Advertisement
ಕಳೆದ ವಾರ ಮರವಂತೆಯ ಬೀಚ್‌ನಲ್ಲಿ ಪ್ರವಾಸಿ ಯುವಕನೊಬ್ಬ ಸಮುದ್ರಕ್ಕೆ ಬೆನ್ನು ಹಾಕಿನ ಫೋಟೋ ತೆಗೆಯಲು ಹೋಗಿ ಅಲೆಗಳ ಅಬ್ಬರಕ್ಕೆ ಕೊಚ್ಚಿ, ಪ್ರಾಣ ಕಳೆದುಕೊಂಡರೆ, ಇದೇ ಸೋಮವಾರ ಕೊಲ್ಲೂರು ಸಮೀಪದ ಅರಿಶಿನ ಗುಂಡಿಯ ಜಲಪಾತದಲ್ಲಿ ಭದ್ರಾವತಿ ಮೂಲದ ಯುವಕನೊಬ್ಬ ಜಾರುವ ಕಲ್ಲು ಬಂಡೆಗಳಲ್ಲಿ ನಿಂತು ವಿಡಿಯೋ ಮಾಡುತ್ತಿದ್ದ ವೇಳೆ ಕಾಲು ಜಾರಿ ನೀರುಪಾಲಾದ ದುರ್ಘಟನೆ ಸಂಭವಿಸಿದೆ.ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಭಾಗದ ಪ್ರವಾಸಿ ತಾಣಗಳಲ್ಲಿ ಮಳೆಗಾಲದಲ್ಲಿ ಕಾಣ ಸಿಗುವ ಸೊಬಗು ಬೇರೆ ಯಾವತ್ತೂ ಕಾಣ ಸಿಗದು. ಇಲ್ಲಿನ ಜಲಪಾತಗಳು, ಕಡಲಿನ ಸೌಂದರ್ಯಕ್ಕೆ ಮನಸೋತು ಬೆಂಗಳೂರು, ಮೈಸೂರು, ಉತ್ತರ ಕನ್ನಡ ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಕುಂದಾಪುರ ಭಾಗದ ಪ್ರವಾಸಿ ಕೇಂದ್ರಗಳಿಗೆ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಆದರೆ ಬೀಚ್‌ಗಳು, ಜಲಪಾತಗಳಲ್ಲಿ ಮಳೆಗಾಲದಲ್ಲಿ ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ಜಲಪಾತ ಮಾತ್ರವಲ್ಲ ಬೆಟ್ಟಗಳಿಗೆ ಚಾರಣ ಮಾಡುವವರೂ ಸಹ ಮುಂಜಾಗ್ರತೆ ವಹಿಸಲೇಬೇಕು. ಆದರೆ ಜಲಪಾತದ ನೀರಲ್ಲಿ ಮೋಜಿನಾಟ, ಮೊಬೈಲ್ ಫೋನ್‌ಗಳಲ್ಲಿ ಅಪಾಯಕಾರಿ ವೀಡಿಯೋ, ಫೋಟೋ ಕ್ಲಿಕ್ಕಿಸುವುದು, ಸಾಮಾಜಿಕ ಮಾಧ್ಯಮಗಳಿಗೆ ವೀಡಿಯೋ ಮಾಡುವುದೂ ಸಹ ಅಷ್ಟೇ ಅಪಾಯಕಾರಿ. ಸ್ವಲ್ಪ ಮೈ ಮರೆತರೂ ಪ್ರಾಣಕ್ಕೆ ಆಪತ್ತು ತರುವ ಅಪಾಯವೂ ಇದೆ.
– ಹೆಬ್ರಿ ತಾಲೂಕಿನಲ್ಲಿರುವ ಜೋಮ್ಲು, ಕೂಡ್ಲು ಜಲಪಾತಗಳಲ್ಲಿ ಮಳೆಗಾಲದಲ್ಲಿ ಇಳಿಯುವುದಕ್ಕೆ ನಿಷೇಧ ಹೇರಲಾಗಿದೆ.
-ಕುಂದಾಪುರ ತಾಲೂಕಿನ ಹೊಸಂಗಡಿ ಸಮೀಪದ ತೊಂಬಟ್ಟು-ಇರ್ಕಿಗದ್ದೆ ಜಲಪಾತಗಳಿಗೆ ವೀಕ್ಷಣೆಗೆ ಅಷ್ಟೇ ಅವಕಾಶವಿದ್ದು, ನೀರಿಗೆ ಇಳಿಯುವಂತಿಲ್ಲ. ಕಲ್ಲು ಬಂಡೆಗಳು ಜಾರುವುದರಿಂದ ಆದಷ್ಟು ಮುನ್ನೆಚ್ಚರಿಕೆ ವಹಿಸುವುದು ಆವಶ್ಯಕ.
– ಕೊಡಚಾದ್ರಿಯಿಂದ ಹರಿಯುವ ಬೆಳ್ಕಲ್‌ತೀರ್ಥ ಸಂಪರ್ಕಿಸುವ ಹಾದಿಯೇ ದುರ್ಗಮವಾಗಿದ್ದು, ಇಲ್ಲಿಯೂ ದೂರದಿಂದಲೇ ನೋಡಿ ಆಸ್ವಾದಿಸಿದರೆ ಕ್ಷೇಮ.
– ಕೊಲ್ಲೂರು ಸಮೀಪದ ಮೂಕಾಂಬಿಕಾ ಅಭಯಾರಣ್ಯದೊಳಗೆ ಬರುವ ಅರಿಶಿನ ಗುಂಡಿ ಜಲಪಾತಕ್ಕೆ ಪ್ರವೇಶಕ್ಕೆ ಅರಣ್ಯ ಇಲಾಖೆಯವರು ನಿಷೇಧವನ್ನು ಹೇರಿದ್ದಾರೆ. ಆದರೂ ಇಲ್ಲಿಗೆ ಬೇರೆ ಬೇರೆ ದಾರಿಗಳ ಮೂಲಕ ಪ್ರವಾಸಿಗರು ಬರುತ್ತಾರೆ. ಇದರಿಂದ ಸಮಸ್ಯೆಯಾಗುತ್ತಿದೆ.
– ಶಿರೂರು ಸಮೀಪದ ತೂದಳ್ಳಿ ಹಾಗೂ ಕೋಸಳ್ಳಿ ಜಲಪಾತದಲ್ಲಿ ಈ ಹಿಂದೆ ದುರ್ಘಟನೆಗಳು ಸಂಭವಿಸಿದ್ದು, ಇಲ್ಲಿಯೂ ನೀರಿಗೆ ಇಳಿಯುವುದಕ್ಕೆ ನಿಷೇಧವಿದೆ.
– ಬಾಳೆಬರೆ, ನಾಗೋಡಿ ಘಾಟಿಗಳಲ್ಲಿ ಕಾಣ ಸಿಗುವ ಫಾಲ್ಸ್ ಗಳನ್ನು ಮಾತ್ರ ಹತ್ತಿರದಿಂದ ನೋಡಿ ಆನಂದಿಸಬಹುದು. ಇಲ್ಲಿ ಮೇಲೆ ಕಲ್ಲು – ಬಂಡೆಗಳಿಗೆ ಹತ್ತುವುದು ಅಸಾಧ್ಯ.
– ತ್ರಾಸಿ – ಮರವಂತೆ ಬೀಚ್ ಹೆಚ್ಚು ಆಳವಿರುವುದರಿಂದ ಇಲ್ಲಿ ಕಡಲಿಗೆ ಇಳಿಯುವುದಾಗಲಿ, ಅಪಾಯದ ಮಟ್ಟವನ್ನು ದಾಟಿ ಮುಂದೆ ಹೋಗಿ ಕಲ್ಲು ಬಂಡೆಗಳು ಜಾರುವುದರಿಂದ ಅದರ ಮೇಲೆ ನಿಂತು ಸೆಲ್ಫಿ ತೆಗೆಯುವುದನ್ನು ನಿರ್ಬಂಧಿಸಲಾಗಿದೆ. ಸುರಕ್ಷತೆಗೆ ಆದ್ಯತೆ ನೀಡಿ
-ಅರಶಿನಗುಂಡಿ ಪ್ರವಾಸಿ ತಾಣವಾಗಿದ್ದರೂ, ಕಾಡುಪ್ರದೇಶವಾದ ಇಲ್ಲಿ ಮಳೆಗಾಲದ ಆರಂಭದಿಂದ ಮುಗಿಯುವ ತನಕ ಮಳೆ ಸಾಮಾನ್ಯ. ಆಗ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ನಿರ್ಬಂಧ ಹೇರುವುದು ಸೂಕ್ತ.
-ಪೋಲಿಸ್ ಹಾಗೂ ಅರಣ್ಯ ಇಲಾಖೆಯವರು ಕಾವಲು ಪಡೆ ನೇಮಿಸಿ ಪ್ರದೇಶದ ಸುತ್ತಮುತ್ತ ತಡೆಬೇಲಿ ನಿರ್ಮಿಸುವುದರಿಂದ ಎದುರಾಗುವ ದುರಂತವನ್ನು ತಪ್ಪಿಸಲು ಸಾಧ್ಯ.
Related Articles
ಅತ್ಯಂತ ಸುರಕ್ಷಿತ
ಕೆಲವು ಜಲಪಾತಗಳಲ್ಲಿ ನಿಷೇಧವಿಲ್ಲದಿದ್ದರೂ, ನೀರಿಗೆ ಇಳಿಯದಿರುವುದೇ ಉತ್ತಮ ಹಾಗೂ ಸುರಕ್ಷಿತ. ಈಜಲು ಬರುವವರೂ ಸಹ ನೀರಿನ ಆಳ ತಿಳಿಯದಿದ್ದರೆ ಅಥವಾ ನೀರಿನೊಳಗೆ ಕಲ್ಲುಗಳಿರುವುದು ತಿಳಿಯದಿದ್ದರೆ ಕಷ್ಟ. ಕಲ್ಲು ಬಂಡೆಗಳು ಪಾಚಿಗಟ್ಟಿ ಜಾರುತ್ತಿರುವುದರಿಂದ ಕಾಲು ಜಾರಿ ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ಕಲ್ಲು ಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ದುಸ್ಸಾಹಸಕ್ಕೆ ಹೋಗಲೇಬಾರದು. ದೂರದಿಂದಲೇ ನೋಡಿ ಖುಷಿ ಪಡುವುದಷ್ಟೆ ಒಳ್ಳೆಯದು. ಇಂತಹ ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
Advertisement
ದೇವರಗುಂಡಿ ಜಲಪಾತಸುಳ್ಯದ ತೊಡಿಕಾನ ಬಳಿಯ ದೇವರಗುಂಡಿ ಜಲಪಾತ ಪ್ರವಾಸಿ ತಾಣದ ಜೊತೆಗೆ ಪಾವಿತ್ರತೆಯ ಸ್ಥಳವೂ ಹೌದು. ಇಲ್ಲಿಗೆ ಧಾರ್ಮಿಕ ಹಿನ್ನಲೆಯೂ ಇದೆ. ಜಲಪಾತ ವೀಕ್ಷಣೆಗೆ ಮಳೆಗಾಲದಲ್ಲಿಯೇ ತುಸು ಹೆಚ್ಚು. ಇಲ್ಲಿನ ಜಲಪಾಲದ ಕೆಳಗೆ ಸುಳಿಯಿದ್ದು, ಅಪಾಯಕಾರಿ ಸ್ಥಳ. ಇಲ್ಲಿ ನೀರಿಗೆ ಇಳಿಯುವುದು ಅಪಾಯಕಾರಿ. ಇಲ್ಲಿ ಈ ಹಿಂದೆ ನೀರಿಗೆ ಇಳಿದು ಮೂವರು ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೆಳ್ತಂಗಡಿ: ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಬಂಡಾಜೆ ಜಲಪಾತ ಆಕರ್ಷಕವಾಗಿದ್ದು 200 ಅಡಿಗಿಂತ ಮೇಲಿಂದ ಧುಮ್ಮಿಕ್ಕಿ ಹರಿಯು ತ್ತಿದೆ. ಕಡಿರುದ್ಯಾವರದಿಂದ ಮುಂದಕ್ಕೆ ಸಾಗಿ ಬಳಿಕ, 9 ಕಿ.ಮೀ. ಚಾರಣ ನಡೆಸಿ ತೆರಳಬೇಕಿದೆ. ಅಪಾಯಕಾರಿ ಜÇಪಾತವಾದ ಕಾರಣ ಎಚ್ಚರಿಕೆ ಅತೀ ಆವಶ್ಯಕ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ ಬಳಿಯ ಎರ್ಮಾಯಿ ಜಲಪಾತ. ಸುಮಾರು 120 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತ ಪ್ರಕೃತಿ ಪ್ರಿಯರ ಸುಂದರ ತಾಣವೂ ಆಗಿದೆ. ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರು ವುದರಿಂದ ಕಾಡು ರಸ್ತೆಯ ಮೂಲಕ ಈ ಜಲಪಾತವನ್ನು ನೋಡಲು ಸಾಗ ಬೇಕಿದೆ. ರಾಜ್ಯಾದ್ಯಂತ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಪಾಯ ಸಂಭವಿಸಿದಲ್ಲಿ
ಸಂಪರ್ಕ ಸಂಖ್ಯೆ
101 (ಅಗ್ನಿಶಾಮಕ, 112(ಪೊಲೀಸ್)