶಿರ್ವ ಸಮೀಪದ ಪಿಲಾರ್ ಚರ್ಚಿನಲ್ಲಿ 1949 ರ ಡಿಸೆಂಬರ್ 9 ರಂದು ಜನಿಸಿದ್ದ ಅವರಿಗೆ 1976 ರ ಮೇ 7 ರಂದು ಗುರುದೀಕ್ಷೆ ಲಭಿಸಿತ್ತು. ಬಳಿಕ ವಿವಿಧ ಚರ್ಚುಗಳಲ್ಲಿ ಸಹಾಯಕ ಧರ್ಮಗುರುಗಳಾಗಿ, ಧರ್ಮಗುರುಗಳಾಗಿ, ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.

ಅವರು ರೋಮ್ನ ಅರ್ಬನ್ ಯೂನಿವರ್ಸಿಟಿಯಿಂದ B.Th ಜೊತೆಗೆ ಇಂಗ್ಲಿಷ್ನಲ್ಲಿ MA ಮತ್ತು ಮೀಡಿಯಾ ಸಂವಹನದಲ್ಲಿ ಡಿಪ್ಲೊಮಾವನ್ನು (ರೇಡಿಯೋ ಮತ್ತು AV ಏಡ್ಸ್) ಪಡೆದರು.

ಅವರ ಸೇವಾ ವಿವರ ಈ ರೀತಿ ಇದೆ:
1976: ಜೆಪ್ಪುವಿನ ಸೇಂಟ್ ಆಂಟೋನಿ ಆಶ್ರಮದ ಸಹಾಯಕ ನಿರ್ದೇಶಕ
1976-1978: ವಾಮಂಜೂರಿನಲ್ಲಿ ಸಹಾಯಕ ಧರ್ಮಗುರು
1978-1979: ಸಿಕಂದರಾಬಾದ್ನಲ್ಲಿ ಅಧ್ಯಯನ
1979-1980: ಕೆನರಾ ಕಮ್ಯುನಿಕೇಶನ್ ಕೇಂದ್ರ ಮಂಗಳೂರು ಇದರ ಕಾರ್ಯದರ್ಶಿ
1980-1983: ಕಲ್ಯಾಣಪುರದಲ್ಲಿ ಸಹಾಯಕ ಧರ್ಮಗುರು
1983-1985: ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಉಪಪ್ರಾಂಶುಪಾಲ
1985-1986: ಮಂಗಳೂರಿನ ಮಿಲಾಗ್ರಿಸ್ನಲ್ಲಿ ಪ್ರಭಾರ ಪ್ರಾಂಶುಪಾಲರು
1986-1987: ತಲ್ಲೂರಿನ ಚರ್ಚ್ ಆಡಳಿತಾಧಿಕಾರಿ
1987-1988: ಮಂಗಳೂರಿನ ಮಿಲಾಗ್ರಿಸ್ನಲ್ಲಿ ಉಪಪ್ರಾಂಶುಪಾಲರು
1988-1995: ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದಲ್ಲಿ ಉಪನ್ಯಾಸಕ
1995-1997: ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದಲ್ಲಿ ಉಪ-ಪ್ರಾಂಶುಪಾಲರು
1997-2003: ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದಲ್ಲಿ ಪ್ರಾಂಶುಪಾಲರು
2003-2007: ಐಕಳದ ಪೊಂಪೈ ಕಾಲೇಜಿನಲ್ಲಿ ಪ್ರಾಂಶುಪಾಲರು
2008-2012: ಮಂಗಳೂರಿನ ಸಂದೇಶ್ ಸಂಸ್ಥೆಯ ನಿರ್ದೇಶಕರು ಮತ್ತು ಪ್ರಾಂಶುಪಾಲರು ಮತ್ತು ಕೆಆರ್ಸಿಬಿಸಿ ಕಾರ್ಯದರ್ಶಿ

2012-2017: ಬಾರ್ಕೂರಿನ ಚರ್ಚಿನಲ್ಲಿ ಧರ್ಮಗುರು, ಉಡುಪಿ ಧರ್ಮಪ್ರಾಂತ್ಯದ ಕುಲಪತಿ, ಸಾಮಾಜಿಕ ಸಂವಹನ ಆಯೋಗದ ನಿರ್ದೇಶಕ, ಉಡುಪಿ
2017 ರಲ್ಲಿ ಉಡುಪಿ ಶೋಕಮಾತಾ ದೇವಾಲಯದ ಧರ್ಮಗುರುವಾಗಿ ಸೇವೆ.

Advertisement

ಪ್ರಸ್ತುತ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಪ್ರಧಾನ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದ ವಂ|ವಲೇರಿಯನ್ ಮೆಂಡೊನ್ಸಾ ಖ್ಯಾತ ಸಂಗೀತಗಾರರು ಕೂಡ ಆಗಿದ್ದು ಅವರ ಹಲವಾರು ಭಕ್ತಿಗೀತೆಗಳ ಧ್ವನಿಸುರುಳಿಗಳು ಪ್ರಕಟಗೊಂಡಿವೆ.

ವಂ|ವಲೇರಿಯನ್ ಮೆಂಡೋನ್ಸಾ ಅವರ ನಿಧನಕ್ಕೆ ಉಡುಪಿ ಧರ್ಮಾಧ್ಯಕ್ಷರಾದ ವಂ|ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ|ಡಾ|ರೋಶನ್ ಡಿಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Mangaluru: ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ… ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next