ಸುರತ್ಕಲ್: ಉಡುಪಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಸ್ಯಾಬ್ ಉಡುಪಿ ಪ್ರೀಮಿಯರ್ ಲೀಗ್ -2017 ಟಿ10 ಹಾರ್ಡ್ ಟೆನಿಸ್ ಬಾಲ್ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಸೀಸನ್-2 ಪಣಂಬೂರು ಎನ್‌ಎಂಪಿಟಿ ಮೈದಾನದಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಲೂನ್ ಹಾರಿಸುವ ಮೂಲಕ ಕ್ರಿಕೆಟ್ ಹಬ್ಬಕ್ಕೆ ಚಾಲನೆ ನೀಡಿದರು.ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹಾಗೂ ಮಾಜಿ ಆಟಗಾರ ಸುನಿಲ್ ಜೋಶಿ ಟಿ10 ಎಂಬ ಹೊಸ ಪರಿಕಲ್ಪನೆ ಕುರಿತಾಗಿ ಶ್ಲಾಘನೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಮೊದಿನ್ ಬಾವಾ, ಐವನ್ ಡಿ’ಸೋಜ, ಜೆಡಿಎಸ್ ಮುಖಂಡ ಬಿ.ಎಂ.ಫಾರೂಕ್, ಉದ್ಯಮಿ ಮಮ್ತಾಜ್ ಆಲಿ, ಸ್ಯಾಬ್ ಆ್ಯಂಡ್ ಎಸೋಸಿಯೇಟ್ ಕಂಪನಿಯ ಚೇರ್ಮನ್ ಸಲಾಹುದ್ದಿನ್ ಸಲ್ಮಾನ್, ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಸಂಘಟನಾ ಸಮಿತಿ ಉಪಾಧ್ಯಕ್ಷ ಮೊಹಮ್ಮದ್ ಮುಬೀನ್, ಅಧ್ಯಕ್ಷ ಸಾಧಿಕ್ ಕಾಪು,ಹಕೀಂ ಫಾಲ್ಕಾನ್, ಬಿ.ಎಂ.ಸದಾಶಿವ,ಗುಲಾಂ ಮೊಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 50 ಲ.ರೂ ಬಹುಮಾನವಿದ್ದು ವಿಜೇತ ತಂಡ 25 ಲಕ್ಷ ರೂ. ಮತ್ತು ಟ್ರೋಫಿ ಹಾಗೂ ರನ್ನರ್ ಅಪ್ ತಂಡ 12 ಲಕ್ಷ ರೂ. ಬಹುಮಾನ ಪಡೆಯಲಿದೆ.
ಕ್ರೀಡೆಯಿಂದ ಸೌಹಾರ್ದತೆ : ಕುಮಾರಸ್ವಾಮಿ
ಮಂಗಳೂರು, ಸೇರಿದಂತೆ ಎಲ್ಲೆಡೆ ಶಾಂತಿ ಸಾಮರಸ್ಯ ನೆಲೆಸಲು ಕ್ರೀಡಾಕೂಟ ಸಹಕಾರಿ.ದ.ಕ.ದಲ್ಲಿ ಇಂದು ಸೌಹಾರ್ದಕ್ಕೆ ಒತ್ತು ನೀಡುವ ಆವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಆಯೋಜಕರ ಕಾರ್ಯ ಶ್ಲಾಘನೀಯ ಎಂದರು. ಇದೇ ವೇಳೆ ಮಂಗಳೂರು ಬೆಂಗಳೂರಿಗೆ ಪೈಪೋಟಿ ನೀಡುವ ನಗರ ಎಂದು ಬಣ್ಣಿಸಿದ ಅವರು ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕ ಮೊದಿನ್ ಬಾವಾ ಹಾಗೂ ಐವನ್ ಡಿ’ಸೋಜ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.