Advertisement
ಉಡುಪಿ: 4 ಕೋ.ರೂ. ಔಷಧ ಬೇಡಿಕೆಜಿಲ್ಲೆಯಲ್ಲಿ ಪ್ರತಿ ತಿಂಗಳು ಸುಮಾರು 45 ಲ.ರೂ. (ಇದೇ ಬ್ರ್ಯಾಂಡ್ ಲೇಬಲ್ ಹೊಂದಿ ರುವ ಔಷಧಗಳಿಗೆ 4 ಕೋ.ರೂ) ಮೊತ್ತದ ಔಷಧ ಖರೀದಿಸಲಾಗುತ್ತಿದೆ. ವಾರ್ಷಿಕ 10 ಕೋ.ರೂ.ಗಳ ಔಷಧಕ್ಕೆ ಬೇಡಿಕೆಯಿದೆ. ಕುಂದಾಪುರದ ರೆಡ್‌ಕ್ರಾಸ್ ಮತ್ತು ಸದ್ಗುರು ಸೌಹಾರ್ದ ಸಹಕಾರಿ ಸಂಸ್ಥೆಗಳು ನಡೆಸುವ ಕೇಂದ್ರಗಳಲ್ಲಿ ಅತ್ಯಧಿಕ ಮಾರಾಟವಾಗುತ್ತದೆ.
ದ.ಕ. ಜಿಲ್ಲೆಯ ಹೆಚ್ಚಿನ ಜನೌಷಧ ಕೇಂದ್ರಗಳಿರುವುದು ಗ್ರಾಮೀಣ ಭಾಗದಲ್ಲಿ. ಪ್ರತಿ ತಿಂಗಳು 30 ಲ.ರೂ.ಗಳ ಔಷಧ ಖರೀದಿಸಲಾಗುತ್ತಿದೆ. ವಾರ್ಷಿಕ 6 ಕೋ.ರೂ.ಗಳ ಔಷಧಕ್ಕೆ ಬೇಡಿಕೆಯಿದೆ. ನಗರ ಪ್ರದೇಶದ ಚಂದ್ರಮೋಹನ್ ಕೇಂದ್ರದಲ್ಲಿ ನಿತ್ಯ 50 ಸಾವಿರ ರೂ. ಮೊತ್ತದ ಔಷಧ ಮಾರಾಟವಾಗುತ್ತಿವೆ. ಜಿಲ್ಲೆಯ 2 ಕೇಂದ್ರಕ್ಕೆ ನೋಟಿಸ್
ಜನೌಷಧವನ್ನು ಕಾಳಸಂತೆಯಲ್ಲಿ ಮಾರುವಂತಿಲ್ಲ. ಖರೀದಿ ಮತ್ತು ಮಾರಾಟ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನಡೆಯುವುದರಿಂದ ದುರುಪಯೋಗ ಅಸಾಧ್ಯ. ಜೆನರಿಕ್ ಅಲ್ಲದ ಔಷಧಗಳನ್ನು ನಿಗದಿಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದ್ದಕ್ಕಾಗಿ ಕಾಪು ಮತ್ತು ಶಿರಿಬಾಗಿಲು ಪಿಎಂಜೆ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ನೀಡಿ ಪರವಾನಿಗೆ ರದ್ದುಪಡಿಸಲಾಗಿದೆ.
Related Articles
ದಿಲ್ಲಿ ಮತ್ತು ಚೆನ್ನೈಗಳಲ್ಲಿ ಏಕಕಾಲಕ್ಕೆ 5 ಸಾವಿರ ಕೇಂದ್ರಗಳಿಗೆ ಔಷಧ ಪೂರೈಸುವ ಸಾಮರ್ಥ್ಯವುಳ್ಳ ಬೃಹತ್ ದಾಸ್ತಾನು ಘಟಕಗಳಿವೆ. ಉಡುಪಿಯ ಸದ್ಗುರು ಜನೌಷಧ ಕೇಂದ್ರಗಳು ನೇರವಾಗಿ ಸಂಗ್ರಹ ಘಟಕದಿಂದಲೇ ಖರೀದಿಸುತ್ತಿವೆ.
ರಾಜ್ಯದಲ್ಲಿ ಜನೌಷಧ ಪೂರೈಸಲು 2 ಸಂಸ್ಥೆಗಳಿಗೆ ಮಾತ್ರ ಬಿಪಿಪಿಐ ಪರವಾನಿಗೆ ನೀಡಿರುವುದರಿಂದ ಬೇಡಿಕೆಗೆ ತಕ್ಕಷ್ಟು ಪೂರೈಕೆ ಯಾಗುತ್ತಿಲ್ಲ. ದಿಲ್ಲಿ ಮತ್ತು ಚೆನ್ನೈ ಘಟಕಗಳಿಂದ ನೇರವಾಗಿ ತರಿಸಿಕೊಳ್ಳುವ ಕೇಂದ್ರಗಳಿಗೆ ಅಗತ್ಯವಿರುವಷ್ಟು ಪೂರೈಕೆಯಾಗುತ್ತಿದೆ.
Advertisement
ಕೇಂದ್ರದ ವಿಶೇಷತೆ ಏನು?ಜನೌಷಧ ಕೇಂದ್ರಗಳಲ್ಲಿ ಸಿಗುವ ಔಷಧಗಳ ಮೇಲೆ ಬ್ರ್ಯಾಂಡೆಡ್ ಕಂಪೆನಿಗಳ ಲೇಬಲ್ ಇರುವುದಿಲ್ಲ. ಆದರೆ ಅತ್ಯುತ್ತಮ ಗುಣಮಟ್ಟ ಹೊಂದಿವೆ. ಮಾರುಕಟ್ಟೆಯಲ್ಲಿ 100 ರೂ.ಗೆ ಸಿಗುವ ಔಷಧ ಈ ಕೇಂದ್ರಗಳಲ್ಲಿ ಕೇವಲ 10 ರೂ.ಗೆ ಸಿಗುತ್ತದೆ. ಪಿಎಂಜೆಯಲ್ಲಿ 800 ಬಗೆಯ ಔಷಧಗಳನ್ನು ಮಾರಾಟ ಮಾಡಲಾಗುತ್ತದೆ. ಪ್ರತಿಷ್ಠಿತ ಕಂಪೆನಿಗಳಿಂದ ಖರೀದಿ
ಬಿಪಿಪಿಐ ಸಂಸ್ಥೆಯು ದೇಶದ ಪ್ರತಿಷ್ಠಿತ 100 ಔಷಧ ತಯಾರಕ ಸಂಸ್ಥೆಗಳಿಂದ ಗುಣಮಟ್ಟ ಪರೀಕ್ಷಿಸಿಯೇ ಖರೀದಿ ಮಾಡುತ್ತದೆ. ದಾಸ್ತಾನನ್ನು ಪ್ರತಿ 10 ದಿನಗಳಿಗೊಮ್ಮೆ ಡ್ರಗ್ ಕಂಟ್ರೋಲರ್ ವಿಭಾಗ ಪರೀಕ್ಷೆಗೊಳಪಡಿಸುತ್ತದೆ. ಜನೌಷಧ ಕೇಂದ್ರಗಳಿಗೆ ಔಷಧ ಪೂರೈಕೆಯಲ್ಲಿ ಕೆಲವು ಸಮಸ್ಯೆಗಳಿವೆ, ಆದರೆ ಗುಣಮಟ್ಟದಲ್ಲಿಲ್ಲ. ಸಿರಿವಂತರೇ ಹೆಚ್ಚು !
ಬಡವರ ಅನುಕೂಲಕ್ಕಾಗಿ ಸ್ಥಾಪಿಸಿದ ಪಿಎಂಜೆ ಕೇಂದ್ರಗಳ ಲಾಭವನ್ನು ಶ್ರೀಮಂತರು ಪಡೆದುಕೊಳ್ಳುತ್ತಿದ್ದಾರೆ. ಬಡವರಿಗೆ ಇರುವ ಮಾಹಿತಿ ಕೊರತೆಯೇ ಇದಕ್ಕೆ ಕಾರಣ. ಗುಣಮಟ್ಟದ ಅರಿವಿರುವ ಶ್ರೀಮಂತರು ಜನೌಷಧ ಮಳಿಗೆಯಲ್ಲಿ ಖರೀದಿಸುತ್ತಿದ್ದಾರೆ. ಮೂರು ಅಂಶಗಳಿರುವ ಒಂದು ಔಷಧದ ಬಳಕೆಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಇದರಿಂದಾಗಿ ಪಿಎಂಜೆ ಗಳಲ್ಲಿ ಎರಡು ಅಂಶ ಸಂಯೋಜನೆಯಿರುವ ಔಷಧಗಳು ಮಾತ್ರ ಲಭ್ಯವಿವೆ. ಔಷಧ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಪಿಎಂಜೆ ಕೇಂದ್ರಗಳು ವಿತರಕರು ಮತ್ತು ಗ್ರಾಹಕರ ವಿಶ್ವಾಸ ಗಳಿಸಿವೆ.
–ಡಾ| ಅನಿಲಾ, ಜನೌಷಧ ನೋಡಲ್ ಅಧಿಕಾರಿ