ಉಡುಪಿ: ರಾಜ್ಯಾಾದ್ಯಂತ ಬುಧವಾರದಿಂದ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದರೂ ಉಡುಪಿ ನಗರದಾದ್ಯಂತ ಹಲವಾರು ವಾಹನಗಳು ರಸ್ತೆಯಲ್ಲಿ ಓಡಾಡುವ ದೃಶ್ಯ ಕಂಡುಬಂತು.
ಬೆಳಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇದ್ದ ಹಿನ್ನೆಲೆಯಲ್ಲಿ ಕೆಲವು ಮಂದಿ ಆ ಕಾರಣ ಹೇಳಿ ರಸ್ತೆಗೆ ಇಳಿದರೆ, ಇನ್ನೊಂದಷ್ಟು ಮಂದಿ ವಿನಾ ಕಾರಣ ರಸ್ತೆಗಿಳಿದರು.
ಕಲ್ಸಂಕ, ಸಿಂಡಿಕೇಟ್ ಸರ್ಕಲ್ ಬಳಿ ಟ್ರಾಾಫಿಕ್ ದಟ್ಟನೆ :
ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿಿರುವುದನ್ನು ಕಂಡು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರೇ ಕಾರ್ಯಾಚರಣೆಗಿಳಿದರು. ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ಅನಂತರವಷ್ಟೇ ವಾಹನವನ್ನು ಬಿಡಲಾಯಿತು. ಸಿಂಡಿಕೇಟ್ ಸರ್ಕಲ್‌ನಿಂದ ಇಂದ್ರಾಳಿ ಜಂಕ್ಷನ್‌ವರೆಗೆ ಹಾಗೂ ನಗರದ ಕಲ್ಸಂಕ ವೃತ್ತದಿಂದ ಸಿಟಿ ಬಸ್ ನಿಲ್ದಾಣವರೆಗೆ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು.