Advertisement
ನಗರಸಭೆ ವ್ಯಾಪ್ತಿಯ ಶಿರಿಬೀಡು ಟವರ್ ಮುಂಭಾಗದಲ್ಲಿ ಕುಡಿ ಯುವ ನೀರಿನ ಪೈಪ್ ಒಡೆದು ಹೋಗಿ ತಿಂಗಳು ಕಳೆದಿದೆ. ಸ್ಥಳೀಯರು ಸಾಕಷ್ಟು ದೂರು ನೀಡಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ದುರಸ್ತಿಗೆ ಮುಂದಾದರು. ಕಾರ್ಮಿಕರು ರಸ್ತೆಯಲ್ಲಿ ಹರಿಯುತ್ತಿದ್ದ ನೀರನ್ನು ಮಳೆ ನೀರಿನ ಚರಂಡಿಗೆ ಬಿಟ್ಟಿದ್ದು, ಅಲ್ಲಿಂದ ಶಿರಿಬೀಡು ಟವರ್ ಒಳಗೆ ನುಗ್ಗುತ್ತಿದೆ. ನಗರಸಭೆಯ ಅಧಿಕಾರಿಗಳು ಮೇ 29ರಂದು ದುರಸ್ತಿಗಾಗಿ ಕಾರ್ಮಿಕರನ್ನು ಕಳುಹಿಸಿದ್ದಾರೆ. ಒಂದು ತಿಂಗಳಿನಲ್ಲಿ ನಾಲ್ಕು ಬಾರಿ ರಸ್ತೆಯನ್ನು ಕೊಂಚ ಕೊಂಚವಾಗಿ ಅಗೆದು ಮೂರು ಅಡಿ ಆಳ ಮಾಡಿದ್ದಾರೆ. ಇಲ್ಲಿ ತಡೆಗೋಡೆ ಇಲ್ಲದಿರುವ ಕಾರಣ ಪಾದಚಾರಿಗಳು ಕೊಂಚ ಎಚ್ಚರ ತಪ್ಪಿದರೂ ಅಪಾಯ ಖಚಿತ ಎಂಬಂತಿದೆ ಪರಿಸ್ಥಿತಿ.
ಕಳೆದೊಂದು ತಿಂಗಳಿನಿಂದ ಕುಡಿಯುವ ನೀರು ಭಾರೀ ಪ್ರಮಾಣದಲ್ಲಿ ಪೋಲಾಗುತ್ತಿದೆ. ಅಪರೂಪಕ್ಕೊಮ್ಮೆ ನಗರಸಭೆಯಿಂದ ಕೂಲಿ ಕಾರ್ಮಿಕರು ಬಂದು ಹಂತ ಹಂತವಾಗಿ ಅಗೆಯುತ್ತಿದ್ದಾರೆ. ನೀರು ತುಂಬಿ ರಸ್ತೆ ಹಾಗೂ ಮುಂಭಾಗದ ಶಿರಿಬೀಡು ಟವರ್ಗೆ ನುಗ್ಗುತ್ತಿದೆ. ಮಳೆಗಾಲದಲ್ಲಿ ಇದು ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ. .
-ಎಂ.ಎನ್.ಹೆಗಡೆ, ನಿವೃತ್ತ ಪ್ರಾಂಶುಪಾಲರು. ದುರಸ್ತಿ ಶೀಘ್ರ ಪೂರ್ಣ
ಶಿರಿಬೀಡು ಟವರ್ ಮುಂಭಾಗದ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದೆ. ಅದರ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ದುರಸ್ತಿ ಕೆಲಸ ಮುಗಿಸಿ, ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.
-ಮೋಹನ್ ರಾಜ್, ಎಇಇ ನಗರಸಭೆ ಉಡುಪಿ
Related Articles
Advertisement