ಕಾಪು: ಕಟಪಾಡಿ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಪಳ್ಳಿಗುಡ್ಡೆಯಲ್ಲಿರುವ ಕ್ರೀಡಾಂಗಣ ಅಭಿವೃದ್ಧಿ ನಿರ್ಮಾಣ ಕಾಮಗಾರಿಗೆ ಮಾಜಿ ನಗರಾಭಿವೃದ್ಧಿ ಸಚಿವ / ಶಾಸಕ ವಿನಯ ಕುಮಾರ್ ಸೊರಕೆ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಅನೇಕ ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಮಹತ್ತರ ಪಾತ್ರವಹಿಸಿದ ಈ ಕ್ರೀಡಾಂಗಣದ ಅಭಿವೃದ್ಧಿಗೆ ಸರಕಾರ ಸಹಿತ ವಿವಿಧ ಮೂಲಗಳಿಂದ ದೊರೆಯುವ ಅನುದಾನಗಳನ್ನು ಒದಗಿಸಿ ಕೊಡಲು ತಾನು ಬದ್ಧನಾಗಿದ್ದೇನೆ. ಈಗಾಗಲೇ ಅದಾನಿ – ಯುಪಿಸಿಎಲ್ ಸಂಸ್ಥೆ ಕಾಪು ಕ್ಷೇತ್ರದ ಕ್ರೀಡಾಂಗಣಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಸಿಎಸ್‌ಆರ್ ಅನುದಾನದ 3 ಕೋ. ರೂ. ಅನುದಾನವನ್ನು ಈ ಕ್ರೀಡಾಂಗಣದ ಅಭಿವೃದ್ಧಿಗೆ ದೊರಕಿಸಿ ಕೊಡಲಾಗುವುದು. ಸರಕಾರದಿಂದ ಕ್ರೀಡಾಕ್ಷೇತ್ರದ ವಿನಿಯೋಗಕ್ಕೆ ಬಿಡು ಗಡೆಯಾಗಿರುವ 2 ಕೋ. ರೂ. ಅನುದಾನದಲ್ಲೂ ನೆರವು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಕಟಪಾಡಿ ಎಸ್.ವಿ.ಎಸ್ ವಿದ್ಯಾ ವರ್ಧಕ ಸಂಘದ ವತಿಯಿಂದ ಶಾಸಕರಿಗೆ ಕ್ರೀಡಾಂಗಣ ನಿರ್ಮಾಣದಲ್ಲಿ ಸಹಯೋಗ ನೀಡುವಂತೆ ವಿನಂತಿಸಿ ಮನವಿ ನೀಡಲಾಯಿತು.
ಕಟಪಾಡಿ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಟ್ಟಾರು ದಿನೇಶ್ ಕಿಣಿ, ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ಸತ್ಯೇಂದ್ರ ಪೈ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಮಹೇಶ್ ಶೆಣೆ„, ಶಾಲಾ ಸಂಚಾಲಕ ವಸಂತ ಮಾಧವ ಭಟ್, ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷರಾದ ಸರಸು ಬಂಗೇರ, ಕಟಪಾಡಿ ಶಂಕರ ಪೂಜಾರಿ, ತಾ. ಪಂ. ಸದಸ್ಯ ರಾಜೇಶ್ ಕುಮಾರ್, ಕೋಟೆ ಗ್ರಾ. ಪಂ. ಉಪಾಧ್ಯಕ್ಷ ಗಣೇಶ್ ಕುಮಾರ್ ಮಟ್ಟು, ಕಟಪಾಡಿ ಗ್ರಾ. ಪಂ. ಉಪಾಧ್ಯಕ್ಷೆ ಪ್ರಭಾ ಶೆಟ್ಟಿ, ಗಣ್ಯರಾದ ಶ್ರೀಕರ ಸುವರ್ಣ, ವಿನಯ ಬಲ್ಲಾಳ್, ದಯಾನಂದ ಬಂಗೇರ, ಪ್ರೇಮ್ ಕುಮಾರ್, ಡಾ| ಎ. ರವೀಂದ್ರನಾಥ್ ಶೆಟ್ಟಿ, ಡಾ| ಉದಯ ಕುಮಾರ್ ಶೆಟ್ಟಿ, ರಾಘವೇಂದ್ರ ರಾವ್, ವೈ. ಉದಯ ಕುಮಾರ್, ಕಿರಣ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.
ಕಟಪಾಡಿ ಎಸ್.ವಿ.ಎಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶೇಖರ ಅಂಚನ್ ಸ್ವಾಗತಿಸಿದರು. ಕ್ರೀಡಾಂಗಣ ನಿರ್ಮಾಣ ಸಮಿತಿಯ ಕಾರ್ಯದರ್ಶಿ / ದೈ. ಶಿ. ಶಿಕ್ಷಕ ಕಿರಣ್ ಕುಮಾರ್ ಶೆಟ್ಟಿ ವಂದಿಸಿದರು. ಸುಬ್ರಹ್ಮಣ್ಯ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.