Advertisement
ಬೈಂದೂರು ತಾ| ಶಿರೂರು ಗ್ರಾಮದ ದುರ್ಗಿ ನಿವಾಸಿ ರಾಮ ಪೂಜಾರಿ ಅವರ ಮನೆಗೆ ಮರ ಬಿದ್ದು 30 ಸಾವಿರ ರೂ.ಗಳಷ್ಟು ನಷ್ಟ ಉಂಟಾಗಿದೆ. ಕೊಲ್ಲೂರು ಗ್ರಾಮದ ನಿವಾಸಿ ಸವಿತಾ ಅವರ ಮನೆಗೆ ಮರ ಬಿದ್ದು ಸುಮಾರು.1.5 ಲಕ್ಷ ರೂ. ನಷ್ಟ ಆಗಿದೆ. ಕೊಲ್ಲೂರು ಗ್ರಾಮದ ನಿವಾಸಿ ಯಶೋದಾ ಅವರ ಮನೆಗೂ ಹಾನಿಯಾಗಿದ್ದು, 25 ಸಾವಿರ ರೂ. ನಷ್ಟವಾಗಿದೆ.
Related Articles
ಕುಂದಾಪುರ, ಬೈಂದೂರು ಹಾಗೂ ಕುಂದಾಪುರ ತಾಲೂಕಿನೆಲ್ಲೆಡೆ ಬುಧವಾರ ಭಾರೀ ಮಳೆಯಾಗಿದ್ದು, ಹಲವೆಡೆಗಳಲ್ಲಿ ಗದ್ದೆಗಳು ಜಲಾವೃತಗೊಂಡಿದ್ದು, ಕೆಲವು ಕಡೆ ಕೃತಕ ನೆರೆ ಸೃಷ್ಟಿಯಾಗಿದೆ.
Advertisement
ಕುಂದಾಪುರ, ತಲ್ಲೂರು, ಹೆಮ್ಮಾಡಿ, ಗೋಳಿಯಂಗಡಿ, ಬೆಳ್ವೆ, ಗಂಗೊಳ್ಳಿ, ತ್ರಾಸಿ, ಮರವಂತೆ, ನಾವುಂದ ಸೇರಿದಂತೆ ಎಲ್ಲ ಕಡೆಗಳಲ್ಲಿ ಮಂಗಳವಾರ ರಾತ್ರಿಯಿಂದ ಬುಧ ವಾರವೂ ಉತ್ತಮ ಮಳೆಯಾಗಿದೆ.
ಗದ್ದೆಗಳು ಜಲಾವೃತಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ನಾವುಂದ, ಬಡಾಕೆರೆ, ಪಡುಕೋಣೆ, ಅರೆಹೊಳೆ, ಸೇನಾಪುರ, ಕೆಲಬದಿಯ ಹಲವು ಮನೆಗಳ ಆಸುಪಾಸಿನಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ನಾವುಂದ, ಚಿಕ್ಕಳ್ಳಿ, ಕಡಿಕೆ, ನಾಡ ಮತ್ತಿತರ ಕಡೆಗಳ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಈ ಪರಿಸರದಲ್ಲಿ 40-50 ಮಂದಿ ಕೃಷಿಕರ ಎಕರೆಗಟ್ಟಲೆ ಗದ್ದೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಹೆಚ್ಚಿನ ಗದ್ದೆಗಳಲ್ಲಿ ಈಗಷ್ಟೇ ನಾಟಿ ಕಾರ್ಯ ಮುಗಿದಿತ್ತು. ಕಡಲ್ಕೊರೆತ
ಕುಂದಾಪುರ, ಬೈಂದೂರು ಭಾಗದ ವಾರಾಹಿ, ಸೌಪರ್ಣಿಕಾ, ಕುಬ್ಜಾ, ಚಕ್ರ, ಸುಮನಾವತಿ ನದಿಗಳು ತುಂಬಿ ಹರಿಯುತ್ತಿದೆ. ಕೋಡಿ, ಗಂಗೊಳ್ಳಿ, ಮರವಂತೆ, ತ್ರಾಸಿ ಭಾಗದ ಕಡಲ ತೀರದಲ್ಲಿ ಕಡಲಬ್ಬರ ಜೋರಾಗಿದ್ದು, ಕಂಚುಗೋಡು, ಮರವಂತೆ ಮತ್ತಿತರ ಕಡೆಗಳಲ್ಲಿ ಕಡಲ್ಕೊರೆತ ಉಂಟಾಗಿದ್ದು, ತೀರದ ಹತ್ತಾರು ಮನೆಗಳ ನಿವಾಸಿಗಳು ಆತಂಕದಲ್ಲಿದ್ದಾರೆ. ಉಕ್ಕಿ ಹರಿಯುತ್ತಿರುವ
ಸೌಪರ್ಣಿಕ ನದಿ, ನೆರೆ ಭೀತಿ
ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳಾದ ಕೊಲ್ಲೂರು, ಜಡ್ಕಲ್, ಮುದೂರು ಪರಿಸರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಆ ಭಾಗದ ನದಿಗಳು ಉಕ್ಕಿ ಹರಿಯಲು ಆರಂಭಿಸಿದೆ. ಸೌಪರ್ಣಿಕ ಹಾಗೂ ಬೆಳ್ಕಲ್ ನದಿಗಳು ತುಂಬಿ ಹರಿಯುತ್ತಿದ್ದು ನೀರಿನ ಮಟ್ಟ ದಿನೆ ದಿನೆ ಏರುತ್ತಿದೆ. ಸೌಪರ್ಣಿಕ ನದಿ ನೀರು ಅಪಾಯ ಮಟ್ಟಕ್ಕೆ ಏರಿದ್ದು, ಕಾಶಿ ನದಿಯ ಪರಿಸರದಲ್ಲಿ ಜಲಾವೃತಗೊಳ್ಳುವ ಭೀತಿ ಇದೆ.ಇದೇ ರೀತಿಯಲ್ಲಿ ಮಳೆ ಮುಂದು ವರಿದಲ್ಲಿ ಇಲ್ಲಿನ ಸಂಪರ್ಕ ರಸ್ತೆ ಕಡಿತಗೊಳ್ಳುವ ಸಾಧ್ಯತೆ ಇದೆ. ಬಸ್ರೂರು
ಬಳ್ಕೂರು, ಬಸ್ರೂರು, ಕಂದಾವರ, ಜಪ್ತಿ, ಕೋಣಿ, ಆನಗಳ್ಳಿ, ಹಟ್ಟಿಕುದ್ರು, ಕಂಡೂÉರು, ಗುಲ್ವಾಡಿ ಪ್ರದೇಶಗಳಲ್ಲಿ ಬುಧವಾರವೂ ಮಳೆ ನಿರಂತರವಾಗಿ ಮುಂದುವರಿದಿದೆ. ಚರಂಡಿಯಲ್ಲಿ ಹೂಳು ತುಂಬಿ ಹರಿಯದ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಳೆ ವಿವರ
ಉಡುಪಿ/ ಕುಂದಾಪುರ:ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಕೆಲವೆಡೆ ಉತ್ತಮ ಮಳೆಯಾಗಿದ್ದು ಬುಧವಾರ ಹಗಲು ಕೂಡಾ ಮಳೆಯಾಗಿದೆ. ಬುಧವಾರ ಬೆಳಗ್ಗೆವರೆಗೆ ವಿವಿಧೆಡೆ ಬಿದ್ದ ಮಳೆ ವಿವರ ಮಿ.ಮೀ.ಗಳಲ್ಲಿ ಹೀಗಿದೆ; ಕಾಪು 69, ಆಲೂರು 174, ನಾಡ 100, ನಾವುಂದ 65, ಕಾಳಾವರ 133, ಶಂಕರನಾರಾಯಣ 116, ಬೊಮ್ಮರಬೆಟ್ಟು 76, ಕುಕ್ಕುಂದೂರು 125, ಮರ್ಣೆ 106 , ಯರ್ಲಪಾಡಿ 64, ಯಡ್ತಾಡಿ 151, ಇನ್ನಾ 124, ಕಾಂತಾವರ 70, ಮಿಯಾರು 140, ಮುಂಡ್ಕೂರು 99, ನಲ್ಲೂರು 118, ಪಳ್ಳಿ 74, ರೆಂಜಾಳ 135, ಸಾಣೂರು 97, ಬಿಜೂರು 74, ಹೇರೂರು 78, ಕಾಲೊ¤àಡು 112, ಕಂಬದಕೋಣೆ 84, ಕಿರಿಮಂಜೇಶ್ವರ 118, ಮರವಂತೆ 68, ಪಡುವರಿ 76, ಯಡ್ತರೆ 88, ಆನಗಳ್ಳಿ 119, ಬಳ್ಕೂರು 180, ಬಸೂÅರು 107, ಬೇಳೂರು 133, ಹಂಗಳೂರು 117, ಹಟ್ಟಿಯಂಗಡಿ 107, ಹೆಂಗವಳ್ಳಿ 188, ಕೋಣಿ 146, ಕುಂಭಾಶಿ 104, ಮೊಳಹಳ್ಳಿ 150, ಚಿತ್ತೂರು 141, ಗಂಗೊಳ್ಳಿ 65, ಗುಜ್ಜಾಡಿ 54 , ಹಕ್ಲಾಡಿ 91, ಹೆಮ್ಮಾಡಿ 67, ಆವರ್ಸೆ 176, ಬಾಕೂìರು 154, ಚಾಂತಾರು 135, ಹಂದಾಡಿ 144, ಹಾವಂಜೆ 111, ಕೆಮ್ಮಣ್ಣು 82,ಕುಕ್ಕೆಹಳ್ಳಿ 89, ಕುಂಜಾಲು130, ಬಾಡ 82, ಹೆಜಮಾಡಿ 86, ಕಟಪಾಡಿ 67, ಕೋಟೆ 69, ಕುರ್ಕಾಲು 93, ಕುತ್ಯಾರು 78, ಮಜೂರು 73, ಮಲ್ಲಾರು 77, ಪಡುಬಿದ್ರಿ 90, ಐರೋಡಿ 141, ಕಾಡೂರು 160, ಕೋಡಿ 167, ಅಂಬಲಪಾಡಿ 68, ಬಡಾನಿಡಿಯೂರು 99, ಕಡೆಕಾರ್ 85, ಮಣಿಪುರ 83, ತೆಂಕನಿಡಿಯೂರು 64, ಉದ್ಯಾವರ 74, ಕಟ್ ಬೇಲ್ತೂರು 72. ರಸ್ತೆ ಮಧ್ಯೆ ಭಾರೀ ಹೊಂಡ
ಉಡುಪಿ: ರಾತ್ರಿ ಸುರಿದ ಭಾರೀ ಮಳೆಗೆಮಳೆ ನೀರು ಇಳಿಜಾರು ಪ್ರದೇಶಗಳಿಗೆ ನುಗ್ಗಿದ ಪರಿಣಾಮ ಹಲವೆಡೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಚರಂಡಿ ಸಮಸ್ಯೆಯಿಂದ ಮಳೆ ನೀರು ರಸ್ತೆಗೆ ಹರಿದಿತ್ತು. ಉಡುಪಿ-ಮಣಿಪಾಲ ರಾ.ಹೆದ್ದಾರಿ ನಡುವೆ ಹೆದ್ದಾರಿಯನ್ನು ಅಲೆವೂರು ಭಾಗದಿಂದ ಒಳ ರಸ್ತೆ ಮೂಲಕ ಸಂಪರ್ಕಿಸುವ ಪ್ರಧಾನ ಅಂಚೆ ಕಚೇರಿ ಮುಂಭಾಗದ ಜಂಕ್ಷನ್‌ನಲ್ಲಿ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು, ಮಳೆಗೆ ಹೊಂಡದಲ್ಲಿ ನೀರು ತುಂಬಿ ರಸ್ತೆ ಮಧ್ಯೆ ಈಜುಕೊಳ ಸೃಷ್ಟಿಯಾಗಿದೆ. ಇಲ್ಲಿ ವಾಹನ ಸವಾರರು, ಪಾದಚಾರಿಗಳು ತೆರಳುವಾಗ ತೊಂದರೆ ಅನುಭವಿಸು ತ್ತಿದ್ದಾರೆ. ಮಳೆ ಬಂದಾಗ ಹೊಂಡದಲ್ಲಿ ನೀರು ನಿಂತು ಅಪಘಾತ ಸಂಭವಿಸುವ ಅಪಾಯವಿರುವುದರಿಂದ ಈ ಹೊಂಡಕ್ಕೆ ಮುಕ್ತಿ ನೀಡುವ ಅಗತ್ಯವಿದೆ. ಇನ್ನು ಹಲವು ಕಡೆಗಳಲ್ಲಿ ರಸ್ತೆಗಳ ಮಧ್ಯೆ ಹೊಂಡ ಸೃಷ್ಟಿಯಾಗಿ ಸಂಚಾರದಲ್ಲಿ ವ್ಯತ್ಯಯಗಳಾದ ಬಗ್ಗೆ ವರದಿಯಾಗಿದೆ.