Advertisement

ಉಡುಪಿ ಜಿಲ್ಲೆ :ಸಾವಿರ ದಾಟಿದ ಮಾದರಿ ಸಂಗ್ರಹ

12:25 AM Apr 24, 2020 | Sriram |

ಉಡುಪಿ: ಜಿಲ್ಲೆಯಲ್ಲಿ ಗುರುವಾರ 14 ಜನರ ಗಂಟಲ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು ಮಾದರಿಗಳ ಸಂಗ್ರಹ ಸಾವಿರ ಸಂಖ್ಯೆಯನ್ನು ದಾಟಿದೆ.

Advertisement

ಗುರುವಾರ ಬಂದ ಎಲ್ಲ 26 ವರದಿ ನೆಗೆಟಿವ್‌ ಆಗಿವೆ. ಇದುವರೆಗೆ 1,007 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. 98 ಮಾದರಿಗಳ ವರದಿ ಬರಬೇಕಾಗಿದೆ.

ಗುರುವಾರ 62 ಮಂದಿ ಹೆಸರು ನೋಂದಣಿ ಮಾಡಿಸಿದ್ದಾರೆ. 46 ಮಂದಿ 14 ದಿನಗಳ ನಿಗಾವಣೆ ಮುಗಿಸಿದ್ದು 709 ಮಂದಿ ನಿಗಾವಣೆಯಲ್ಲಿದ್ದಾರೆ. ಆರು ಜನರು ಆಸ್ಪತ್ರೆ ಕ್ವಾರಂಟೈನ್‌ಗೆ ಸೇರಿದ್ದು 32 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. 7 ಮಂದಿ ಆಸ್ಪತ್ರೆ ಐಸೊಲೇಶನ್‌ ವಾರ್ಡ್‌ಗೆ ಸೇರಿದ್ದು ಒಂಬತ್ತು ಮಂದಿ ಬಿಡುಗಡೆಗೊಂಡಿದ್ದಾರೆ. 50 ಮಂದಿ ವಾರ್ಡ್‌ನಲ್ಲಿದ್ದಾರೆ. ಭಟ್ಕಳದ ಗರ್ಭಿಣಿ ಗಂಟಲ ದ್ರವ ಮಾದರಿ ಸಂಗ್ರಹದ ವರದಿ ಇನ್ನೂ ಬಂದಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next