Advertisement

ಶೋಭಾ ಜೀ ಕ್ಷೇತ್ರದ ಜನರಿಗೆ ನೀವು “ನೀಲಕುರಂಜಿ ಹೂವಿನಂತೆ”:ಯುವ ನಾಯಕ ದೀಪಕ್ ಕೋಟ್ಯಾನ್

09:26 AM May 23, 2021 | Team Udayavani |

ಉಡುಪಿ : ಉಡುಪಿ ಮತ್ತು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ನೀಡಿರುವ ಕ್ರೈಸ್ತ ವಿರೋಧಿ ಹೇಳಿಕೆಯನ್ನು ಸಂಪೂರ್ಣವಾಗಿ ಸುಳ್ಳು ಮತ್ತು  ದುರುದ್ದೇಶಪೂರಿತವೆಂದು ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ದೀಪಕ್ ಕೋಟ್ಯಾನ್ ತೀವ್ರವಾಗಿ ಖಂಡಿಸಿದ್ದಾರೆ.

Advertisement

ತಮ್ಮ ಸರಕಾರ ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಸುಳ್ಳು ಪ್ಯಾಕೇಜ್ ಗಳನ್ನು ಘೋಷಿಸಿ ಮೊಸಳೆ ಕಣ್ಣೀರು ಇಡುವ ಪ್ರಯತ್ನ ಮಾಡುತ್ತಿದೆ. ನದಿಗಳಲ್ಲಿ ಹೆಣದ ಅಲೆಗಳು ಬಂದರು ಶೋಭಾ ತಮ್ಮ ಪಕ್ಷದ ವಿಫಲತೆಗಳನ್ನು ಮುಚ್ಚಿಹಾಕಲು ಮತಿಭ್ರಮಣೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸಂಸದರ‌ ಘನತೆಗೆ ಕಪ್ಪು ಚುಕ್ಕೆ ಇದ್ದಂತೆ.

ಇನ್ನು ನೀಲಗಿರಿ ಬೆಟ್ಟದಲ್ಲಿ ಹಲವು ವರ್ಷಗಳಿಗೊಮ್ಮೆ ಅರಳುವ ನೀಲಕುರಿಂಜಿ ಹೂವಿನಂತೆ ಉಡುಪಿಯ ಜನರಿಗೆ ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಶೋಭಾ ಕ್ಷೇತ್ರದ ಸೌಹಾರ್ದತೆಗೆ ಧಕ್ಕೆ ತರುವ ಸಂಪೂರ್ಣ ಪ್ರಯತ್ನ‌ ಮಾಡುತ್ತಿದ್ದಾರೆ.

ಶೋಭಾ ಕರಂದ್ಲಾಜೆ ಇಂತಹ ತಲೆಬುಡ ಇಲ್ಲದ ಹೇಳಿಕೆ ನೀಡುವ ಬದಲು ಕ್ಷೇತ್ರದ ಜನರಿಗೆ ಲಸಿಕೆ,ವೆಂಟಿಲೇಟರ್, ಆಕ್ಸಿಜನ್ ನೀಡಿ. ಕೊರೊನಾ ನಿಗ್ರಹಿಸುವ ಬದಲು ಲಾಕ್ಡೌನ್ ಸಂದರ್ಭದಲ್ಲಿ ಕರೆಂಟ್ ತೆಗೆದು ಕತ್ತಲೆ ಭಾಗ್ಯ ನೀಡುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಇಲ್ಲಿಯವರೆಗೆ ಎಷ್ಟು ಸೋಂಕಿತರು ದಾಖಲಾಗಿದ್ದಾರೆ ಹಾಗೂ ಎಷ್ಟು ಮಂದಿ ಸಾವನಪ್ಪಿದ್ದಾರೆ ಎನ್ನುವ ಸಂಪೂರ್ಣ ಲೆಕ್ಕ ನೀಡಬೇಕು. ಶೋಭಾ ಜೀ ಕ್ರೈಸ್ತ ಸಮುದಾಯವು ಇತರ ಎಲ್ಲಾ ಕ್ರಿಶ್ಚಿಯನ್ ಚರ್ಚುಗಳು ಮತ್ತು ಪಂಗಡಗಳೊಂದಿಗೆ ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಸಮರದ ಹಾದಿಯಲ್ಲಿದೆ. ಸರಕಾರದ ಎಲ್ಲಾ ನಿಯಮಗಳನ್ನು ಪಾಲಿಸುವುದು, ಜಾಗೃತಿ ಮೂಡಿಸುವುದು, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಕ್ರಮಗಳನ್ನು ಜಾರಿಗೆ ತರುವುದು ಮತ್ತು ಅಗತ್ಯವಿರುವವರಿಗೆ ಮತ್ತು ಬಡವರಿಗೆ ನೆರವು ನೀಡುವುದು ಮಾಡುತ್ತಾ ಬಂದಿದೆ ಎಂದು ವ್ಯಂಗ್ಯ ವ್ಯಕ್ತಪಡಿಸಿದ್ದಾರೆ.

ಲಾಕ್ಡೌನ್ ಸಮಯದಲ್ಲಿ ಚರ್ಚುಗಳು ಸಾರ್ವಜನಿಕರಿಗಾಗಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ ಮತ್ತು ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್ಯನಿರ್ವಹಿಸುತ್ತಿವೆ, ಹೀಗಾಗಿ ಎಲ್ಲಾ ಭಕ್ತರು ಮತ್ತು ಸಂದರ್ಶಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಜೊತೆಗೆ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಸಹಕರಿಸುತ್ತಿದೆ. ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು, ವಿವಿಧ ಚರ್ಚ್ ಗಳಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ತಂಡಗಳು ಮತ್ತು ಕೋವಿಡ್ ಯೋಧರ ತಂಡಗಳನ್ನು ರಚಿಸಲಾಗಿದೆ. ಲಸಿಕೆ ಪಡೆಯಲು ಅವರು ಪ್ರತಿಯೊಂದು ಕುಟುಂಬಕ್ಕೂ ಸಹಾಯ ಮಾಡುತ್ತಾ ಇದ್ದಾರೆ. ರೋಗಲಕ್ಷಣದ ಮತ್ತು ಶಂಕಿತರನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದುಕೊಂಡು ಹೋಗುವುದರ ಜೊತೆಗೆ ಹೋಂ ಐಸೋಲೇಷನ್ ನಲ್ಲಿ ಇರುವ ರೋಗಿಗಳಿಗೆ ವೈದ್ಯಕೀಯ ಅಗತ್ಯಗಳನ್ನು ಒದಗಿಸುವಲ್ಲಿ ಅವರು ನಿರತರಾಗಿದ್ದಾರೆ.

Advertisement

ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲಿ ಜಾತಿ, ಮತ ಮತ್ತು ಧರ್ಮವನ್ನು ಲೆಕ್ಕಿಸದೆ ಬಡವರು ಮತ್ತು ನಿರ್ಗತಿಕರ ವೈದ್ಯಕೀಯೇತರ ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸುವಲ್ಲಿ ಸಮುದಾಯವು ಪ್ರಮುಖ ಪಾತ್ರ ವಹಿಸಿದೆ.ಸಮುದಾಯವು ತನ್ನ ಅನೇಕ ಹಾಸ್ಟೆಲ್ ಗಳು, ಸಭಾಂಗಣಗಳು, ಶಾಲೆಗಳನ್ನು ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲು ಕ್ರಮ ಕೈಗೆತ್ತಿಕೊಳ್ಳುವಂತೆ ಸರಕಾರಕ್ಕೆ ಲಿಖಿತ ಮನವಿಯನ್ನು ಸಲ್ಲಿಸಿದೆ ಎಂಬುದನ್ನು ಸಹ ಗಮನಿಸಬೇಕು. ಇದೀಗ ನಮ್ಮ ರಾಷ್ಟ್ರದಾದ್ಯಂತ, ಅನೇಕ ಕ್ರಿಶ್ಚಿಯನ್ ಆಸ್ಪತ್ರೆಗಳು, ಶಾಲೆಗಳು ಮತ್ತು ಇತರ ಸೌಲಭ್ಯಗಳು ಕೋವಿಡ್ ಸಂಬಂಧಿತ ಚಿಕಿತ್ಸೆಗಾಗಿ ಬಳಕೆಯಲ್ಲಿವೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಕ್ರಿಶ್ಚಿಯನ್ ಪಾದ್ರಿಗಳು, ಧಾರ್ಮಿಕ, ವೈದ್ಯಕೀಯ ವೃತ್ತಿಪರರು ಮತ್ತು ಸ್ವಯಂಸೇವಕರ ಸೇವೆಯು ಮಹತ್ವದ್ದಾಗಿದೆ ಮತ್ತು ಅನೇಕರು ಮುಂಚೂಣಿಯಲ್ಲಿರುವುದರಿಂದ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಕೆಲಸವು ಪ್ರಮುಖವಾದುದು ಮತ್ತು ಅದನ್ನು ನಿರ್ಲಕ್ಷಿಸಲು ಅಥವಾ ಅಂತಹ ಅವಮಾನಕರ ಹೇಳಿಕೆಗಳಿಗೆ ಬಳಸಲಾಗುವುದಿಲ್ಲ .

ಸಂಸದೆ ಶೋಭಾ ಕರಂದ್ಲಾಜೆ ಅವರು ಲಸಿಕೆಗಳ ಕೊರತೆಯನ್ನು ನೀಗಿಸಲು ಮತ್ತು ಅಗತ್ಯ ವೈದ್ಯಕೀಯ ಅಗತ್ಯಗಳು ಮತ್ತು ಸೌಲಭ್ಯಗಳನ್ನು ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಒದಗಿಸಲು ಕ್ರಮಗಳನ್ನು ಕೈಗೂಳ್ಳಬೇಕು

Advertisement

Udayavani is now on Telegram. Click here to join our channel and stay updated with the latest news.

Next