Advertisement

ಉಡುಪಿ ಜಿಲ್ಲಾ ಪೊಲೀಸ್‌: ಫೋನ್‌ ಇನ್‌ ಕಾರ್ಯಕ್ರಮ ಆರಂಭ

05:30 AM Aug 19, 2017 | |

ಉಡುಪಿ: ಉಡುಪಿ ಜಿಲ್ಲಾ ನೂತನ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಂಜೀವ ಎಂ. ಪಾಟೀಲ್‌ ಅವರು ಸಾರ್ವಜನಿಕರೊಂದಿಗೆ  ನೇರ ಸಂಪರ್ಕ ಸಾಧಿಸಿ ವಿಚಾರ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಿದಂತೆ ನೇರ ಫೋನ್‌-ಇನ್‌ ಕಾರ್ಯಕ್ರಮವು ಆ. 19ರಿಂದ ನಡೆಯಲಿದೆ. ಪ್ರತಿ ವಾರ  ಫೋನ್‌-ಇನ್‌ ಮಾಡಲು  ಎಸ್‌ಪಿಯವರು ನಿರ್ಧರಿಸಿದ್ದಾರೆ.

Advertisement

ಫೋನ್‌-ಇನ್‌ ಕಾರ್ಯಕ್ರಮಕ್ಕೆ ಕರೆ ಮಾಡಿದವರ ವಿವರಗಳನ್ನು ಗುಪ್ತವಾಗಿ ಇಡಲಾಗುವುದು. ಆ. 19ರ ಬೆಳಗ್ಗೆ 10ರಿಂದ 11 ಗಂಟೆಯವರೆಗೆ  ಫೋನ್‌-ಇನ್‌ ಕಾರ್ಯಕ್ರಮ ನಡೆಯಲಿದೆ. ಸಂಪರ್ಕಿಸಬೇಕಾದ ದೂ.ಸಂ.: 0820-2534777.

ಜನರು ಮಾಡಬೇಕದ್ದು 
– ಜನಸ್ನೇಹಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸಲಹೆ/ಸೂಚನೆ ಅಥವಾ ಮಾಹಿತಿ ನೀಡುವುದು.
– ಅರ್ಜಿ/ಪ್ರಕರಣಗಳ ಕುರಿತು ಮಾಹಿತಿ ನೀಡಬಹುದು.
– ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕೆಂದೇನಿಲ್ಲ. ಬದಲಾಗಿ ಅವರಿಂದ ಏನಾದರೂ ತಪ್ಪಾಗುತ್ತಿದ್ದಲ್ಲಿ ಮಾಹಿತಿ ನೀಡಿ.
– ನಿಮ್ಮ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ, ಅದನ್ನು ತಡೆಗಟ್ಟಲು ಏನು ಮಾಡಬಹುದು ಎನ್ನುವ ಮಾಹಿತಿ ನೀಡಿ.

Advertisement

Udayavani is now on Telegram. Click here to join our channel and stay updated with the latest news.

Next