Advertisement

ಉಡುಪಿ: ಜೀವಬೆದರಿಕೆ ದೂರು ದಾಖಲು

12:29 AM Dec 18, 2022 | Team Udayavani |

ಉಡುಪಿ: ವ್ಯಕ್ತಿಯೊಬ್ಬರನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಕೊಂಡು ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.

Advertisement

ಶಿರಿಬೀಡುವಿನ ಮಹಮ್ಮದ್‌ ರಿಯಾಜ್‌ ಅವರನ್ನು ಆರೋಪಿ ರಶೀದ್‌ ಮೂಡನಿಡಂಬೂರು ಗ್ರಾಮದ ಮಾಂಡವಿ ಗ್ರೀನ್ಸ್‌ ಸರಸ್ವತಿ ಸ್ಕೂಲ್‌ನ ಹಿಂಭಾಗದ ತನ್ನ ಮನೆಗೆ ಬರುವಂತೆ ತಿಳಿಸಿದ್ದರು. ಅಲ್ಲಿಗೆ ಹೋದಾಗ ಮಹಮ್ಮದ್‌ ರಿಯಾಜ್‌ ಅಡ್ಡಗಟ್ಟಿ ತನ್ನ ಬಿಳಿ ಬಣ್ಣದ ಫಾರ್ಚೂನರ್‌ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹಣ ನೀಡುವಂತೆ ಕೇಳಿದ್ದರು.
ಮಹಮ್ಮದ್‌ ರಿಯಾಜ್‌ ಅವರು ಎಲ್ಲ ಹಣ ಈಗಾಗಲೇ ಕೊಟ್ಟಿರು ವುದಾಗಿ ಹೇಳಿದಾಗ, ಮಹಮ್ಮದ್‌ ರಿಯಾಜ್‌ ಅವರ ತಲೆ ಹಾಗೂ ಮುಖಕ್ಕೆ ಕೈಯಿಂದ ಹೊಡೆದು ಕಾರಿನಲ್ಲಿ ಮಲ್ಪೆಗೆ ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ದಾಖಲಾತಿಗಳಿಗೆ ಸಹಿ ಹಾಕಿಸಿಕೊಂಡು ಚೆಕ್‌ಗಳನ್ನು ಪಡೆದುಕೊಂಡಿದ್ದರು.

ಬಳಿಕ ಹಲ್ಲೆ ನಡೆಸಿ ಅಂಬಾಗಿಲಿನ ಸೆಕೆಂಡ್‌ ಹ್ಯಾಂಡ್‌ ಬಝಾರ್‌ ಬಳಿ ತನ್ನ ಮೊಬೈಲ್‌ನಿಂದ ಸ್ತೆಫ್ ಮತ್ತು ಅಕ್ರಂಗೆ ಕರೆ ಮಾಡಿದ್ದ. ಆತ ಕೂಡ ಇವರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next