Advertisement
ಜಿಲ್ಲೆಯಲ್ಲಿ ಬಾಂಗ್ಲಾ ಅಕ್ರಮ ವಲಸಿಗರು ಪತ್ತೆಯಾದ ಹಿನ್ನೆಲೆಯಲ್ಲಿ ಇವರಿಗೆ ದಾಖಲಾತಿಗಳು ಹೇಗೆ ಸಿಗುತ್ತವೆ? ಯಾರು ಮಾಡಿಸಿಕೊಡುತ್ತಾರೆ ಎಂಬುದರ ಹಿಂದೆ ಪೊಲೀಸರು ಬಿದ್ದಿದ್ದಾರೆ. ನಕಲಿ ದಾಖಲೆಗಳನ್ನು ಒದಗಿಸುವ ಏಜೆಂಟರ “ಫ್ಯಾಕ್ಟರಿ’ ಯೇ ಕರಾಳಿಯಲ್ಲಿ ಇದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.ಪ್ರಸ್ತುತ ಸಿಕ್ಕಿಬಿದ್ದಿರುವ ಅಕ್ರಮ ವಲಸಿಗರಲ್ಲಿ ಒಬ್ಬರಿಗೆ ನಕಲಿ ಪಾಸ್ ಪೋರ್ಟ್ ಅನ್ನು ಉಡುಪಿಯಲ್ಲೇ ಮಾಡಿಕೊಡಲಾಗಿತ್ತು ಎಂಬ ಸಂಶಯ ವ್ಯಕ್ತವಾಗಿದೆ. ಇದು ನಕಲಿ ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಜಾಲದ ಸಾಧ್ಯತೆ ಬಗ್ಗೆ ಪ್ರಶ್ನೆ ಹುಟ್ಟಿಸಿದೆ.
Related Articles
Advertisement
ಪೊಲೀಸರಲ್ಲೂ ಮಾಹಿತಿಯಿಲ್ಲಪಾಸ್ಪೋರ್ಟ್ ಮಾಡುವ ಸಂದರ್ಭದಲ್ಲಿ ಪೊಲೀಸರು ಫಲಾನು ಭವಿಗಳ ಎಲ್ಲ ದಾಖಲೆ, ಮನೆ ಭೇಟಿ, ಎಷ್ಟು ವರ್ಷಗಳಿಂದ ವಾಸ ಹೀಗೆ ಹತ್ತು ಹಲವು ಮಾಹಿತಿಗಳನ್ನು ಕ್ರೋಡೀಕರಿಸುತ್ತಾರೆ. ಆದರೆ ಪಾಸ್‌ಪೋರ್ಟ್ ಬಂದ ಬಳಿಕ ಆ ವ್ಯಕ್ತಿಯ ಸ್ಥಿತಿಗತಿ ಏನು? ಭಾರತದಲ್ಲಿಯೇ ಇದ್ದಾನೆಯೇ ಅಥವಾ ವಿದೇಶಕ್ಕೆ ಹೋಗಿದ್ದಾನೆಯೇ ಎಂಬ ವಿವರ ಪೊಲೀಸರಲ್ಲೂ ಇರದು. ಎಷ್ಟು ವಿದೇಶಿಗರು ಜಿಲ್ಲೆಯಲ್ಲಿದ್ದಾರೆ ಎಂಬ ನಿಖರ ಮಾಹಿತಿಯೂ ಪೊಲೀಸರಲಿಲ್ಲ.
ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳ ಮಾಹಿತಿಯಷ್ಟೇ ಪೊಲೀಸರ ಬಳಿ ಲಭ್ಯ/ಆದರೆ ವಿಸಿಟಿಂಗ್ ವೀಸಾ ಪಡೆದು ವಿವಿಧ ಉದ್ಯೋಗದಲ್ಲಿರುವವರ ವೀಸಾ ಅವಧಿ ಮುಗಿದರೂ ಮಾಹಿತಿ ಇರದು. ನಕಲಿ ಪಾಸ್‌ಪೋರ್ಟ್
ನಕಲಿ ಪಾಸ್‌ಪೋರ್ಟ್ ಬಳಸಿ ಉಗ್ರಗಾಮಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಾಧ್ಯತೆಗಳೂ ಇರುತ್ತವೆ. ಪ್ರಸ್ತುತ ಮಲ್ಪೆಯಲ್ಲಿ ಸಿಕ್ಕಿರುವವರು ನಕಲಿ ಪಾಸ್‌ಪೋರ್ಟ್ ಮೂಲಕ ಬಂದವರು. ವಿಮಾನ ನಿಲ್ದಾಣಗಳಲ್ಲಿ ಈ ಬಗ್ಗೆ ಕಟ್ಟುನಿಟ್ಟು ತಪಾಸಣೆ ಮಾಡಿದರಷ್ಟೇ ಇಂತಹ ಪ್ರಕರಣಗಳು ಬೆಳಕಿಗೆ ಬರಲು ಸಾಧ್ಯ. ಇಂತಹ ನಕಲಿ ಪಾಸ್‌ಪೋರ್ಟ್ ಮಾಡುವವರ ಬಳಿ ಇರುವ ದಾಖಲೆಗಳೆಲ್ಲವೂ ನಕಲಿಯೇ ಆಗಿರುತ್ತದೆ ಎನ್ನುತ್ತಾರೆ ಪೊಲೀಸರೊಬ್ಬರು. ಏಜೆಂಟ್‌ಗಳ ಪತ್ತೆಯೂ ಸವಾಲು
ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆತಂದು ಕೆಲಸ ಕೊಡಿಸುವ ದೊಡ್ಡ ಜಾಲವಿದೆ. ಅದರ ಮೇಲುಸ್ತುವಾರಿ, ಏಜೆಂಟರು ಕರ್ನಾಟಕದವರೇ ಆಗಿರುತ್ತಾರೆ. ಆ ಜಾಲದ ಮೂಲಕವೇ ಹೊರ ದೇಶದ ಅಕ್ರಮ ವಲಸಿಗರು ಬರುತ್ತಿದ್ದಾರೆ. ಕಟ್ಟಡ ಕಾಮಗಾರಿ, ಕೂಲಿ ಕೆಲಸ, ಮೀನುಗಾರಿಕೆ ಇತ್ಯಾದಿಗೆ ಬೇಡಿಕೆ ಹೆಚ್ಚಿದ್ದು ಯಾರೂ ದೀರ್ಘಕಾಲ ಒಂದೇ ಉದ್ಯೋಗದಲ್ಲಿ ಉಳಿಯುವುದಿಲ್ಲ. ಒಮ್ಮೆ ಸ್ಥಳೀಯವಾಗಿ ಹೊಂದಿಕೊಂಡ ಮೇಲೆ ಅವರು ಏಜೆಂಟರ ಸಂಪರ್ಕದಿಂದ ದೂರವಾಗುತ್ತಾರೆ. ಈ ಏಜೆಂಟರನ್ನು ಪತ್ತೆ ಮಾಡುವುದೇ ಪೊಲೀಸರಿಗೆ ಸವಾಲು. ಅಕ್ರಮ ವಲಸೆಗೆ ಶಿಕ್ಷೆ ಏನು?
ವೀಸಾ ಇಲ್ಲದೇ ಬರುವುದು, ವೀಸಾ ಅವಧಿ ಮುಗಿದ ಮೇಲೂ ಅಕ್ರಮವಾಗಿ ನೆಲೆಸಿರುವುದು ಅಥವಾ ನಕಲಿ ದಾಖಲೆಯೊಂದಿಗೆ ಇಲ್ಲಿ ಬಂದು ಪೊಲೀಸರ ವಶಕ್ಕೆ ಸಿಕ್ಕ ಅನಂತರದಲ್ಲಿ ಆರೋಪಿಗಳ ತನಿಖೆ ನಡೆಯುತ್ತದೆ. ಇಂತಹ ಪ್ರಕರಣದಲ್ಲಿ ಜಾಮೀನು ಸಿಗದು. ಕನಿಷ್ಠ 7 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ನೀಡಬಹುದು. ಜತೆಗೆ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದವರು, ಅಕ್ರಮ ವಲಸಿಗರಿಗೆ ನಕಲಿ ದಾಖಲೆ ಸೃಷ್ಟಿಸಲು ಸಹಕರಿಸಿದವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳುತ್ತಾರೆ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ. ಹತ್ತು ಸಾವಿರ ರೂ. ಕೊಟ್ಟರೆ ಎಲ್ಲ ದಾಖಲೆ ಲಭ್ಯ!
ಉಡುಪಿ: ಹತ್ತು ಸಾವಿರ ಕೊಟ್ಟರೆ ನಕಲಿ ದಾಖಲೆಗಳು ಸ್ಥಳೀಯವಾಗಿಯೆ ಲಭ್ಯ . ಇಂಥದೊಂದು ಆಘಾತಕಾರಿ ಮಾಹಿತಿಯನ್ನು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಪಶ್ಚಿಮ ಬಂಗಾಲದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸುವ ಇವರು ಲಂಚದ ರೂಪದಲ್ಲಿ ಹಣ ನೀಡಿ ನಕಲಿ ದಾಖಲೆಗಳನ್ನು ಪಡೆಯುತ್ತಾರೆ ಎನ್ನಲಾಗಿದೆ. ಈಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿಗಳು ವಿಚಾರಣೆ ವೇಳೆ ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಇಲ್ಲಿ 10 ಸಾವಿರ ರೂ. ಕೊಟ್ಟರೆ ಆಧಾರ್ ಕಾರ್ಡ್ ಮಾಡಿಕೊಡುತ್ತಾರೆ. ಇದೇ ರೀತಿ ಹಣ ನೀಡಿ ಆಧಾರ್‌ಕಾರ್ಡ್ ಮಾಡಿಕೊಂಡು ಉದ್ಯೋಗಕ್ಕಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಕೆ. ಅರುಣ್, ಬಂಧಿತರ ವಿಚಾರಣೆ ನಡೆಸಲಾಗುತ್ತಿದೆ. ಎಲ್ಲರೂ ನಕಲಿ ಆಧಾರ್ ಕಾರ್ಡ್ ಹೊಂದಿದ್ದಾರೆ. ಇವರೊಂದಿಗಿದ್ದ ಇನ್ನೊಬ್ಬ ಮೊಹಮ್ಮದ್ ಮಾಣಿಕ್ ನಕಲಿ ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಮೂಲಕ ದುಬಾೖಗೆ ತೆರಳಲು ಯತ್ನಿಸಿದ ವೇಳೆ ವಿಮಾನ ನಿಲ್ದಾಣ ತಪಾಸಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರಿದಿದೆ. ಇವರು ಗಡಿ ದಾಟಿ ಹೇಗೆ ಬಂದರು, ಇವರಿಗೆ ಸ್ಥಳೀಯವಾಗಿ ಯಾರು ಸಹಾಯ ಮಾಡಿದರು? ನಕಲಿ ಆಧಾರ್ ಕಾರ್ಡ್ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ. ಕಾನೂನು ಪ್ರಕಾರ ವಿಚಾರಣೆ ಕೈಗೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ತಿಳಿಸಿದ್ದಾರೆ.