Advertisement

ಉಡುಪಿ ಜಿಲ್ಲೆಯ ವ್ಯಾಕ್ಸಿನೇಶನ್‌ ತೃಪ್ತಿಕರ

12:16 AM Aug 09, 2021 | Team Udayavani |

ಉಡುಪಿ: ಕೊರೊನಾ ಎರಡನೆಯ ಅಲೆ ಯಿಂದ ಪಾರಾಗಿ ಮೂರನೇ ಅಲೆಯ ಭಯದಲ್ಲಿರುವಾಗ ಉಡುಪಿ ಜಿಲ್ಲೆ ಲಸಿಕೆ ನೀಡಿಕೆಯಲ್ಲಿ ತೃಪ್ತಿಕರ ಸ್ಥಾನವನ್ನು ಪಡೆದುಕೊಂಡಿದೆ.

Advertisement

ಜಿಲ್ಲೆಯ ಒಟ್ಟು ಜನಸಂಖ್ಯೆ ಸುಮಾರು 13 ಲಕ್ಷ. ಇದರಲ್ಲಿ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರು ಸುಮಾರು 10 ಲಕ್ಷ. ಈ 10 ಲಕ್ಷ ಜನರಿಗೆ ಎರಡು ಡೋಸ್‌ ಮಸಿಕೆ ಕೊಡಿಸುವ ಗುರಿ ಆರೋಗ್ಯ ಇಲಾಖೆಯದು. ಇದರಲ್ಲಿ ಕಾಲೇಜು ವಿದ್ಯಾರ್ಥಿ

ಗಳು, 45 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ದುರ್ಬಲ ವರ್ಗದವರು ಸೇರಿದ್ದಾರೆ.

ಆರೋಗ್ಯ ಇಲಾಖೆ ದಿನದಿನವೂ ಅಂಕಿ-ಅಂಶ ಗಳನ್ನು ಬಿಡುಗಡೆಗೊಳಿಸುತ್ತದೆ. ಆ. 6ರಂದು 18+ ಮೀರಿದ ಎಲ್ಲ ವರ್ಗದವರನ್ನು ಸೇರಿಸಿದರೆ ಶೇ. 54 ಜನರಿಗೆ ಪ್ರಥಮ ಡೋಸ್‌ ವ್ಯಾಕ್ಸಿನೇಶನ್‌ ಆಗಿತ್ತು. ರಾಜ್ಯ ಮಟ್ಟದ ಗುರಿ ಆಧಾರಿತ ಮಾನದಂಡದಲ್ಲಿ ಉಡುಪಿ ಜಿಲ್ಲೆ ದ್ವಿತೀಯ ಸ್ಥಾನಿಯಾಗಿದೆ. ಆ. 8ರ ವರೆಗೆ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಡೋಸ್‌ ತೆಗೆದುಕೊಂಡವರ ಸಂಖ್ಯೆ ಒಟ್ಟು 5,37,402. ಆರೋಗ್ಯ ಇಲಾಖೆಯ ಆ. 7ರ ಮಾಹಿತಿ ಪ್ರಕಾರ ಆನ್‌ಲೈನ್‌ ಅಂಕಿಅಂಶದಲ್ಲಿ ಸುಮಾರು ಶೇ. 57ರಷ್ಟು ಜನರು ಪ್ರಥಮ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

ಒಟ್ಟು 10 ಲಕ್ಷ ಗುರಿಯಲ್ಲಿ ಶೇ. 19ರಷ್ಟು ಜನರಿಗೆ ಎರಡೂ ಡೋಸ್‌ ಆಗಿದೆ. ಅಂದರೆ ಸುಮಾರು  ಐದನೇ ಒಂದಂಶ ಜನರು ಸ್ವಯಂ ರೋಗ ನಿರೋಧಕ ಶಕ್ತಿ ಹೊಂದಿದ್ದಾರೆ. ಮೊದಲ ಡೋಸ್‌ ತೆಗೆದುಕೊಂಡು ನಿರ್ದಿಷ್ಟ ದಿನಗಳ ಬಳಿಕ 2ನೇ ಡೋಸ್‌ ಲಸಿಕೆ ತೆಗೆದುಕೊಂಡವರ ಪ್ರಮಾಣ ಶೇ. 91 ಆಗಿದೆ. ಒಟ್ಟು ಗುರಿಯಲ್ಲಿ ಈ ಸಾಧನೆ ರಾಜ್ಯ

Advertisement

ದಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಜನಸಂಖ್ಯೆಯ ಪ್ರಮಾಣದಲ್ಲಿ ಅಲ್ಲ, ಗುರಿಯ ಪ್ರಮಾಣದಲ್ಲಿ. ಏಕೆಂದರೆ ಉಡುಪಿ ಜಿಲ್ಲೆಯ ಜನಸಂಖ್ಯೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ. ಆ. 8ರ ವರೆಗೆ ಒಟ್ಟು 1,93,736 ಜನರು ಜಿಲ್ಲೆಯಲ್ಲಿ 2ನೇ ಡೋಸ್‌ ಪಡೆದುಕೊಂಡಿದ್ದಾರೆ.

ಒಟ್ಟು 10 ಲಕ್ಷ ಅರ್ಹ ಜನರಿಗೆ 20 ಲಕ್ಷ ಡೋಸ್‌ ಲಸಿಕೆ ಅಗತ್ಯವಿದ್ದು ಇದುವರೆಗೆ 7.31 ಲಕ್ಷ ಡೋಸ್‌ ವಿತರಣೆಯಾಗಿದೆ. 1 ಲಕ್ಷ ಲಸಿಕೆ ವಿತರಣೆ ಖಾಸಗಿ ಆಸ್ಪತ್ರೆಗಳು, ವಿಶೇಷವಾಗಿ ಮಣಿಪಾಲ ಆಸ್ಪತ್ರೆ ಸಮೂಹದಿಂದ ನಡೆದಿದೆ. ಇನ್ನೂ ಸುಮಾರು 4.5 ಲಕ್ಷ ಜನರಿಗೆ ಪ್ರಥಮ ಡೋಸ್‌, ಸುಮಾರು 8.5 ಲಕ್ಷ ಜನರಿಗೆ 2ನೇ ಡೋಸ್‌ ನೀಡಬೇಕಾಗಿದೆ.

ಒಟ್ಟು 10 ಲಕ್ಷ ಜನರ ಗುರಿಯಲ್ಲಿ ಶೇ. 57ರಷ್ಟು ಜನರಿಗೆ ಪ್ರಥಮ ಡೋಸ್‌, ಪ್ರಥಮ ಡೋಸ್‌ ತೆಗೆದುಕೊಂಡವರಿಗೆ ಅವಧಿ ಮುಗಿದು ಎರಡನೆಯ ಡೋಸ್‌ ತೆಗೆದುಕೊಂಡವರ ಪ್ರಮಾಣ ಶೇ. 91 ಆಗಿದೆ. ಇವೆರಡೂ ಸಾಧನೆಯಲ್ಲಿ ಉಡುಪಿ ಜಿಲ್ಲೆ ಕ್ರಮವಾಗಿ ದ್ವಿತೀಯ ಮತ್ತು ಪ್ರಥಮ ಸ್ಥಾನವನ್ನು ರಾಜ್ಯದಲ್ಲಿ ಪಡೆದುಕೊಂಡಿದೆ. ರೋಗ ತಡೆಯುವಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ. ಇನ್ನಷ್ಟು ವ್ಯಾಕ್ಸಿನನ್ನು ಪಡೆಯಲು ಸಚಿವ ಸುನಿಲ್‌ ಕುಮಾರ್‌ ಪ್ರಯತ್ನಿಸುತ್ತಿದ್ದಾರೆ.

ಡಾ| ನಾಗಭೂಷಣ ಉಡುಪ,  ಡಿಎಚ್‌ಒ ,ಡಾ| ಎಂ.ಜಿ. ರಾಮ, ಲಸಿಕಾಧಿಕಾರಿ, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next